FactCheck:SSLC ಪರೀಕ್ಷೆ ರದ್ದು ಮಾಡಿಸ ಸರ್ಕಾರ, ವಿದ್ಯಾರ್ಥಿಗಳಲ್ಲಿ ಸಂಭ್ರಮ? ಏನಿದು
Mar 3, 2025, 13:57 IST
|

ಕನ್ನಡ ನಾಡು ನುಡಿ ಅಂತ ಬಂದ್ರೆ ಸಾಕು ಸಾಮಜಿಕ ಕಾರ್ಯಕರ್ತರಾದ ವಾಟಾಳ್ ನಾಗರಾಜ್ ಸಿಡಿದು ಏಳುತ್ತಾರೆ. ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿಗರಿಂದ ಹಲ್ಲೆ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮಾರ್ಚ್ 22ರಂದು ಕರ್ನಾಟಕ ಬಂದ್ ಘೋಷಿಸಿದ್ದಾರೆ. ಆದರೆ, ಮಾರ್ಚ್ 21ರಿಂದ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿದೆ .
ಹಾಗಾಗಿ ಬಂದ್ ಬಿಸಿ ತಟ್ಟುವ ಸಾಧ್ಯತೆ ಇದೆ. ಬಂದ್ ಘೋಷಿಸಿರುವುದರಿಂದ ಪರೀಕ್ಷೆಗಳು ರದ್ದಾಗುತ್ತಾ? ಎಂಬ ಪ್ರಶ್ನೆಯೂ ಎದ್ದಿದ್ದು, ಇದಕ್ಕೆ ಖುದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ದಿಢೀರನೆ ಬಂದ್ ಘೋಷಿಸಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪೋಷಕರು ಕೂಡ ಶಾಕ್‌ಗೆ ಒಳಗಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲೇ ಬಂದ್ ಘೋಷಿಸಿರುವುದು ಸರಿಯಲ್ಲ. ಇದರಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗಲಿದೆ ಎಂದು ಅಳಲು ತೋಡಿಕೊಂಡಿದ್ದರು.
ಒಂದು ವೇಳೆ ಬಂದ್ ನಡೆದಿದ್ದೇ ಆದರೆ, ವಿದ್ಯಾರ್ಥಿಗಳ ಪರೀಕ್ಷೆ ಕಥೆ ಏನು? ಎಂಬ ಆತಂಕ ಕೂಡ ಇದೆ. ಈ ಎಲ್ಲದಕ್ಕೂ ಶಿಕ್ಷಣ ಸಚಿವರು ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಮಾರ್ಚ್ 22ರಂದು 7, 8 ಹಾಗೂ 9ನೇ ತರಗತಿ ಪರೀಕ್ಷೆಗಳ ದಿನಾಂಕ ಈಗಾಗಲೇ ನಿಗದಿಯಾಗಿದೆ. ಬಂದ್ ಎಂಬ ಕಾರಣಕ್ಕೆ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ. ಒಂದು ವೇಳೆ ಬಂದ್ ಇದ್ದರೂ ಸಹ ಯಾವ ಪರೀಕ್ಷೆಗಳನ್ನೂ ಮುಂದೂಡುವ ಪ್ರಶ್ನೆಯೇ ಇಲ್ಲ.
ಪರೀಕ್ಷೆಗಳು ಅದರ ಪಾಡಿಗೆ ಅದು ನಡೆಯಲಿವೆ. ನನ್ನ ಪ್ರಕಾರ ಮಕ್ಕಳಿಗೆ ತೊಂದರೆ ಆಗುತ್ತೆ ಎನ್ನುವುದಾದ್ರೆ ಯಾರೂ ಬಂದ್‌ಗೆ ಸಹಕಾರ ಕೊಡುವುದಿಲ್ಲ. ಹಾಗಾಗಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೋರಾಟಗಾರರು ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಬಂದ್ ಮಾಡುತ್ತಾರೆ. ಮಕ್ಕಳ ಪರೀಕ್ಷೆಗೆ ಅವರು ಸಹಕಾರ ಕೊಡುತ್ತಾರೆ. ಹಾಗಾಗಿ ನಾನು ಎಲ್ಲ ಹೋರಾಟಗಾರರಿಗೆ ಮನವಿ ಮಾಡುತ್ತೇನೆ. ಹೋರಾಟ ಮಾಡುವುದು ನಿಮ್ಮ ಹಕ್ಕು, ತಪ್ಪಿಲ್ಲ. ಆದರೆ ಮಕ್ಕಳಿಗೆ ಪರೀಕ್ಷೆ ಎನ್ನುವುದು ಬಹಳ ಮುಖ್ಯ. ಅವರ ಭವಿಷ್ಯವೇ ಈ ಪರೀಕ್ಷೆಯಲ್ಲಿದೆ. ಹಾಗಾಗಿ ಅವರಿಗೆ ನೀವೆಲ್ಲ ಅಡ್ಡಿಪಡಿಸುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.