ರಾಘು ಪತ್ನಿ ಡೈರಿಯಲ್ಲಿ ಏನಿತ್ತು ಗೊತ್ತಾ, ಗಂಡನ ಬಗ್ಗೆ ಹೆಂಡತಿ ಬಿಚ್ಚಿಟ್ಟ ಸತ್ಯ

 | 
ರ್ರ್ರ

ಹೆಂಡತಿಯ ಅಗಲಿಕೆಯ ನಂತರ ಮತ್ತೆ ಮೊದಲಿನಂತಾಗಲು ಬಹಳಷ್ಟು ಪ್ರಯತ್ನಗಳ ಮಾಡುತ್ತಲೇ ಇದ್ದಾರೆ ನಟ ವಿಜಯ್ ರಾಘವೇಂದ್ರ ಅವರು. ಹೌದು ಜೀವನದ ಭಾಗವಾಗಿದ್ದ ಪತ್ನಿ ಸ್ಪಂದನ ಅವರನ್ನು ಕಳೆದುಕೊಂಡಿರುವ ಸ್ಯಾಂಡಲ್ ವುಡ್ ನಟ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರು ಇದೀಗ ಡಿಕೆಡಿ ವೇದಿಕೆ ಮೇಲೆ ಸ್ಪಂದನ ಅವರು ಬರೆದಿದ್ದ ಡೈರಿಯಲ್ಲಿದ್ದ ಕೆಲವು ಅಪರೂಪದ ಸಂಗತಿಗಳನ್ನ ಹಂಚಿಕೊಂಡಿದ್ದಾರೆ.

ಹಲವು ಕುಟುಂಬಗಳು ತಮ್ಮ ಮನೆ ಮಗನಂತೆ ವಿಜಯ ರಾಘವೇಂದ್ರ ಅವರನ್ನು ಭಾವಿಸುತ್ತಾರೆ. ಕೌಟುಂಬಿಕ ವ್ಯಕ್ತಿಯಾಗಿರುವ ವಿಜಯ ರಾಘವೇಂದ್ರ ಇತ್ತೀಚಿಗಷ್ಟೇ ತಮ್ಮ ಜೀವನದ ಅತ್ಯಂತ ಮಹತ್ವದ ವ್ಯಕ್ತಿ ಪತ್ನಿ ಸ್ಪಂದನ ಅವರನ್ನು ಕಳೆದುಕೊಂಡಿದ್ದಾರೆ.ಹಲವು ವರ್ಷ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಸ್ಪಂದನ ಅವರನ್ನು ವಿವಾಹವಾಗಿ 16 ವರ್ಷ ಅವರೊಂದಿಗೆ ಸಂಸಾರ ಮಾಡಿ ಇದೀಗ ವಿಧಿಯಾಟದಿಂದ ಒಬ್ಬಂಟಿಯಾಗಿದ್ದಾರೆ. 

ಇದೀಗ ವಿಜಯ ರಾಘವೇಂದ್ರ ಅವರು ಡಿಕೆಡಿ ವೇದಿಕೆ ಮೇಲೆ ಮಾತನಾಡಿದ್ದು, ಸ್ಪಂದನ ತನ್ನ ಡೈರಿಯಲ್ಲಿ ಹಲವಾರು ಕನಸುಗಳನ್ನ ಬರೆದಿಟ್ಟಿದ್ದಾರೆ. ತಾನು ದೊಡ್ಡ ನಿರ್ಮಾಪಕಿಯಾಗಬೇಕು. ಸಾವಿರಾರು ಜನರಿಗೆ ಕೆಲಸ ಕೊಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಮಗ ಶೌರ್ಯನನ್ನ ದೊಡ್ಡ ನಟನಾಗಿ ಮಾಡಬೇಕು. ಹೀಗೆ ನೂರಾರು ಕನಸುಗಳನ್ನ ತನ್ನ ಡೈರಿಯಲ್ಲಿ ಬರೆದಿದ್ದಾರೆ.

ಪ್ರತೀದಿನ ಎದ್ದಾಗಲೂ ಒಂದು ಎಚ್ಚರಿಕೆ ಇರುತ್ತಿತ್ತು. ನನ್ನ ಕುಟುಂಬಕ್ಕಾಗಿ ನಾನು ಕೆಲಸ ಮಾಡಬೇಕು. ಅವರಿಗೆ ಒಳ್ಳೆಯ ಜೀವನ ಕೊಡಬೇಕು. ನನಗೆ ಏನು ಆಗದಂತೆ ನೋಡಿಕೊಳ್ಳಬೇಕು. ಅವರು ಹೆಮ್ಮೆ ಪಡುವಂತೆ ಕೆಲಸ ಮಾಡಬೇಕು ಎಂದು, ಆದರೆ ಈಗ ಅದೆಲ್ಲವೂ ಅರ್ಥಾತ್ ಕಳೆದುಕೊಂಡಂತೆ ಅನಿಸುತ್ತದೆ. ಆದರೆ ಮಗ ಶೌರ್ಯನಿಗಾಗಿ ನಾನು ಇದನ್ನೆಲ್ಲಾ ಮುಂದುವರೆಸಬೇಕಿದೆ. 

ನಾನು ನೋವುಂಡರೆ ಅವನಿಗೆ ಗೊತ್ತಾಗಿ ಬಿಡುತ್ತದೆ. ಒಬ್ಬನೇ ಇದ್ದಾಗಷ್ಟೇ ಕಣ್ಣೀರು ಹಾಕುತ್ತಿದ್ದೇನೆ ಎಂದು ನೋವು ಅದುಮಿಟ್ಟುಕೊಂಡೇ ಕಣೀರು ಹಾಕಿದ್ದಾರೆ ವಿಜಯ ರಾಘವೇಂದ್ರ ಅವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkaunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.