ದ ರ್ಶನ್ ಬಗ್ಗೆ ನ್ಯೂಸ್ ಹಾಕಬೇಡ, ಮಾಧ್ಯಮಗಳಿಗೆ ಉಗಿದ ಗುರುಕಿರಣ್

 | 
ರಹ
 ನಟ ದರ್ಶನ್​ ಕೇಸ್​ ಬಗ್ಗೆ ಈಗಾಗಲೇ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈಗ ಸಂಗೀತ ನಿರ್ದೇಶಕ ಗುರು ಕಿರಣ್​ ಕೂಡ ಮಾತನಾಡಿದ್ದಾರೆ. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ದರ್ಶನ್​ ಪ್ರಕರಣ ವೈಯಕ್ತಿಕ.
 ಅದಕ್ಕೂ ಸಿನಿಮಾ ರಂಗಕ್ಕೂ ಸಂಬಂಧ ಇಲ್ಲ ಎಂದು ಗುರು ಕಿರಣ್​ ಹೇಳಿದ್ದಾರೆ.ಇನ್ನು ಕನ್ನಡ ಚಿತ್ರರಂಗದಲ್ಲಿ ದರ್ಶನ್​ ಮತ್ತು ಗುರು ಕಿರಣ್​ ಜೊತೆಯಾಗಿ ಕೆಲಸ ಮಾಡಿದವರು. ಆ ಹಿನ್ನೆಲೆಯಲ್ಲಿ ಗುರು ಕಿರಣ್​ ಅವರು ದರ್ಶನ್​ ಕುರಿತು ಪ್ರತಿಕ್ರಿಯಿಸಿದ್ದಾರೆ. ಸ್ನೇಹಿತನಾಗಿ ದರ್ಶನ್​ ಹೊರಗೆ ಬರಬೇಕು ಅಂತ ನಾವು ಹೇಳುತ್ತೇವೆ. 
ಆದರೆ ಕಾನೂನಿಗೆ ಅದರದ್ದೇ ಆದ ಪ್ರಕ್ರಿಯೆ ಇದೆ. ಪೊಲೀಸ್​ನವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಕಾನೂನು ಕ್ರಮ ಆಗಲಿ ಎಂದಿದ್ದಾರೆ ಗುರು ಕಿರಣ್​. ಆದರೆ ಮಾಧ್ಯಮದವರು ಯಾಕೆ ಪದೇ ಪದೆ ದರ್ಶನ್ ಅತ್ತ ಫೋಕಸ್ ಮಾಡೋದು ಯಾಕೆ. ಅವರು ನಿಂತರೂ, ಮಲಗಿದರೂ ಸುದ್ದಿ ಮಾಡ್ತೀರಿ ಎಂದಿದ್ದಾರೆ.
ಅಂದ್ಹಾಗೆ ಗುರು ಕಿರಣ್ ಈ ಎಲ್ಲ ಮಾತುಗಳನ್ನ ರೋಜಿ ಚಿತ್ರದ ಒರಟ ಪ್ರಶಾಂತ್ ಪೋಸ್ಟರ್ ರಿಲೀಸ್ ಪ್ರೆಸ್ ಮೀಟ್‌ನಲ್ಲಿಯೇ ಮಾತನಾಡಿದ್ದಾರೆ. ಈ ಮೂಲಕ ಗುರು ಕಿರಣ್ ಮತ್ತೊಮ್ಮೆ ಹೊಸಬರ ಚಿತ್ರಕ್ಕೆ ಸಂಗೀತ ಕೊಡಲು ಆರಂಭಿಸಿದ್ದಾರೆ ಅಂತಲೇ ಹೇಳಬಹುದು. ಒಟ್ಟಿನಲ್ಲಿ ಇಡೀ ಚಿತ್ರರಂಗ ಈಗಲೂ ದರ್ಶನ್ ಪರ ಇದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.