ಬಿಗ್ಬಾಸ್ ಮನೆಗೆ ಹನುಮಂತನ ಬಾವಿ ಪತ್ನಿ ಎಂಟ್ರಿ, ನಾಚಿ ನೀರಾದ ಹನುಮಂತು
Dec 18, 2024, 20:12 IST
|
ಬಿಗ್ ಬಾಸ್ ಮನೆಯಲ್ಲಿ ಇದೀಗ ಹನುಮಂತನ ಚಮತ್ಕಾರ ಜೋರಾಗಿದೆ. ಉತ್ತರ ಕರ್ನಾಟಕದ ಹನುಮಂತನ ಆಟಕ್ಕೆ ಇದೀ ರಾಜ್ಯಾದ್ಯಂತ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ.
ಇನ್ನು ಬಿಗ್ ಬಾಸ್ ಮನೆಗೆ ಇತ್ತಿಚೆಗೆ ಹಲವಾರು ಸ್ಪರ್ಧಿಗಳ ಮನೆಯವರ ಫೋನ್ ಕಾಲ್ ಸಂದೇಶ ಅಥವಾ ಪತ್ರದ ಸಂದೇಶ ಬಂದಿತ್ತು. ಆದರೆ ಇದಕ್ಕೆ ಪೂರಕವಾಗಿ ಹನುಮಂತನ ಮನೆಯಿಂದ ಇದೀಗ ಹನುಮನ ಗೆಳತಿ ಬಂದಿದ್ದಾರೆ ಎನ್ನಲಾಗಿದೆ.
ಮುಗ್ಧ ಹನುಮಂತನ ನೆಚ್ಚಿನ ಗೆಳತಿಯ ಎಂಟ್ರಿ ಆಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಇನ್ನು ಈ ಬಗ್ಗೆ ಇವತ್ತಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವೀಕ್ಷಕರ ಮುಂದೆ ಹನುಮಂತ ಗೆಳತಿ ಬರಲಿದ್ದಾರೆ.