ಕುಮಾರಸ್ವಾಮಿ ಮಗನ ಹಳೆ ಕಥೆ ಏನು ಗೊತ್ತಾ, ತಂದೆಗೆ ತಕ್ಕ ಮಗ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುಲಪುತ್ರ ನಟ ನಿಖಿಲ್ ಗೌಡ ಅವರು ರೇವತಿಯನ್ನು ಕಲ್ಯಾಣವಾಗುವ ಮುನ್ನ ಅವರು ನಿರ್ಮಾಪಕ ಕೆ. ಸಿ ಮೋಹನ್ ಅವರ ಮಗಳಾದ ಸ್ವಾತಿ ಗೌಡ ಜೊತೆ ನಿಶ್ಚಿತಾರ್ಥ ವಾಗಿದ್ದರು ಕೊನೆಗೆ ಅದೇನಾಯಿತೋ ಏನೋ ಮದುವೆ ಮರಿದುಬಿದ್ದಿತ್ತು.
ಹೌದು ಜೈನ್ ಕಾಲೇಜಿನಲ್ಲಿ ಓದುವಾಗ ನಿಖಿಲ್ ಗೌಡ ಮತ್ತು ಸ್ವಾತಿ ಪರಸ್ಪರ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ವಿವಾಹದ ತನಕ ಬಂದು ನಿಂತಿದ್ದು, ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ನಿಶ್ಚಿತಾರ್ಥ ನಡೆದಿತ್ತು. ಆ ಸಮಯದಲ್ಲಿ ಒಂದುಕಡೆ ಈ ವರ್ಷ ನಿಖಿಲ್ ಗೌಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಅವರ ನಾಯಕರಾಗಿರುವ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಮತ್ತೊಂದೆಡೆ ಮದುವೆಗೆ ಸಿದ್ಧರಾಗುತ್ತಿದ್ದಾರೆ. 'ಮದುವೆ ಸದ್ಯಕಿಲ್ಲ, ಮೊದಲ ಚಿತ್ರ ಮುಗಿದ ಮೇಲೆ ಮದುವೆಯಾಗುತ್ತೇನೆ, ಇದಕ್ಕೆ ಸ್ವಾತಿಯ ಸಮ್ಮತಿಯೂ ಇದೆ' ಎಂದು ನಿಖಿಲ್ ಗೌಡ ಹೇಳಿದ್ದರು.ಆದರೆ ಏನೊಂದು ಕಾರಣ ಹೇಳದೆ ಮದುವೆಯನ್ನು ರದ್ದುಗೊಂಡಿತ್ತು.
ನಂತರದಲ್ಲಿ ಸ್ವಾತಿ ಗೌಡ ಅವರು ಎಚ್ ಡಿ ಕುಮಾರಸ್ವಾಮಿ ಅವರ ರಾಜಕೀಯ ಎದುರಾಳಿ ಶ್ರೀಕಂಠಯ್ಯ ಅವರ ಮೊಮ್ಮಗ ನೇಹಾನೇಶ್ ಅವರೊಂದಿಗೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಇತ್ತ ನಿಖಿಲ್ ಅವರು ಕೂಡ ರೇವತಿ ಅವರನ್ನು ವಿವಾಹವಾಗಿ ಸುಖದಿಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.