ಕಾಂತಾರ ಚೆಲುವೆ ಸಪ್ತಮಿ ಗೌಡ ಅವರ ಮನೆ ಹೇಗಿದೆ ಗೊ.ತ್ತಾ; ಇವತ್ತಿಗೂ ಹಂಚಿನ ಮನೆಯಲ್ಲಿ ವಾಸ

 | 
ಗಗ

ಪಾಪ್‌ಕಾರ್ನ್ ಮಂಕಿ ಟೈಗರ್' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ನಟಿ ಸಪ್ತಮಿ ಗೌಡ. ಆನಂತರ ಕಾಂತಾರ ಸಿನಿಮಾದಿಂದ ಅಪಾರ ಜನಪ್ರಿಯತೆಯನ್ನು ಸಪ್ತಮಿ ಗೌಡ ಪಡೆದುಕೊಂಡರು. ಇದೀಗ ರಿಷಬ್ ಶೆಟ್ಟಿ ಅವರು ಕಾಂತಾರ: ಚಾಪ್ಟರ್‌ 1 ಸಿನಿಮಾ ಮಾಡುತ್ತಿದ್ದಾರೆ. 

ಕಾಂತಾರ ಸಿನಿಮಾ ಮೂಲಕ ಜನಪ್ರಿಯರಾಗಿರುವ ಸಪ್ತಮಿ ಗೌಡ, ಅದರ ಪ್ರೀಕ್ವೆಲ್‌ನಲ್ಲಿಯೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.ಸರಳ ಸುಂದರಿ ಎನಿಸಿಕೊಂಡಿರುವ ಇವರು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಇವರ ತಂದೆ ಕಡಕ್ ಪೋಲೀಸ್ ಅಧಿಕಾರಿ ಕೂಡಾ. ಇನ್ನು ಇವರ ಮನೆ ಸಕತ್ ಮಾಡರ್ನ್ ಆಗಿಯೂ ಚಂದವಾಗಿಯೂ ಇದೆ.

ಕೆಲ ದಿನಗಳ ಹಿಂದಷ್ಟೇ ಯುಟ್ಯೂಬ್ ಚಾನಲ್ ಒಂದರಲ್ಲಿ ಸಂದರ್ಶನ ನೀಡುವಾಗ ಮನೆಯ ಒಳಾಂಗಣ ವಿನ್ಯಾಸ ತೋರಿಸಿದ ಸಪ್ತಮಿ ಗೌಡ. ಪಟಪಟನೆ ಕನ್ನಡ ಮಾತಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇವರ ಮನೆಯಲ್ಲಿರುವ ಜೋಕಾಲಿ, ಹಳೆಯ ಕಾಲದಲ್ಲಿ ಬಳಸುತ್ತಿದ್ದ ಉಪಕರಣಗಳು ನೋಡುಗರ ಗಮನ ಸೆಳೆದಿದೆ.

ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಕನ್ನಡತಿಯರಾದ ನಟಿ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್  ಮಿಂಚುತ್ತಿದ್ದಾರೆ. ಇದೀಗ ಈ ಸಾಲಿಗೆ ಸಪ್ತಮಿ ಗೌಡ ಅವರು ಕೂಡ ಸೇರ್ಪಡೆ ಆಗುವ ಸೂಚನೆ ನೀಡಿದ್ದಾರೆ. ತೆಲುಗಿನ ಸ್ಟಾರ್ ನಟ ನಿತಿನ್ ಅವರ ಹೊಸ ಸಿನಿಮಾ 'ತಮ್ಮುಡು'ಗೆ ನಾಯಕಿಯಾಗಿ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು, ಈಗಾಗಲೇ 'ತಮ್ಮುಡು' ಸಿನಿಮಾದ ಶೂಟಿಂಗ್ ಆರಂಭವಾಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.