ಸಂಪತ್ ಜಯರಾಮ್ ಸಾವಿಗೆ ಕಾರಣ ಯಾರು ಗೊತ್ತಾ, ಕಿರುತೆರೆ ಲೋಕಕ್ಕೆ ಬರಸಿಡಿಲು

 | 
Cc

ಕನ್ನಡ ಕಿರುತೆರೆ ನಟ ಸಂಪತ್‌ ರಾಜ್‌ 2 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ವಿಚಾರ ಅವರ ಆತ್ಮೀಯರಿಗೆ ಹಾಗೂ ಕಿರುತೆರೆಪ್ರಿಯರಿಗೆ ಶಾಕ್‌ ನೀಡಿದೆ. 35 ವರ್ಷದ ಸಂಪತ್‌ಗೆ ಕಿರುತೆರೆಯಲ್ಲಿ ಸರಿಯಾದ ಅವಕಾಶ ದೊರೆಯದ ಕಾರಣ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಆದರೆ ಇದೀಗ ಅವರ ಗೆಳೆಯ ರಾಜೇಶ್ ದ್ರುವ ಅವರು ಸಂಪತ್‌ ಸುಮಾರು 11 ವರ್ಷಗಳ ಕಾಲ ಪ್ರೀತಿಸಿ ಚೈತನ್ಯ ಎಂಬ ಯುವತಿಯನ್ನು ಮದುವೆ ಆಗಿದ್ದ. 

ಆಕೆ ಈಗ 5 ತಿಂಗಳ ಗರ್ಭಿಣಿ. ಇಬ್ಬರದ್ದೂ ಅಂತರ್ಜಾತಿ ವಿವಾಹ. ಅವರ ಜೀವನದಲ್ಲಿ ಸ್ವಲ್ಪವೂ ಹುಳುಕು ಇರಲಿಲ್ಲ. ಅವರ ಪ್ರೀ ವೆಡ್ಡಿಂಗ್‌ ಶೂಟ್‌ ಕೂಡಾ ನಾನೇ ಮಾಡಿದ್ದೆ. ಅವರ ಲವ್‌ ಸ್ಟೋರಿ ಗೊತ್ತು, ಮದುವೆಗೂ ಹೋಗಿ ಬಂದಿದ್ದೆ. ಸಂಪತ್‌ ಹೇಗೆ ಎಂದು ನನಗೆ ಗೊತ್ತು. ಆತ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವೀಕ್‌ ಮೈಂಡ್‌ನವನಲ್ಲ. ಹೌದು ಅವನಿಗೆ ಅವಕಾಶ ಇರಲಿಲ್ಲ. ಆದರೆ ತಾನೇ ಅವಕಾಶ ಸೃಷ್ಟಿಸಿಕೊಳ್ಳುವ ಶಕ್ತಿ ಅವನಲ್ಲಿ ಇತ್ತು. ಇತ್ತೀಚೆಗೆ ನಾವು ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದು ಅದಕ್ಕೆ ಅವನೇ ಆಂಕರ್‌ ಆಗಿದ್ದ. 

ಇನ್ನು ಸ್ವಲ್ಪ ವರ್ಷಗಳಲ್ಲಿ ಆತ ದೊಡ್ಡ ನಟನಾಗಿ ಗುರುತಿಸಿಕೊಳ್ಳುತ್ತಿದ್ದ ಎಂದಿದ್ದಾರೆ. ಹುಡುಗಾಟಕ್ಕೆಂದು ಮಾಡಿದ್ದು ಈ ರೀತಿಯಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇನ್ನು ಇವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಹಾಗೂ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.ನೆಲಮಂಗಲದ ಮನೆಯ ಕೋಣೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಒಂದು ವರ್ಷದ ಹಿಂದೆ ಮದುವೆ ಆಗಿದ್ದ ಅವರು ಈಗ ಇಹಲೋಕ ತ್ಯಜಿಸಿರುವುದು ಅವರ ಆಪ್ತರಿಗೆ ತೀವ್ರ ನೋವು ಉಂಟುಮಾಡಿದೆ. ನೆಲಮಂಗಲದ ಆಸ್ಪತ್ರೆಯಿಂದ ಎನ್​ಆರ್​ ಪುರಕ್ಕೆ ಅವರ ಮೃತದೇಹ ರವಾನೆ ಆಗಿದೆ.ಅವರ ನಿಧನದ ಸುದ್ದಿ ತಿಳಿದು ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.