ಪಬ್ಲಿಕ್ ಮುಂದೆ ಬಂದ ರೋಹಿಣಿ ಸಿಂಧೂರಿಗೆ ಏನಾಯಿತು ಗೊತ್ತಾ, ರೊಚ್ಚಿಗೆದ್ದ ಕರುನಾಡು

 | 
Hd

ಕೆಲ ದಿನಗಳ ಹಿಂದೆ ಶುರುವಾದ ಐಎಎಸ್‌ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ರೂಪಾ ಅವರಿಬ್ಬರ ನಡುವಿನ ಜಡೆ ಜಗಳ ಮುಕ್ತಾಯ ಹೇಗೆ ತಲುಪುತ್ತದೆ ಎಂಬುದು ಎಲ್ಲರಿಗೂ ಇರುವ ಕುತೂಹಲ ವಾಗಿದೆ. ಇದೀಗ ಐಎಎಸ್‌ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ರೂಪಾ  ಜಟಾಪಟಿ  ಮುಗಿಯುವ ಮುನ್ನವೇ, ವಿವಾದ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಮೈಸೂರು ಆರ್ ಟಿಐ ಕಾರ್ಯಕರ್ತ ಗಂಗರಾಜುರ  ಜೊತೆ ರೂಪಾ ಮಾತಾಡಿರುವ ಆಡಿಯೋ ಹೊರ ಬಂದಿದ್ದು, ಹೊಸ ಟ್ವಿಸ್ಟ್ ಸಿಕ್ಕಿದೆ. ಇದರ ನಡುವೆಯೇ ಇಂದು ಐಜಿಪಿ ಡಿ. ರೂಪಾ ವಿರುದ್ಧ ನಿರ್ಬಂಧಕಾಜ್ಞೆ ನೀಡುವಂತೆ ರೋಹಿಣಿ ಸಿಂಧೂರಿ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ.Hd

ಅರ್ಜಿ ಪರ ವಕೀಲರ ವಾದ ಆಲಿಸಿರುವ ಕೋರ್ಟ್ ನಾಳೆಗೆ ಆದೇಶವನ್ನ ಕಾಯ್ದಿರಿಸಿದೆ. ಇದರ ನಡುವೆ ರೋಹಿಣಿ ಸಿಂಧೂರಿ, ಡಿ ರೂಪಾ ಅವರಿಗೆ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿದ್ದು, ಒಟ್ಟು 21 ಅಂಶಗಳನ್ನ ಮುಂದಿಟ್ಟು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ರೂಪಾ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ ಸೈಬರ್ ಸೆಲ್‍ನ ಮುಖ್ಯಸ್ಥರು ಆಗಿದ್ದರು. ಆ ಸಂದರ್ಭದಲ್ಲಿ ರೋಹಿಣಿಯವರ ಫೋಟೋ ಕಳವು ಮಾಡಿರಬಹುದು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಪರ ವಕೀಲರು ವಾದ ಮಂಡಿಸಿದ್ದಾರೆ.Hd

ಅಲ್ಲದೆ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೂಪಾಗೆ ಹಿರಿಯ ವಕೀಲರ ಮೂಲಕ ನೋಟಿಸ್ ನೀಡಲಾಗಿದೆ. 24 ಗಂಟೆಯ ಒಳಗಡೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕು. ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಮಾಡಿರುವ ಮಾನಹಾನಿ ಆರೋಪಗಳನ್ನು ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಕೋರ್ಟ್‍ನಲ್ಲಿ 1 ಕೋಟಿ ರೂ. ಮಾನನಷ್ಟ ಕೇಸ್ ಹೂಡುವುದಾಗಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಕುರಿತಾಗಿ ಮೀಡಿಯಾ ಮುಂದೆ ಮಾತಾಡಲು ರೋಹಿಣಿ ಸಿಂಧೂರಿ ಅವರು ಪರದಾಡಿದ್ದಾರೆ ಎನ್ನಲಾಗ್ತಿದೆ. Hd

ನಿರರ್ಗಳವಾಗಿ ಹಾಗೂ ದಿಟ್ಟವಾಗಿ ಮಾತನಾಡುವ ರೋಹಿಣಿ ಅದ್ಯಾಕೋ ಕ್ಯಾಮೆರಾ ಎದುರಿಗೆ ಗರ ಬಡಿದವರಂತೆ ನಿಂತಿದ್ದಾರೆ. ಇದನ್ನೆಲ್ಲ ನೋಡಿದ ಅಭಿಮಾನಿಗಳ ಮನದಲ್ಲಿ ರೋಹಿಣಿ ಸಿಂಧೂರಿ ಅವರ ಮೇಲೆ ಕೊಂಚ ಬೇಸರ ಮೂಡಿದ್ದಂತೂ ಸತ್ಯ.

(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.