ಸೌಜನ್ಯ ಸಿನಿಮಾ‌ ಮಾಡಲು ಮುಂದಾದ ಹರ್ಷಿಕಾ ಪೂಣಚ್ಚ, ಬಾಕ್ಸ್ ಆಫೀಸ್ ಕಲೆಕ್ಷನ್ ಪಕ್ಕಾ ಎಂದ ಕನ್ನಡಿಗರು

 | 
Jjjg
ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಈಗ ಎಲ್ಲೆಡೆ ಜಸ್ಟೀಸ್‌ ಫಾರ್‌ ಸೌಜನ್ಯ ಅಭಿಯಾನ ಜೋರಾಗಿದೆ. ಹಲವು ಮಂದಿ ಈ ವಿಚಾರದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಕೂಡ ಸೌಜನ್ಯ ವಿಚಾರವಾಗಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಮದುವೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಚಿತ್ರರಂಗದಿಂದ ತುಸು ಬ್ರೇಕ್‌ ಪಡೆದಿದ್ದ ಹರ್ಷಿಕಾ ಅವರು ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. 
ನೈಜ ಘಟನೆಯಾಧಾರಿತ ಸಿನಿಮಾವೊಂದಕ್ಕೆ ಆಕ್ಷನ್‌ ಕಟ್‌ ಹೇಳಲು ರೆಡಿಯಾಗಿದ್ದು, ಈ ಸಿನಿಮಾಗೆ ಚಿ:ಸೌಜನ್ಯ ಎಂದು ಟೈಟಲ್‌ ಇಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.ಸ್ಯಾಂಡಲ್‌ವುಡ್‌ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹರ್ಷಿಕಾ ಅವರು ಇದೀಗ ನಿರ್ದೇಶಕಿಯಾಗಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನಕ್ಕೆ ನೈಜ ಘಟನೆ ಆಧಾರಿತ ಹಾಗೂ ಕ್ರೈಂ ಥ್ರಿಲ್ಲರ್‌ ಕಥೆಗೆ ಕೈಹಾಕಿದ್ದಾರೆ. ಈ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿರುವ ಅವರು ಹೊಸ ಆರಂಭಗಳು, ನನ್ನ ಮೊದಲ ನಿರ್ದೇಶನಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕು ಎಂದು ಹರ್ಷಿಕಾ ಕೇಳಿಕೊಂಡಿದ್ದಾರೆ.
ಇನ್ನು ಈ ಚಿತ್ರಕ್ಕೆ ಚಿ:ಸೌಜನ್ಯ ಎಂದು ಹೆಸರಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವು ಸಖತ್‌ ಸದ್ದು ಮಾಡುತ್ತಿದೆ. ಎಲ್ಲೆಡೆ ಸೌಜನ್ಯಗೆ ನ್ಯಾಯ ಬೇಕು ಎನ್ನುವ ಘೋಷಣೆಗಳು ಕೇಳಿಬರುತ್ತಿವೆ. ಯೂಟ್ಯೂಬ್‌ನಲ್ಲಿ ಇತ್ತೀಚೆಗೆ ಈ ಕೇಸ್‌ಗೆ ಸಂಬಂಧಿಸಿದ ವಿಡಿಯೋ ಕೂಡ ಸಂಚಲನ ಸೃಷ್ಟಿಸಿರುವುದು ಗೊತ್ತೇ ಇದೆ. ಈ ಬೆಳವಣಿಗೆ ನಡುವೆಯೇ ಹರ್ಷಿಕಾ ಅವರು ಈ ಸಿನಿಮಾ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಈ ಸಿನಿಮಾದ ಟೈಟಲ್‌ನಲ್ಲೂ ಸೌಜನ್ಯ ಹೆಸರಿರುವುದರಿಂದ ಅದೇ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದ ಪೋಸ್ಟರ್‌ನಲ್ಲಿ ಹೆಣ್ಣುಮಗುವಿನ ಮೇಲಿನ ದೌರ್ಜನ್ಯ ಚಿತ್ರಣವಾಗಿದೆ. ಇದರಲ್ಲೇ ಜನರಲ್ಲೇ ಬಾಯಿಮುಚ್ಚಿಕೊಂಡಿರುವ ಚಿತ್ರಗಳೂ ಇವೆ. ಹಾಗಾಗಿ ಧರ್ಮಸ್ಥಳದ ಸೌಜನ್ಯ ಕಥೆಯನ್ನೇ ಹರ್ಷಿಕಾ ಪೂಣಚ್ಚ ಹೇಳಲು ಹೊರಟಿದ್ದಾರೆ. ಈ ಪೋಸ್ಟರ್‌ ಕೂಡ ಈ ನೈಜ ಘಟನೆಗೆ ಹೋಲುವಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಚಿ:ಸೌಜನ್ಯ-ಒಂದು ಹೆಣ್ಣಿನ ಕಥೆ ಎಂಬ ಪೋಸ್ಟರ್‌ ಎಲ್ಲೆಡೆ ವೈರಲ್‌ ಕೂಡ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.