ಕಿಚ್ಚ ಸುದೀಪ್ ಬಿಗ್ಬಾಸ್ ಮಾಡಲ್ಲ ಎಂದಿದ್ಯಾಕೆ ಗೊತ್ತಾ, ಮಾಜಿ ಸ್ಫಧಿ೯ ಸ್ನೇಹಿತ್ ಗೌಡ ಓಪನ್ ಟಾಕ್
Oct 15, 2024, 18:43 IST
|
ಅಭಿನಯ ಚಕ್ರವರ್ತಿ, ಬಾದ್‌ಶಾ ಕಿಚ್ಚ ಸುದೀಪ್ ಕರ್ನಾಟಕದ ಜನತೆಗೆ ಅದರಲ್ಲೂ ಬಿಗ್‌ಬಾಸ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಕಿಚ್ಚ ಸುದೀಪ್ ಅವರು ಇದು ತನ್ನ ನಿರೂಪಣೆಯ ಕೊನೆಯ ಬಿಗ್‌ಬಾಸ್ ಕಾರ್ಯಕ್ರಮ ಎಂದು ಅನೌನ್ಸ್ ಮಾಡಿದ್ದಾರೆ. ಕಿಚ್ಚನ ಈ ನಿರ್ಧಾರ ಅವರ ಅಭಿಮಾನಿಗಳು ಮಾತ್ರವಲ್ಲದೇ ಇಡೀ ಕರ್ನಾಟಕದ ಜನತೆ ಅಚ್ಚರಿ ತಂದಿದೆ.
ಅಂದಹಾಗೆ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಅನ್ನೋ ಕಾರ್ಯಕ್ರಮವನ್ನು ಬಹಳ ಇಷ್ಟಪಟ್ಟು ಮಾಡ್ತಾರೆ. ಸಿನಿಮಾದ ಹೊರತಾಗಿ ಜನರ ಜೊತೆಗೆ ತನ್ನ ನೈಜ ವ್ಯಕ್ತಿತ್ವವನ್ನು ಅನಾವರಣ ಮಾಡಲು, ತಾನು ಇಷ್ಟಪಟ್ಟಂತಿರಲು ಇರುವ ವೇದಿಕೆ ಅದು ಎಂದು ಭಾವಿಸಿದ್ದಾರೆ. ಹೀಗಾಗಿಯೇ ಅವರು ಇಷ್ಟಪಟ್ಟು, ಪಕ್ಕಾ ಪೂರ್ವ ಸಿದ್ಧತೆಯೊಂದಿಗೆ ಬಿಗ್ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇದೇ ಕಾರಣಕ್ಕೆ ಅವರ ನಿರೂಪಣೆ ಕರ್ನಾಟಕದ ಜನತೆಗೆ ಇಷ್ಟವಾಗಿರೋದು.
ಹೀಗಾಗಿ ಸುದೀಪ್ ಮುಂದಿನ ಬಿಗ್‌ಬಾಸ್ ಸೀಸನ್ 12ಕ್ಕೆ ನಿರೂಪಣೆ ಮಾಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಿಕ್ಕಾಪಟ್ಟೆ ಬೇಸರಪಟ್ಟುಕೊಂಡಿದ್ದಾರೆ. ನಿಮ್ಮನ್ನು ಹೊರತುಪಡಿಸಿ ಬೇರೆ ಯಾರನ್ನೂ ಆ ಜಾಗದಲ್ಲಿ ನೋಡಲು ನಾವು ಇಷ್ಟಪಡುವುದಿಲ್ಲ ಎಂದಿದ್ದಾರೆ. ಇನ್ನು ಬಿಗ್ಬಾಸ್ ಮನೆಯ ಹಳೆಯ ಸ್ಪರ್ಧಿ ಸ್ನೇಹಿತ್ ಗೌಡ ನೀವಿಲ್ಲದೆ ಬಿಗ್ಬಾಸ್ ಮನೆಯನ್ನು ಕಲ್ಪಿಸಿ ಕೊಳ್ಳೋಕು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಬಿಗ್‌ಬಾಸ್ ಸೀಸನ್ 10 ರ ಸ್ಪರ್ಧಿ ಸ್ನೇಹಿತ್ ಗೌಡ , ಈ ವಿಷಯ ಕೇಳಿ ನನಗೆ ಶಾಕ್ ಆಗಿದೆ. ಬಿಗ್‌ಬಾಸ್ ಅಂದರೆ ಸುದೀಪ್ ಸರ್. ಅವರಿಲ್ಲ ಅಂದರೆ ಅದನ್ನ ನಾನು ಕಲ್ಪಿಸಿಕೊಳ್ಳೋಕೆ ಆಗಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಬಿಗ್‌ಬಾಸ್‌ನಲ್ಲಿ ಇದ್ದಾಗ ವೀಕೆಂಡ್ ಬಂದ್ರೆ ನಾವು ಸುದೀಪ್ ಸರ್ ಬರ್ತಾರೆ ಅಂತ ಕಾಯ್ತಾಯಿದ್ವಿ. ನಮ್ಮ ತಪ್ಪುಗಳನ್ನು ಹೇಳ್ತಾರೆ, ನಮ್ಮ ತಪ್ಪುಗಳನ್ನು ತಿದ್ದುತ್ತಾರೆ ಅಂತ ಕಾಯ್ತಾಯಿದ್ವಿ. ಅಷ್ಟೊಂದು ಚಾಕಚಖ್ಯತೆ ಬೇರೆ ಯಾರಲ್ಲೂ ನಾವು ಕಾಣಲು ಸಾಧ್ಯವಿಲ್ಲ. ನನಗೆ ಈ ವಿಷಯ ಗೊತ್ತಾಗಿ ಬೇಜಾರಾಗುತ್ತಿದೆ' ಎಂದು ಸ್ನೇಹಿತ್ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.