FactCheck:ಹೊಸ ಪಕ್ಷ ಕಟ್ಟಲು ದುಡ್ಡಿಲ್ಲ ಎಂದಿದ್ದ ಯತ್ನಾಳ್ ಮನೆಗೆ ಬಂತು 1.50 ಕೋಟಿ ಬೆಲೆಯ ಐಶಾರಾಮಿ ಕಾರು
Apr 13, 2025, 09:54 IST
|

ಈ ವೇಳೆ ಯತ್ನಾಳ್ ಜೊತೆಯಲ್ಲಿ ಪುತ್ರ ರಾಮನಗೌಡ ಪಾಟೀಲ್ ಹಾಗೂ ಕೆಲ ಬೆಂಬಲಿಗರು ಉಪಸ್ಥಿತರಿದ್ರು.ವಿಜಯಪುರದ ಸಿದ್ದೇಶ್ವರ ದೇವಸ್ಥಾನದಲ್ಲಿ ಹೊಸ ಕಾರಿಗೆ ಯತ್ನಾಳ್ ಪೂಜೆ ಮಾಡಿಸಿದ್ದಾರೆ. ಇದೇ ವೇಳೆ ಮಾತಾಡಿದ ಯತ್ನಾಳ್, ವಿಜಯದಶಮಿವರೆಗೆ ರಾಜ್ಯ ಪ್ರವಾಸ ಮಾಡೋದಾಗಿ ಹೇಳಿದ್ದಾರೆ.ಜನರ ಅಭಿಪ್ರಾಯ ಸಂಗ್ರಹ ಮಾಡಲು ಈ ಪ್ರವಾಸ ಕೈಗೊಂಡಿದ್ದೇನೆ ಎಂದಿದ್ದ ಯತ್ನಾಳ್ ಅವರು, ಪ್ರವಾಸದ ಹಿನ್ನೆಲೆಯಲ್ಲಿಯೇ ಹೊಸ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ ಎನ್ನಲಾಗ್ತಿದೆ.
ಇದು ಟೋಯೋಟಾ ವೆಲ್ ಫೆರ್ ಕಾರಾಗಿದೆ. ಇದರ ಬೆಲೆ ಸುಮಾರು 1.80 ಕೋಟಿ ಇದೆ.ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ ಯತ್ನಾಳ್ ಮಾಧ್ಯಮಗಳ ಮುಂದೆ ಬಂದಾಗಲೆಲ್ಲಾ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಕೆಲ ದಿನಗಳ ಹಿಂದೆ ಮಾತಾಡಿದ್ದ ಯತ್ನಾಳ್, ವಿಜಯೇಂದ್ರಗೆ ಓಪನ್ ಚಾಲೆಂಜ್ ಹಾಕಿದ್ರು.
ಇನ್ನು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ಮಾತನಾಡಿದ ಯತ್ನಾಳ್ ಅವರು, ನೀನು ರಾಜೀನಾಮೆ ಕೊಡು, ನಾನೂ ರಾಜೀನಾಮೆ ಕೊಡ್ತೀನಿ. ಉಪಚುನಾವಣೆಗೆ ಹೋಗೋಣ, ಯಾರ ತಾಕತ್ತು ಜಾಸ್ತಿ ಅಂತ ತೋರಿಸೋಣ, ಎಂದು ಸವಾಲು ಹಾಕಿದ್ದಾರೆ.
ನಾನು ಕೇವಲ ಭಗವಾ ಧ್ವಜದ ಮೇಲೆ ಗೆಲ್ಲುತ್ತೇನೆ, ನನಗೆ ಸಾಬರ್ ವೋಟ್ ಬೇಡ. ವಿಜಯೇಂದ್ರಗೆ ಧಮ್ ಇದ್ರೆ ನೇರವಾಗಿ ನನ್ನ ಜೊತೆ ಮಾತಾಡಲಿ, ಹಂದಿಗಳ ಕಡೆ ಮಾತಾಡಬೇಡ,ಎಂದು ಪರೋಕ್ಷವಾಗಿ ರೇಣುಕಾಚಾರ್ಯರನ್ನು ಹಂದಿ ಎಂದು ಕರೆದರು. ಹಂದಿಗಳು ಹೊರಗೆ ಇರಬೇಕು, ಮನೆ ಒಳಗೆ ಕರೆತರಬಾರದು,ಎಂದು ತಮ್ಮ ಟೀಕೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023