'ನನ್ನ ಮಗಳ ಜೀವ ತೆ.ಗೆಯುವಾಗ ಎಷ್ಟು ಸರಿ ಅಮ್ಮ ಅಮ್ಮ ಅಂತ ಕೂಗಿದ್ದಾಳೋ', ಸೌಜನ್ಯ ತಾಯಿ ವೇದಿಕೆಯಲ್ಲಿ ಕಣ್ಣೀರು

 | 
Hg

ಸೌಜನ್ಯಳ ಅತ್ಯಾಚಾರ, ಕೊಲೆ ನಡೆದು 11 ವರ್ಷ ಕಳೆದರೂ ನ್ಯಾಯ ಸಿಗದೇ ಇರುವುದು ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕ ಎಂದು ಹೋರಾಟಗಾರ ಮಹೇಶ್ ತಿಮರೋಡಿ ಹೇಳಿದ್ದಾರೆ. ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿ 'ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿ'ಯ ವತಿಯಿಂದ ಸುಳ್ಯದಲ್ಲಿ ಮಂಗಳವಾರ ನಡೆದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು. 

ಸೌಜನ್ಯಳಿಗೆ 11 ವರ್ಷಗಳಿಂದ ನ್ಯಾಯ ಕೊಡಲು ಆಗಿಲ್ಲ. ಮಾತೆಯ ರಕ್ಷಕರು ಎನ್ನುವ ನಮಗೆ ಸೌಜನ್ಯಳ ರಕ್ಷಣೆ ನಮ್ಮಿಂದ ಆಗಿಲ್ಲ. ದೇವರ ಹೆಸರಿನಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಸೌಜನ್ಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗುವ ವೆರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ. ನಮ್ಮ ಹೋರಾಟ ದೇವಸ್ಥಾನ, ಧರ್ಮ, ಜಾತಿಯ ವಿರುದ್ಧ ಅಲ್ಲ. ನ್ಯಾಯಾಂಗದ ಮೇಲೆ ನಂಬಿಕೆ ಇದ್ದರೆ ನೈಜ ಆರೋಪಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ಆಗಲೇ ಬೇಕು ಎಂದು ಹೇಳಿದರು.

ಸೌಜನ್ಯ ತಾಯಿ ಕುಸುಮಾವತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ ನನ್ನ ಮಗಳನ್ನು ಅತ್ಯಾಚಾರ - ಕೊಲೆ ಮಾಡಿ ತಿಂದಿದ್ದಾರೆ. ಆಕೆ ಆ ನೋವಿನಲ್ಲಿ ಅದೆಷ್ಟು ಬಾರಿ ಅಮ್ಮಾ ಅಮ್ಮಾ ಎಂದು ಕರೆದಳೋ ಏನೋ ಇಲ್ಲಿರುವ ಎಲ್ಲ ತಾಯಂದಿರಲ್ಲಿ ಹಾಗೂ ಎಲ್ಲರಲ್ಲಿಯೂ ನಾನು ನ್ಯಾಯವನ್ನು ಬೇಡುತಿದ್ದೇನೆ. ಇದಕ್ಕೆಲ್ಲ ನಿಮ್ಮ ಸಹಕಾರ ಬೇಕು. ಮುಂದೆ ನಡೆಯುವ ಎಲ್ಲಾ ಹೋರಾಟಗಳಲ್ಲಿಯೂ ಭಾಗಿಯಾಗುತ್ತೇನೆ. 

ಇನ್ನೂ ಇಂತಹ ಪ್ರಕರಣಗಳು ನಡೆಯಬಾರದು. ಸೌಜನ್ಯಳ ಕೊಲೆ ಅತ್ಯಾಚಾರ ಪ್ರಕರಣ ಕಡೆಯದಾಗಿರಬೇಕು ಎಂದು ಹೇಳಿದರು.
ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ನ್ಯಾಯ ಕೇಳಿ ನಿಂತಿಕಲ್ಲಿನಿಂದ ಆರಂಭಗೊಂಡ ವಾಹನ ಜಾಥಾ ಸುಮಾರು 11.30ರ ವೇಳೆಗೆ ಸುಳ್ಯ ನಗರ ಪ್ರವೇಶಿಸಿ ಜ್ಯೋತಿ ಸರ್ಕಲ್ ಬಳಿಯಿಂದ ನೇತೃತ್ವದಲ್ಲಿ ಸಾವಿರಾರು ಜನರು ನಗರದಲ್ಲಿ ಪಾದಯಾತ್ರೆ ಮೂಲಕ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಪ್ರತಿಭಟನಾ ಸಭೆ ನಡೆಯಿತು. 

ಹಕ್ಕೊತ್ತಾಯ ಸಭೆಯ ಬಳಿಕ ಸೌಜನ್ಯ ಪ್ರಕರಣದ ಮರು ತನಿಖೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈಗಲಾದರೂ ಸರ್ಕಾರದ ಮನ ಕರಗುವುದೋ ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.