ಬಿ ಪಿ ಎಲ್ ಕಾರ್ಡ್‌ ಇದ್ದವರಿಗೆ ಎಷ್ಟು ಕೆಹಿ ಅಕ್ಕಿ ಗೊತ್ತಾ, ಸರ್ಕಾರದ ಹೊಸ ನಿಯಮಕ್ಕೆ ಮೆಚ್ಚುಗೆ ಪಟ್ಟ ಪ್ರಜೆಗಳು

 | 
ರಪ

ರಾಜ್ಯದಲ್ಲಿ ಎಲ್ಲ ಪಡಿತರಿಗೆ ಸರಕಾರದ ಅನ್ನ ಭಾಗ್ಯ ಯೋಜನೆಯದ್ದೇ ನಿರೀಕ್ಷೆ ಅದೇ ರೀತಿ ರಾಜ್ಯದ ಎಲ್ಲ ಜನತೆಗೆ ಉಚಿತ 10kg ಅಕ್ಕಿ ನೀಡ್ತೇವೆ ಎಂದ ಸರಕಾರ ಬಳಿಕ ಕೇಂದ್ರದ ಅಸಹಕಾರ ಧೋರಣೆಯಿಂದ ಈ ಯೋಜನೆ ತರುತ್ತಾ ಇಲ್ವಾ ಎಂದು ಕಾದು ನೋಡಬೇಕು. ಅದೇ ರೀತಿ ಸಿದ್ದರಾಮಯ್ಯ ಅವರು ಸಹ ಈ ಬಗ್ಗೆ ಕೇಂದ್ರ ಅಸಹಕಾರ ನಿಲುವು ಕಂಡ ಬಗ್ಗೆ ಮಾತಾಡಿದ್ದಾರೆ.

ಇಷ್ಟುದಿನಗಳ ಕಾಲ ಕೇಂದ್ರ ಸರಕಾರವು ಐದು ಕಿಲೋ ಅಕ್ಕಿವರೆಗೆ ನೀಡುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಹೊರಡಿಸುವಾಗ ಕೇಂದ್ರದ ಬಳಿ ಸಮಾಲೋಚನೆ ಮಾಡೇ ಇಲ್ಲ. ಅಷ್ಟು ಮಾತ್ರ ಅಲ್ಲದೆ ಕಳೆದ ಬಾರಿ ಕೇಂದ್ರ ಸಹಕಾರ ನೀಡಿದ್ದಾಗಲು ಕೇಂದ್ರದ ಸಹಕಾರ ಸಿಕ್ಕ ಬಗ್ಗೆ ಕಾಂಗ್ರೆಸ್ ಮಾತಾಡಲೇ ಇಲ್ಲ ಎಂದು ಬಿಜೆಪಿ ಕಿಡಿಕಾರಿದ್ದಾರೆ. ಈ ವಿಚಾರವಂತೂ ಜುಲೈ ನಂದು ಬರುವುದು ಅನುಮಾನವಾಗಿತ್ತು.

ರಾಜ್ಯದ ಕಾಂಗ್ರೆಸ್ ಸರಕಾರ ಹೇಗಾದರೂ ಜನರಿಗೆ ಪಡಿತರ ಅನ್ನಭಾಗ್ಯ ವಿತರಿಸುವ ಮನಸ್ಸು ಮಾಡಿದ್ದು ಈ ಮೂಲಕ ಎಲ್ಲ ಪಡಿತರಿಗೂ ಇದೀಗ ಶುಭಸುದ್ದಿಯೊಂದು ತಿಳಿದುಬಂದಿದೆ. ಈ ಮೂಲಕ ಎಲ್ಲ ಪಡಿತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಮೂಲಕ ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರ ನೀಡುವ ಅನ್ನಭಾಗ್ಯ ಯೋಜನೆಯಲ್ಲಿ8kg ಅಕ್ಕಿಯ ಜೊತೆಗೆ2kg ರಾಗಿ ಅಥವಾ ಜೋಳ ಸಹ ದೊರೆಯಲಿದೆ. ಈ ಬಗ್ಗೆ ಸ್ವತಃ ಆಹಾರ ಸಚಿವರಾದ ಕೆ. ಎಚ್. ಮುನಿಯಪ್ಪ ಅವರು ಮಾತನಾಡಿದ್ದಾರೆ. 

ದ.ಕಿ. ಕನ್ನಡ ಭಾಗದ ಜನರಲ್ಲಿ ಎಂಟು ಕೆ.ಜಿ ಅಕ್ಕಿಯ ಜೊತೆಗೆ ಎರಡು ಕೆ.ಜಿ. ರಾಗಿ ದೊರೆಯುತ್ತದೆ. ಅದೇ ರೀತಿ ಉತ್ತರ ಭಾಗದಲ್ಲಿ ಎರಡು ಕೆ.ಜಿ. ಜೋಳ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಈ ಬಗ್ಗೆ ರಾಜ್ಯದ ಕಾಂಗ್ರೆಸ್ ದೃಢ ನಿರ್ಧಾರಕ್ಕೆ ಬಂದಿದೆ‌ . ಮೋಸ ಅಂತೂ ಇಲ್ಲ ಎಂದು ತಿಳಿಸಿದ್ದಾರೆ. ಬಳಿಕ ಮಾಧ್ಯಮದವರು ಈ ಬಗ್ಗೆ ಮೊದಲು ಹತ್ತು ಕೆ.ಜಿ ಅಕ್ಕಿ ನೀಡ್ತೀರಿ ಎಂದು ಹೇಳಿದ್ದೀರಿ ಇದನ್ನು ರಾಜ್ಯದ ಜನತೆ ಒಪ್ಪಬಹುದಾ ಎಂದು ಕೇಳಿದ್ದಕ್ಕೆ. 

ನಮಗೆ ಜನರ ಅಭಿವೃದ್ಧಿ ಮುಖ್ಯ ಕೇಂದ್ರ ಸರಕಾರ ಕೂಡ ಸರಿಯಾಗಿ ಸಹಕಾರ ನೀಡಿಲ್ಲ. ಬರೀ ಅಕ್ಕಿಯನ್ನೇ ಹತ್ತು ಕೆ.ಜಿ ನೀಡುವುದಕ್ಕಿಂತ ಎಂಟು ಕೆಜಿ ಅಕ್ಕಿ ಮತ್ತು ಎರಡು ಕೆಜಿ ಗೋಧಿ ಅಥವಾ ಜೋಳ ನೀಡುವುದೇ ಉತ್ತಮ ಎಂಬ ಅಭಿಪ್ರಾಯ ನಮ್ಮದು ನೋಡಬೇಕು ಸರಕಾರ ಜನರ ಮನಸ್ಥಿತಿಯನ್ನು ಅರಿತೆ ನಡೆಯುತ್ತದೆ. ಈ ಮೂಲಕ ನುಡಿದಂತೆ ನಡೆಯುವೆವು ಜುಲೈ ನಂದೆ ಅನ್ನಭಾಗ್ಯ ಸಿಗಲು ಎಲ್ಲ ಪ್ರಯತ್ನ ಸಾಗುತ್ತದೆ ಎಂದು ಹೇಳಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.