ಬೆಂಗಳೂರಿನ ಡಾನ್ ಗಳನ್ನ ನಡಿಗಿಸಿದ್ದ ಸ್ಪಂದನಾ ತಂದೆ ಸ್ವಯಂ ನಿವೃತ್ತಿ ಘೋಷಿಸಿದ್ದು ಯಾಕೆ ಗೊತ್ತಾ

 | 
ಕಮ

 ಬಿಕೆ ಶಿವರಾಂ ಈ ಹೆಸರು ಕೇಳಿದರೆ ಪಾತಕ ಲೋಕ ಥರಗುಟ್ಟುತ್ತಿತ್ತು, ಎಂಟೆದೆಯ ರೌಡಿ ಶೀಟರ್ ಕೂಡ ಬೆವರುತ್ತಿದ್ದ. ಅಂಥ ಗಂಡೆದೆಯ ದಕ್ಷ ಪೊಲೀಸ್ ಅಧಿಕಾರಿಗೆ ಇವತ್ತು ಬಂದೊದಗಿರುವ ಸ್ಥಿತಿ ನೋಡಿ. ಕೇವಲ 41ರ ಪ್ರಾಯದ ಮಗಳು ಸ್ಪಂದನಾಳನ್ನು ಕಳೆದುಕೊಂಡು ಹರಿಶ್ಚಂದ್ರಘಾಟ್​ನಲ್ಲಿ ದೈನೇಸಿಯಾಗಿ ಕೂತಿದ್ದಾರೆ. ಯಾವುದೇ ತಂದೆತಾಯಿ ತಮಗಿಂತ ಮೊದಲು ಮಕ್ಕಳು ನಿಧನಾರಾಗುವ ಸ್ಥಿತಿಯನ್ನು ನೋಡಲಾರರು, ಅರಗಿಸಿಕೊಳ್ಳಲಾರರು. 71-ವರ್ಷ ವಯಸ್ಸಿನ ಶಿವರಾಂಗೆ ಇಳಿವಯಸ್ಸಿಲ್ಲಿ ಇಂಥ ಆಘಾತ ಎದುರಾಗಬಾರದಿತ್ತು. 

ಪೊಲೀಸ್ ಸೇವೆಯಿಂದ ನಿವೃತ್ತರಾದ ಬಳಿಕ ಅವರು ರಾಜಕಾರಣದಲ್ಲಿ ಹೆಸರು ಮಾಡುವ ವಿಫಲ ಯತ್ನ ಮಾಡಿದರು. ಅವರ ಕಿರಿಯ ಸಹೋದರ ಬಿಕೆ ಹರಿಪ್ರಸಾದ್ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಹೆಸರು. ಅದರೆ ರಾಜಕಾರಣ ನಿವೃತ್ತ ಖಡಕ್ ಪೊಲೀಸ್ ಅಧಿಕಾರಿಗೆ ಒಲಿಯಲಿಲ್ಲ. ಮಕ್ಕಳು ಮೊಮ್ಮಕ್ಕಳೊಂದಿಗೆ ನೆಮ್ಮದಿಯಿಂದ ವಿಶ್ರಾಂತ ಬದುಕು ನಡೆಸುತ್ತಿದ್ದ ಶಿವರಾಂ ಇನ್ನು ಮೇಲೆ ಅಗಲಿದ ಮಗಳನ್ನು ನೆನೆಯುತ್ತಾ ಬದುಕು ಸವೆಸಬೇಕಿದೆ.

ಹೌದು ಜಯರಾಜ್ ಅಂತಹ ದೊಡ್ಡ ದೊಡ್ಡ ರೌಡಿಗಳಿಗೆ ಒಂದು ಕಾಲದಲ್ಲಿ ಸಿಂಹಸ್ವಪ್ನ ಆಗಿದ್ದ ಬಿಕೆ ಶಿವರಾಂ ಅವರು
ಇದೀಗ ಮುದ್ದಿನ ಮಗಳನ್ನು ಕಳೆದುಕೊಂಡು ಅಕ್ಷರಶಃ ಸೋತಿದ್ದಾರೆ.ಮೂವತ್ತು ವರ್ಷಗಳ ಸರ್ವೀಸಿನಲ್ಲಿ ಅತ್ಯಂತ ಶಿಸ್ತಿನ, ಖಡಕ್ ಪೊಲೀಸ್ ಅಧಿಕಾರಿ ಎನಿಸಿಕೊಂಡಿದ್ದ ಬಿ.ಕೆ.ಶಿವರಾಂ 55ನೇ ವಯಸ್ಸಿಗೇ ಲಾಠಿಯನ್ನು ಕೆಳಗಿಟ್ಟಿದ್ದಾರೆ. ಜನಾನುರಾಗಿಯಾಗಿರುವ ಅವರು ಜನರೋದ್ಧಾರಕ್ಕಾಗಿ ಮೀಸಲಿಡುವುದಾಗಿ ಹೇಳಿದ್ದಾರೆ. ರಾಜಕೀಯ ಸೇರುವ ಹವಣಿಕೆಯಲ್ಲಿರುವ ಶಿವರಾಂ ಇನ್ನಿತರ ಪೊಲೀಸ್ ಅಧಿಕಾರಿಗಳಾದ ಅಬ್ದುಲ್ ಅಜೀಂ, ರೇವಣಸಿದ್ದಯ್ಯ, ಸಾಂಗ್ಲಿಯಾನಾ, ಕೋದಂಡರಾಮಯ್ಯ, ಬಿಸಿ ಪಾಟೀಲ್ ಹಾದಿ ತುಳಿದಿದ್ದಾರೆ.

ಬೆಂಗಳೂರಿನಂಥ ಊರು ಶಿವರಾಂ ಅವರಿಗೆ ಕೆಲವು ಕಾರಣಗಳಿಗೆ ಋಣಿಯಾಗಿರಬೇಕಾಗುತ್ತದೆ. 1977ರಿಂದ 2007ರ ತನಕ, ಮೂವತ್ತು ವರ್ಷ ಬೆಂಗಳೂರಿನ ಭೂಗತ ಲೋಕದ ವಿರುದ್ಧ ರಸಾಭಸ ಬಡಿದಾಡಿದ್ದಾರೆ ಬಿ.ಕೆ.ಶಿವರಾಂ. ಅವರು ಕೊತ್ವಾಲ ರಾಮಚಂದ್ರನನ್ನು ಮೊಬೈಕಿನಲ್ಲಿ ಛೇಸ್ ಮಾಡಿಕೊಂಡು ಹೋದದ್ದೇ ಒಂದು ರೋಚಕ ಪ್ರಸಂಗ. ರೌಡಿ ಜಯರಾಜ್ ಹೆದರುತ್ತಿದ್ದ ಕೆಲವೇ ಅಧಿಕಾರಿಗಳಲ್ಲಿ ಶಿವರಾಂ ಒಬ್ಬರು. ಕೋಳಿ ಫಯಾಜ್ ಈ ಅಧಿಕಾರಿಯ ಎದುರು ಕೈಎತ್ತಿ ಶರಣಾಗತನಾಗಿದ್ದ. ಚಕ್ರೆ ಅಕ್ಷರಶಃ ಮೂತ್ರ ಮಾಡಿಕೊಂಡಿದ್ದ. ತನ್ವೀರ್ ಕೈಲಿ ಚಿಕ್ಕಪೇಟೆ ಠಾಣೆಯ ಅಷ್ಟೂ ಕಕ್ಕಸ್ಸುಗಳನ್ನು ಬರಿಗೈಲಿ ತಿಕ್ಕಿ ತೊಳಿಸಿದ್ದರು ಶಿವರಾಂ. ಅವನ ಕಾಲು ಶಾಶ್ವತವಾಗಿ ಊನವಾಗುವಂತೆ ಮುರಿದುಹಾಕಿದ್ದರು. ಶಿವರಾಂ ಹೊಡೆತಕ್ಕೆ ನುಗ್ಗಾದವನು ಕಾಲಾಪತ್ಥರ್.

ಯಾವಾಗ್ಯಾವಾಗ ಬೆಂಗಳೂರಿನಲ್ಲಿ 'ನಾನು' ಅಂತ ಎದೆಸೆಟೆಸಿ ರೌಡಿಯೊಬ್ಬನು ಎದ್ದು ನಿಂತಿದ್ದಾನೋ, ಅವಾಗಾವಾಗಲೆಲ್ಲ ಅವನೆದೆಗೆ ಎಡಗಾಲಿಟ್ಟು 'ಎಲ್ಲರಿಗಿಂತ ದೊಡ್ಡದು ಕಾನೂನು' ಅಂತ ಖಚಿತಪಡಿಸಿದ ಶಿವರಾಂ, ಎಲ್ಲ ಕಾಲಕ್ಕೂ ನಾಗರಿಕರಿಗೆ ಮಿತ್ರರೇ ಆಗಿದ್ದರು.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.