ವೈಷ್ಣವಿ ಗೌಡ ಮದುವೆಗೆ ಕೋಟಿಗಟ್ಟಲೆ ಖರ್ಚು, ಸೀರಿಯಲ್ ನಲ್ಲಿ ದುಡಿದ ಹಣವೆಲ್ಲ ಮದುವೆಗೆ ಸುರಿದ ವೈಷ್ಣವಿ
Jun 7, 2025, 20:54 IST
|

ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲವು ವಾರಗಳ ಹಿಂದೆ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮದುವೆಗೆ ಸಕಲ ಸಿದ್ಧತೆ ನಡೆದಿದೆ. ಈಗಾಗಲೇ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಅವರ ಮನೆಯಲ್ಲಿ ವಿವಾಹಪೂರ್ವ ಶಾಸ್ತ್ರಗಳು ಆರಂಭ ಆಗಿವೆ. ವೈಷ್ಣವಿ ಗೌಡ ಅವರು ಹಳದಿ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ವೈಷ್ಣವಿ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಹಲವು ವರ್ಷಗಳಿಂದ ವೈಷ್ಣವಿ ಗೌಡ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸೀರಿಯಲ್ ಮತ್ತು ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಕೂಡ ವೈಷ್ಣವಿ ಗೌಡ ಅವರು ಗಮನ ಸೆಳೆದರು. ನಿಮ್ಮ ಮದುವೆ ಯಾವಾಗ’ ಎಂಬ ಪ್ರಶ್ನೆ ಅವರಿಗೆ ಆಗಾಗ ಕೇಳಿಬರುತ್ತಿತ್ತು. ಅದಕ್ಕೆ ಈಗ ಸಮಯ ಬಂದಿದೆ. ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಏರ್ ಫೋರ್ಸ್ನಲ್ಲಿ ಅನುಕೂಲ್ ಮಿಶ್ರಾ ಅವರು ಕೆಲಸ ಮಾಡುತ್ತಾರೆ. ಅವರು ಉತ್ತರ ಭಾರತದ ಛತ್ತಿಸ್ಗಡದವರು. ಅಂದಹಾಗೆ, ಇದು ಅರೇಂಜ್ ಮ್ಯಾರೇಜ್. ಕುಟುಂಬದವರೇ ಮಾತುಕಥೆ ಮಾಡಿ ನಿಶ್ಚಯಿಸಿದ ಮದುವೆ. ಈ ಮೊದಲು ವೈಷ್ಣವಿ ಅವರಿಗೆ ನೂರಾರು ಪ್ರಪೋಸಲ್ಗಳು ಬಂದಿದ್ದವು. ಅಂತಿಮವಾಗಿ ಅವರು ಅನುಕೂಲ್ ಮಿಶ್ರಾ ಜೊತೆ ಮದುವೆ ಆಗಲು ನಿರ್ಧರಿಸಿದರು.
ಕಿರುತೆರೆಯಲ್ಲಿ ವೈಷ್ಣವಿ ಗೌಡ ಅವರಿಗೆ ತುಂಬ ಬೇಡಿಕೆ ಇದೆ. ಮದುವೆ ಬಳಿಕ ಕೂಡ ವೈಷ್ಣವಿ ಗೌಡ ಅವರು ನಟನೆ ಮುಂದುವರಿಸುವುದಾಗಿ ಹೇಳಿದ್ದಾರೆ. ಅವರ ಈ ಆಸೆಗೆ ಅನುಕೂಲ್ ಮಿಶ್ರಾ ಕೂಡ ಬೆಂಬಲ ಸೂಚಿಸಿದ್ದಾರೆ.ವೈಷ್ಣವಿ ಗೌಡ ಅವರಿಗೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ. ಮದುವೆಗೆ ಅವರೆಲ್ಲರೂ ಹಾಜರಿ ಹಾಕಲಿದ್ದಾರೆ. ಈಗ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗುತ್ತಿವೆ. ಕೋಟಿ ಕೋಟಿ ಹಣ ಖರ್ಚು ಮಾಡಿ ಧಾಮ್ ಧೂಮ್ ಎಂದು ಮದುವೆ ಆಗುತ್ತಿದ್ದಾರೆ.