ಇನ್ನೂ ಕೂಡ ಆಧಾರ್ ಪಾನ್ ಲಿಂಕ್ ಮಾಡಿಲ್ವಾ, ಹಾಗಾದರೆ ನಾಳೆಯಿಂದ ಬರೋಬ್ಬರಿ ಇಷ್ಟು ಫೈನ್ ಕಟ್ಟಲೇ ಬೇಕು

 | 
Bd

 ಇನ್ನೇನು ಜೂನ್ ತಿಂಗಳು ಮುಗಿಯುತ್ತಿದೆ. ನೀವು ಇನ್ನೂ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ ಆದಷ್ಟು ಬೇಗ ಈ ಕಾರ್ಯ ಮಾಡಿ ಮುಗಿಸಿ. ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವು ಹತ್ತಿರ ಬಂದಿದೆ. ಈ ಮೊದಲು ಪ್ಯಾನ್​ ಮತ್ತು ಆಧಾರ ಜೋಡಣೆ ಮಾಡುವುದಕ್ಕೆ ಮಾರ್ಚ್ 31 ರವರೆಗೆ ಸಮಯವನ್ನು ನಿಗದಿಪಡಿಸಲಾಗಿತ್ತು. ಆಗ ಅದನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿತ್ತು. 

ಈಗ ಈ ಗಡುವಿನೊಳಗೆ ನೀವು ಪ್ಯಾನ್-ಆಧಾರ್ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ವಾಸ್ತವವಾಗಿ ಈ ಹಿಂದೆ ಪ್ಯಾನ್-ಆಧಾರ್ ಲಿಂಕ್ ಮಾಡುವ ಅಗತ್ಯವಿರಲಿಲ್ಲ. ಆದರೆ ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ. ಜುಲೈ 1, 2017 ರಂದು ನೀಡಲಾದ ಎಲ್ಲಾ ಪ್ಯಾನ್ ಕಾರ್ಡ್‌ಗಳಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.


ಹೌದು ನಿಗದಿತ ಗಡುವಿನೊಳಗೆ ಪ್ಯಾನ್​- ಆಧಾರ್ ಲಿಂಕ್​ ಮಾಡಿದಲ್ಲಿ ವಿಳಂಬ ಶುಲ್ಕವಾದ 1 ಸಾವಿರ ರೂ. ಮಾತ್ರ ಪಾವತಿಸಬೇಕು. ಇಲ್ಲವಾದಲ್ಲಿ 10 ಸಾವಿರ ದಂಡ ಕಟ್ಟಬೇಕಾಗುತ್ತದೆ. ಪ್ಯಾನ್​ ನಿಷ್ಕ್ರಿಯವಾಗಿರುವ ಅವಧಿಯವರೆಗಿನ ಮರುಪಾವತಿಗಳಿಗೆ ಬಡ್ಡಿಯೂ ಸಿಗುವುದಿಲ್ಲ. ಯಾವುದೇ ತೆರಿಗೆ ಮರುಪಾವತಿಯೂ ಆಗುವುದಿಲ್ಲ. ಟಿಡಿಎಸ್​ ಮತ್ತು ಟಿಸಿಎಸ್​ ಅನ್ನು ಅಧಿಕ ಪ್ರಮಾಣದಲ್ಲಿ ಕಡಿತ ಮಾಡಲಾಗುತ್ತದೆ.


ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿದಾಗ, ನಿಮ್ಮ ಹಲವು ಪ್ರಮುಖ ಕೆಲಸಗಳು ನಿಲ್ಲುತ್ತವೆ. ಮ್ಯೂಚುವಲ್ ಫಂಡ್‌ಗಳು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಇದರ ಹೊರತಾಗಿ, ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ 50 ಸಾವಿರ ರೂ.ಗಿಂತ ಹೆಚ್ಚಿನ ನಗದು ಹಿಂಪಡೆಯಲು ಬ್ಯಾಂಕ್‌ನಲ್ಲಿ ಪ್ಯಾನ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಒಂದೇ ಬಾರಿಗೆ ಅಷ್ಟು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ನೀವು ತೆರಿಗೆ ಪ್ರಯೋಜನ, ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಸಾಲದಂತಹ ಸೌಲಭ್ಯಗಳಿಂದ ವಂಚಿತರಾಗಬಹುದು.


2020ರ ಜನವರಿವರೆಗೆ 30.75 ಕೋಟಿ ಪಾನ್‌ ಕಾರ್ಡುಗಳು ಆಧಾರ್‌ ಜತೆ ಸಂಯೋಜನೆಯಾಗಿವೆ. ಇನ್ನೂ 17.58 ಕೋಟಿ ಪಾನ್‌ ಸಂಖ್ಯೆಗಳು ಸಂಯೋಜನೆ ಆಗಬೇಕಿವೆ ಎಂದು ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ.


ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.