ವಿದ್ಯೆ ಇಲ್ಲದೆ ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತಾನಾಡುವುದು ಹೇಗೆ ಗೊತ್ತಾ, ಪ್ರದೀಪ್ ಈಶ್ವರ್ ಜೀವನ ಹೇಗಿತ್ತು ಗೊತ್ತಾ

 | 
Hd

ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿತ್ತು. ಬಂಡಾಯ, ಪಕ್ಷಾಂತರ, ಅನಿರೀಕ್ಷಿತ ಅಭ್ಯರ್ಥಿಗಳ ಆಯ್ಕೆ ಒಂದು ಕಡೆಯಾದರೆ ಯಾರೂ ಊಹಿಸದ ಫಲಿತಾಂಶ ಇನ್ನೊಂದು ಅಚ್ಚರಿಗೆ ಕಾರಣವಾಯಿತು. ಅದರಲ್ಲೂ ಸಾಲು ಸಾಲು ಪ್ರಭಾವಿ ಸಚಿವರ ಸೋಲನ್ನು ಬಿಜೆಪಿ ನಾಯಕರ ಜೊತೆ ಜನತೆಯೂ ಮೂಗಿನ ಮೇಲೆ ಬೆರಳಿಟ್ಟು ನೋಡುವಂತಾಯಿತು. 

ಈ ಪೈಕಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದ್ದ ಸಚಿವ ಡಾ.ಕೆ.ಸುಧಾಕರ್ ಅವರ ಪರಾಜಯವೂ ಒಂದು. ಇವರನ್ನು ಸೋಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಹೌದು ಮೆಡಿಕಲ್ ಮಾಸ್ಟರ್ ಎಂದೇ ಕರೆಸಿಕೊಳ್ಳುವ ಇವರು ಕಲಿತಿದ್ದು ಬರೀ ಪಿಯುಸಿ ಮಾತ್ರ. ಯಾವುದೇ ರಾಜಕೀಯ ಹಿನ್ನಲೆ ಇಲ್ಲದ ಪ್ರದೀಪ್ ಮೂಲತಃ ಪ್ರಾಧ್ಯಾಪಕ. ಭಾಷಣಗಾರ ಮತ್ತು ನೀಟ್ ಕೋಚಿಂಗ್ ಸೆಂಟರ್ 'ಪರಿಶ್ರಮ ನೀಟ್ ಅಕಾಡೆಮಿ'ಯ ಸಂಸ್ಥಾಪಕರೂ ಹೌದು. ಇವರು ಹುಟ್ಟಿದ್ದು ಚಿಕ್ಕಾಬಳ್ಳಾಪುರದ ಪೆರೇಸಂದ್ರದಲ್ಲಿ. 

ಚಿಕ್ಕದಿರುವಾಗಲೇ ಇವರ ಹೆತ್ತವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದು ಬೋಧಕ ವೃತ್ತಿ ಆರಿಸಿಕೊಂಡಿದ್ದರು. ಬಳಿಕ ಸ್ಥಳೀಯ ಟಿವಿ ವಾಹಿನಿಯಲ್ಲಿ ನಿರೂಪಕರಾಗಿದ್ದರು. ಯೂ ಟ್ಯೂಬ್ ಚಾನೆಲ್ ಒಂದನ್ನು ಸ್ಥಾಪಿಸಿದರು. ಕನ್ನಡ ಮಾಧ್ಯಮ ಶಾಲೆಯೊಂದನ್ನು ದತ್ತು ತೆಗೆದುಕೊಂಡ ಇವರು 22 ಮಕ್ಕಳನ್ನು ತಮ್ಮದೇ ಖರ್ಚಿನಲ್ಲಿ ಓದಿಸುತ್ತಿದ್ದಾರೆ. 

ಈ ಹಿಂದೆ ಒಮ್ಮೆ ಪಕ್ಷೇತರ ಅಭ್ಯರ್ಥಿ ಗೆ ಬೆಂಬಲ ಸೂಚಿಸಿದ್ದಲ್ಲದೇ ಘಟಾನುಘಟಿ ನಾಯಕರ ವಿರುದ್ಧ ತಮ್ಮ ಯು ಟ್ಯೂಬ್ ಅಲ್ಲಿ ಘಂಟಾಘೋಷ ವಾಗಿ ಹೇಳಿದ ಪರಿಣಾಮ ಇವರ ಮೇಲೆ ಸುಮಾರು ಕೇಸ್ ಗಳು ದಾಖಲಾದವು. ಮುಂದಿನ ದಿನಗಳಲ್ಲಿ ಜೈಲಿಗೆ ಕೂಡ ಹೋಗುವ ಪ್ರಸಂಗ ಬಂದೊದಗಿತ್ತು. ಈ ಬಾರಿಯ ಕಾಂಗ್ರೆಸ್ ನ ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆಯಾದ ಪ್ರದೀಪ್ ಫಲಿತಾಂಶ ಬಂದಾಗ ಎಲ್ಲರನ್ನೂ ಅಚ್ಚರಿಗೊಳಿಸಿ ಜಯಶಾಲಿಯಾದರು. ಅವರು ಬರೋಬ್ಬರಿ 86,224 ಮತ ಪಡೆದರು. 

ಅವರ ಪ್ರತಿ ಸ್ಪರ್ಧಿ ಡಾ.ಕೆ.ಸುಧಾಕರ್ ಪಡೆದಿದ್ದು 75,582 ಮತ. ಹೀಗೆ ಸಾಮಾನ್ಯ ವ್ಯಕ್ತಿಯಾಗಿದ್ದ ಪ್ರದೀಪ್ ಪ್ರಭಾವಶಾಲಿ ಸಚಿವರನ್ನು 10,642 ಮತಗಳ ಅಂತರದಿಂದ ಸೋಲಿಸಿ ಇತಿಹಾಸ ಬರೆದರು. ಇನ್ನುಶಾಸಕರಾಗಿ ಆಯ್ಕೆಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರದೀಪ್, "ಕಾಂಗ್ರೆಸ್ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಪ್ರಬಲ ನೆಲೆಯನ್ನು ಹೊಂದಿದೆ. ಅನಾಥ ಮಗು, ಬಡ ಕುಟುಂಬದವನಾಗಿದ್ದ ನನಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ಚುನಾವಣೆಯಲ್ಲಿ ನಾನು ಹಣವಿಲ್ಲದೆ ಗೆಲುವು ಸಾಧಿಸಿದ್ದೇನೆ. ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ. ಬಡವರ ಕಲ್ಯಾಣವೇ ತನ್ನ ಗುರಿ, ಹಳ್ಳಿಯಲ್ಲೇ ಮನೆ ಮಾಡಿ ಸ್ಥಳೀಯರ ಕಷ್ಟ -ಸುಖಗಳಿಗೆ ಸ್ಪಂದಿಸುತ್ತೇನೆ, ಪ್ರತಿ ದಿನ ಕನಿಷ್ಠ ನಾಲ್ಕು ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.