6 ತಿಂಗಳಿನಿಂದ ರೇಷನ್ ಪಡೆಯದವರಿಗೆ ಬಿಗ್ ಶಾ.ಕ್ ಕೊಟ್ಟ ಸರ್ಕಾರ

 | 
Nvv

ಸುಮಾರು ದಿನದಿಂದ ರೇಷನ್‌ ಪಡೆಯದವರಿಗೆ ಆಹಾರ ಇಲಾಖೆ ಶಾಕ್‌ ನೀಡಿದೆ. ರೇಷನ್‌ ಕಾರ್ಡ್‌ ಇದ್ದರೂ 6 ತಿಂಗಳಿಂದ ರೇಷನ್‌ ಪಡೆಯದವರ ಕಾರ್ಡ್‌ ಅನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಈ ಬಿಪಿಎಲ್‌, ಅಂತ್ಯೋದಯ ಹಾಗೂ ಪಿಎಚ್‌ಎಚ್‌ ಕಾರ್ಡ್‌ಗಳಿಂದ ರೇಷನ್‌ ಪಡೆಯದೇ ಆರು ತಿಂಗಳಾಗಿದ್ದರೆ ಅಂತಹ ರೇಷನ್‌ ಕಾರ್ಡ್‌ಗಳನ್ನು ಅಮಾನತು ಮಾಡಲು ಮುಂದಾಗಿದೆ.

ಆರು ತಿಂಗಳಿಂದ ಒಟ್ಟು 3.26 ಲಕ್ಷ ಕುಟುಂಬಗಳು ಪಡಿತರವನ್ನೇ ಪಡೆದಿಲ್ಲ. ಈ ಹಿನ್ನೆಲೆ ಪಡಿತರ ಪಡೆಯದ ರೇಷನ್‌ ಕಾರ್ಡ್ಗಳ ಡೇಟಾ ಸಂಗ್ರಹಿಸಿ ಅವುಗಳ ಅಮಾನತಿಗೆ ಆದೇಶ ನೀಡಿದೆ. ಈ ವಾರದಲ್ಲಿ 3.26 ಲಕ್ಷ ಕಾರ್ಡ್ಗಳು ರದ್ದಾಗಲಿವೆ. ಸದ್ಯ ರಾಜ್ಯದಲ್ಲಿ ಅಂತ್ಯೋದಯ, ಪಿಎಚ್‌ಎಚ್‌ ಹಾಗೂ ಎನ್‌ಪಿಎಚ್‌ಎಚ್ ಸೇರಿ ಒಟ್ಟು 52.34 ಲಕ್ಷ ರೇಷನ್‌ ಕಾರ್ಡ್‌ಗಳಿದ್ದು, 1 ಕೋಟಿ 52 ಲಕ್ಷದಷ್ಟು ಫಲಾನುಭವಿಗಳಿದ್ದಾರೆ. 

ಬಿಪಿಎಲ್ನಲ್ಲಿ 1,27,82,893 ರೇಷನ್‌ ಕಾರ್ಡ್ಗಳಿದ್ದು ಒಟ್ಟು 4,37,65,128 ರಷ್ಟು ಫಲಾನುಭವಿಗಳಿದ್ದಾರೆ.
ಇದರಲ್ಲಿ ಈಗ 6 ತಿಂಗಳಿಂದ ಪಡಿತರ ಪಡೆಯದ 3 ಲಕ್ಷದ 26 ಸಾವಿರ ರೇಷನ್‌ ಕಾರ್ಡ್‌ಗಳನ್ನು ಅಮಾನತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಎರಡು ತಿಂಗಳ ಹಿಂದೆ ಮೃತಪಟ್ಟವರ ಹೆಸರಿದ್ದ ರೇಷನ್‌ ಕಾರ್ಡ್‌ಗಳನ್ನು ರದ್ದುಗೊಳಿಸಿ ಸಾರ್ವಜನಿಕರಿಗೆ ಆಹಾರ ಇಲಾಖೆ ಬಿಸಿ ಮುಟ್ಟಿಸಿತ್ತು. ಈಗ ಆರು ತಿಂಗಳಿನಿಂದ ಪಡಿತರ ಪಡೆಯದ ರೇಷನ್‌ ಕಾರ್ಡ್‌ಗಳನ್ನು ರದ್ದುಗೊಳಿಸಲು ಮುಂದಾಗಿದೆ. 

ಇದರಿಂದ ಆಹಾರ ಇಲಾಖೆಗೆ ಅನುಕೂಲ ಆಗಲಿದ್ದು, ಹೊಸ ಕಾರ್ಡ್ ಸೇರ್ಪಡೆಗೂ ಸರ್ಕಾರ ಅವಕಾಶ ನೀಡುವ ನಿರೀಕ್ಷೆ ಇದೆ. ಇನ್ನು, ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌ ತಿದ್ದುಪಡಿಗೆ ನೀಡಿದ್ದ ಡೆಡ್‌ಲೈನ್‌ ಅನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಆಹಾರ ಇಲಾಖೆ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಹೊಸ ದಿನಾಂಕ ನಿಗದಿಪಡಿಸಿದೆ. ಈ ಮೊದಲು ಅಕ್ಟೋಬರ್‌ 5 ರಿಂದ 13ರವರೆಗೂ ಮೂರು ಹಂತಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಸರ್ವರ್‌ ಸಮಸ್ಯೆ ಉಂಟಾದ ಹಿನ್ನೆಲೆ ಕೆಲ ಜಿಲ್ಲೆಗಳಿಗೆ ತಿದ್ದುಪಡಿ ಅವಕಾಶ ನೀಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.