ಫ್ರೀನು ಬೇಡ ಏನೂ ಬೇಡ; ಭಾಗ್ಯಗಳ ಬಗ್ಗೆ ರೊಚ್ಚಿಗೆದ್ದ ಮಹಿಳೆಯ ರು

 | 
Ha

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪಿ ಸಿ ಗದ್ದಿಗೌಡರ್‌ಗೆ ಟಿಕೆಟ್‌ ನೀಡಿದ್ದು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಂಯುಕ್ತಾ ಪಾಟೀಲ್‌ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ನಡುವೆ ಜಿದ್ದಾಜಿದ್ದಿ ಹೇಗಿದೆ? ಮತದಾರರ ಒಲವು ಯಾರ ಪರವಿದೆ ಎಂಬುದನ್ನು ನಟ ಪ್ರಥಮ್ ಜನರ ಅಭಿಪ್ರಾಯದ ಮೂಲಕ ಸಂಗ್ರಹಿಸಿದ್ದಾರೆ.

ಸಚಿವ ಶಿವಾನಂದ ಪಾಟೀಲ್ ಮಗಳಾದ ಸಂಯುಕ್ತಾ ಪಾಟೀಲ್ ಅವರನ್ನು ಈ ಬಾರಿ ಕಾಂಗ್ರೆಸ್ ಕಣಕ್ಕಿಳಿಸಿದೆ. ಅವರನ್ನು ಸೋಲಿಸಲು ಬಿಜೆಪಿ ದೊಡ್ಡ ರಣತಂತ್ರ ಹೆಣೆದಿದ್ದು, ಅವರ ಅಣ್ಣ ಹರ್ಷಗೌಡ ಪಾಟೀಲ್‌ಗೆ ಬಲೆ ಬೀಸಿದ್ದಾರೆ. ತಂಗಿಯ ವಿರುದ್ಧ ಅಣ್ಣನಿಂದ ಪ್ರಚಾರ ಮಾಡಿಸಿ ಕಾಂಗ್ರೆಸ್ ಓಟನ್ನು ಒಡೆದಿದ್ದಾರೆ.

ಸಚಿವ ಶಿವಾನಂದ್ ಪಾಟೀಲ್ ಸಹೋದರರ ಪುತ್ರ ಹರ್ಷಗೌಡ ಪಾಟೀಲ್. ಸಂಯುಕ್ತ ಪಾಟೀಲ್ ಅವರ ದೊಡ್ಡಪ್ಪನ ಮಗ. ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಮೆಚ್ಚಿ ರಾಷ್ಟ್ರ ಕಟ್ಟುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ. ಬಿಜೆಪಿ ಸೇರುವುದು ಬಹಳ ವರ್ಷದ ಕನಸಾಗಿತ್ತು ಎಂದು ಹರ್ಷಗೌಡ ಪಾಟೀಲ್ ಹೇಳಿದ್ದಾರೆ. ಹಾಗಾಗಿ ಹಲವಾರು ಜನ ಬಿಜೆಪಿಗೆ ಮತ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬೆಸೆತ್ತ ಕೆಲ ಮಹಿಳೆಯರು. ನಮಗೆ ಯಾವುದು ಫ್ರೀ ಬೇಡ. ಜನ ಟ್ಯಾಕ್ಸ್ ಕಟ್ಟೋದು ಅಭಿವೃದ್ಧಿಗೆ ಅದರ ಹೊರತಾಗಿ ಫ್ರೀ ಆಗಿ ನೀಡೋದು ಬೇಡ ಎಂದು ಬಿಗ್ಬಾಸ್ ಖ್ಯಾತಿಯ ನಟ ಪ್ರಥಮ್ ಜನರ ಅಭಿಪ್ರಾಯ ಸಂಗ್ರಹಿಸಲು ಹೋದಾಗ ಹೇಳಿದ್ದಾರೆ. ಅವರ ಒಲವು ಕೂಡಾ ಬಿಜೆಪಿಯ ಕಡೆಗೆ ಇರುವಂತೆ ಕಾಣುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.