ಕರುನಾಡಿಗೆ ಸಿಹಿಸುದ್ದಿ, ಮುದ್ದಾದ ಮಗುವಿಗೆ ಜನ್ಮ ಕೊಟ್ಟ ಹರಿಪ್ರಿಯಾ ವಸಿಷ್ಠ
Jan 27, 2025, 13:40 IST
|

ಸ್ನೇಹಿತರೇ...ಹೌದು, 2023ರ ಜನವರಿ 26ರಂದು ಹರಿಪ್ರಿಯಾ, ವಸಿಷ್ಠ ಸಿಂಹ ಅವರು ಮೈಸೂರಿನಲ್ಲಿ ಮದುವೆಯಾಗಿದ್ದರು. ಈಗ ಇದೇ ದಿನ ಹರಿಪ್ರಿಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು ನಟಿ ಹರಿಪ್ರಿಯಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ವಸಿಷ್ಠ ಸಿಂಹ- ಹರಿಪ್ರಿಯಾ ಬಾಳಲ್ಲಿ ಈಗ ಪುತ್ರನ ಆಗಮನವಾಗಿದೆ.
ಸ್ನೇಹಿತರೇ... ಕಳೆದ ಕೆಲ ದಿನಗಳ ಹಿಂದಷ್ಟೇ ವಸಿಷ್ಠ ಸಿಂಹ ಅವರು ಪತ್ನಿ ಹರಿಪ್ರಿಯಾರ ಸೀಮಂತವನ್ನು ಅದ್ದೂರಿಯಾಗಿ ಮಾಡಿದ್ದರು. ಕನ್ನಡದ ಖ್ಯಾತ ನಟ, ನಟಿಯರು, ನಿರ್ದೇಶಕರು ಈ ಸೀಮಂತಕ್ಕೆ ಆಗಮಿಸಿ, ಈ ಜೋಡಿಗೆ ಶುಭ ಹಾರೈಸಿದ್ದರು. ವಿಭಿನ್ನವಾದ ಸ್ಟೈಲ್‌ನಲ್ಲಿ ಸಂಪ್ರದಾಯದ ಮಿಶ್ರಣದ ಜೊತೆಗೆ ಸೀಮಂತ ಆಗಿತ್ತು. ಇನ್ನು ಇವರ ಮನೆಯಲ್ಲಿ ಬೇಬಿ ಶವರ್ ಆಚರಿಸಲಾಗಿತ್ತು. ಈ ಫೋಟೋಗಳನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ, ಅದಕ್ಕೂ ಮುನ್ನ ಈ ದಂಪತಿ ವಿಭಿನ್ನವಾಗಿ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದೆ.
ಸ್ನೇಹಿತರೇ...ಹರಿಪ್ರಿಯಾ, ವಸಿಷ್ಠ ಸಿಂಹ ಅವರು ಮೂರ್ನಾಲ್ಕು ವರ್ಷಗಳ ಕಾಲ ಪ್ರೀತಿಸಿದ್ದರು. ಇನ್ನು ದುಬೈನಲ್ಲಿ ಇವರಿಬ್ಬರು ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದ ವಿಡಿಯೋ, ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ಗಾಸಿಪ್ ಹರಡಿದಾಗ ಈ ಜೋಡಿ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆ ನಂತರ ಇವರಿಬ್ಬರು ಮನೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡು, ನಾವಿಬ್ಬರು ಮದುವೆ ಆಗುತ್ತಿರೋದು ಪಕ್ಕಾ ಎಂದು ತಿಳಿಸಿತ್ತು. ಆಮೇಲೆ ಈ ಜೋಡಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗಿತ್ತು. ಈ ಮದುವೆಗೆ ಸ್ಯಾಂಡಲ್‌ವುಡ್ ಗಣ್ಯರು, ಎರಡು ಕುಟುಂಬಸ್ಥರು ಆಗಮಿಸಿ ಹರಸಿದ್ದರು.
ಸ್ನೇಹಿತರೇ...ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆಯಾದಮೇಲೆ ಬಾಲಿ ಮುಂತಾದ ಸ್ಥಳಗಳಿಗೆ ಪ್ರವಾಸ ತೆರಳಿದ್ದರು. ತಂದೆಯನ್ನು ಕಳೆದುಕೊಂಡಿರುವ ಹರಿಪ್ರಿಯಾ ಅವರು ಅಪ್ಪ ಇಲ್ಲ ಎನ್ನುವ ಕೊರತೆ ಬಾರದೆ ಇರಲಿ ಎಂದು ಅವರು ಎಲ್ಲಿಯೇ ಹೋದರೂ ಕೂಡ ಪತಿ ವಸಿಷ್ಠ ಅವರ ಕೈ ಹಿಡಿದುಕೊಂಡು ಹೋಗುತ್ತಾರೆ. ಇನ್ನು ಸಿನಿಮಾ ವಿಚಾರವಾಗಿ ಮಾತನಾಡಿರುವ ಹರಿಪ್ರಿಯಾ ಹಲವಾರು ಬಾರಿ ಕೆಲಸದ ವಿಚಾರದಲ್ಲಿ ನನಗೆ ನನ್ನ ಪತಿ ವಸಿಷ್ಠ ತುಂಬ ಬೆಂಬಲ ಕೊಡ್ತಾರೆ.
ಆದರೆ ಪರಸ್ಪರ ನಾವಿಬ್ಬರು ಕೆಲಸದ ವಿಚಾರವಾಗಿ ಮಧ್ಯ ಪ್ರವೇಶ ಮಾಡೋದಿಲ್ಲ. ನಾನು ಯಾವ ಸ್ಕ್ರಿಪ್ಟ್ ಆಯ್ಕೆ ಮಾಡಬೇಕು ಅಂತ ವಸಿಷ್ಠ ಹೇಳೋದಿಲ್ಲ ಎಂದು ಹೇಳಿದ್ದರು.
ವಸಿಷ್ಠ ಸಿಂಹ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಕಳೆದ ಬಾರಿ ಅವರು ʼಲವ್ ಲೀʼ ಸಿನಿಮಾ ಮೂಲಕ ವೀಕ್ಷಕರ ಮುಂದೆ ಬಂದಿದ್ದರು. ಈಗ ಹರಿಪ್ರಿಯಾ ಅವರು ಮಗುವಿನ ವಿಚಾರಕ್ಕೆ ಒಂದಷ್ಟು ಸಮಯ ಬ್ರೇಕ್ ತಗೊಂಡು, ಆಮೇಲೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲೂಬಹುದು. ನೀವೂ ಈ ಜೋಡಿಗೆ ಶುಭಾಶಯ ತಿಳಿಸಿ, ಆಯ್ತಾ?
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023