ನಾನು ತಮಿಳು ಕಲ್ತಿದ್ದೀನಿ ಓದಿದ್ದೀನಿ ಎಂದ ಶಿವಣ್ಣನ ಮಾತಿಗೆ ಕನ್ನಡಿಗರ ರಿಯಾಕ್ಷನ್ ಹೇಗಿತ್ತು ಗೊತ್ತಾ
ಕಾಲಿವುಡ್‌ನ ಜೈಲರ್ ಸಿನಿಮಾ ನೋಡುಗರಿಂದ ಅಭೂತಪೂರ್ವ ಮೆಚ್ಚುಗೆ ಪಡೆದುಕೊಂಡಿದೆ. ನೆಚ್ಚಿನ ಸೂಪರ್‌ಸ್ಟಾರ್ ರಜಿನಿಕಾಂತ್ ಅವರ ಎವರ್‌ಗ್ರೀನ್ ಮ್ಯಾನರಿಸಂಗೆ ಫಿದಾ ಸಿನಿಮಾ ಪ್ರೇಕ್ಷಕರು, ಚಿತ್ರದಲ್ಲಿನ ಸಣ್ಣ ಸಣ್ಣ ಪಾತ್ರವನ್ನೂ ಆಸ್ವಾದಿಸುತ್ತಿದ್ದಾರೆ. ಅದರಲ್ಲೂ ತಮಿಳಿಗರ ಮತ್ತು ಇತರೇ ಭಾಷಿಕ ಪ್ರೇಕ್ಷಕರನ್ನು ಹೆಚ್ಚು ಸೆಳೆದಿದ್ದು ಒನ್ ಅಂಡ್ ಓನ್ಲಿ ಶಿವರಾಜ್‌ಕುಮಾರ್.
ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಪಂಚೆಯಲ್ಲಿಯೇ ಎಂಟ್ರಿಯಾಗುವ ಶಿವಣ್ಣನ ಗತ್ತು, ಗಮತ್ತಿಗೆ ನೋಡುಗರು ಥ್ರಿಲ್ ಆಗಿದ್ದಾರೆ. ಶಿವಣ್ಣನ ನಟನಗೆ ಹೀಗಿರುತ್ತಾ? ಎಂದು ಉದ್ಗರಿಸಿದವರೇ ಹೆಚ್ಚು. ಆ ಮಟ್ಟದ ಸಂಚಲನ ಇದೀಗ ಕಾಲಿವುಡ್ ಸಿನಿಮಾರಂಗದಲ್ಲಿ ಸೃಷ್ಟಿಯಾಗಿದೆ. ಯಾವತ್ತೂ ಶಿವಣ್ಣನ ಕನ್ನಡ ಸಿನಿಮಾ ನೋಡದ ಅಲ್ಲಿನ ಸಿನಿಮಾ ಪ್ರೇಕ್ಷಕರು, ಇನ್ಮೇನೆ ಶಿವಣ್ಣನ ಸಿನಿಮಾ ನೋಡುವುದಾಗಿಯೂ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಶಿವಣ್ಣ ಕಲಿತಿದ್ದೆಲ್ಲ ಚೆನ್ನೈ ಅಲ್ಲಿಯೇ ಆಗುರುವುದರಿಂದ ಅವರಿಗೆ ಚೆನ್ನಾಗಿಯೇ ತಮಿಳು ಮಾತನಾಡಲು ಓದಲು ಹಾಗೂ ಬರೆಯಲು ಬರುತ್ತದೆ. ಹಾಗಾಗಿ ಇತ್ತೀಚಿನ ಸಂದರ್ಶನ ಒಂದರಲ್ಲಿ ಶಿವಣ್ಣ ನಾನು ತಮಿಳು ಕಲ್ತಿದೀನಿ ಎಂದಿದ್ದಾರೆ. ಇನ್ನು ಜೈಲರ್ ಸಿನಿಮಾದ ನಂತರ ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಾಜಿ ಅಳಿಯ ಧನುಷ್ ಅಭಿನಯದ ಸಿನಿಮಾವೊಂದರಲ್ಲಿ ಶಿವಣ್ಣ ನಟಿಸುತ್ತಿದ್ದಾರೆ ಎಂಬ ಮಾತು ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿದೆ. ಧನುಷ್, ಕ್ಯಾಪ್ಟನ್ ಮಿಲ್ಲರ್ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದು ಈ ಬಿಗ್ ಬಜೆಟ್ ಸಿನಿಮಾವನ್ನು ಅರುಣ್ ಮಹೇಶ್ವರನ್ ನಿರ್ದೇಶಿಸುತ್ತಿದ್ದಾರೆ. ಸ್ವಾತಂತ್ರ್ಯಪೂರ್ವ ಕಥೆಯನ್ನು ಹೊಂದಿರುವಈ ಸಿನಿಮಾ ತಮಿಳಿನ ಜೊತೆ ತೆಲುಗು ಹಾಗೂ ಕನ್ನಡದಲ್ಲಿ ಕೂಡಾ ತಯಾರಾಗುತ್ತಿದ್ದು ಆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ಶಿವಣ್ಣ ಅವರನ್ನು ಕೇಳಲಾಗಿದೆ ಎನ್ನಲಾಗಿದೆ.
ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಸಂದೀಪ್ ಕಿಶನ್, ಪ್ರಿಯಾಂಕಾ ಅರುಳ್ ಮೋಹನ್ ಕೂಡಾ ನಟಿಸುತ್ತಿದ್ದಾರೆ. ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ ಬ್ಯಾನರ್ ಅಡಿ ಅರುಣ್ ಮಹೇಶ್ವರನ್ ನಿರ್ದೇಶಿಸುತ್ತಿದ್ದಾರೆ. ಶಿವಣ್ಣ ಸಿನಿಮಾ ಕಥೆ ಕೇಳಿದ್ದಾರಂತೆ. ಒಂದು ವೇಳೆ ಶಿವಣ್ಣ ಈ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟರೆ ಮತ್ತೊಂದು ತಮಿಳು ಸಿನಿಮಾದಲ್ಲಿ ಅವರನ್ನು ನೋಡಬಹುದು. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಎಲ್ಲಾ ಓಕೆ ಆದರೆ ಶೀಘ್ರದಲ್ಲೇ ಶಿವಣ್ಣ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.