ಚಂದನ್ ಶೆಟ್ಟಿ ನಿವೇದಿತಾ ‌ಗೌಡ ಬ್ರೇಕಪ್ ಗೆ ನಾನೇ ಕಾರಣ, ಸ್ಪಷ್ಟತೆ ಕೊಟ್ಟ ಸಂಜನಾ ಆನಂದ್

 | 
Bj
ಕ್ಯೂಟ್ ಕಪಲ್ಸ್ ಅಂತ ಕರೆಸಿಕೊಂಡಿದ್ದ ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಗಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಲವ್‌ ಸ್ಟೋರಿ ಮದುವೆ ವರೆಗೂ ಬಂದಿತ್ತು. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಆದರೆ ನಾಲ್ಕು ವರ್ಷಗಳ ಬಳಿಕ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನ ಪಡೆದುಕೊಂಡರು.
ಇನ್ನು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್ ವಿಚಾರದ ನಡುವೆ ಓರ್ವ ನಟಿಯ ಹೆಸರು ತಳಕು ಹಾಕಿಕೊಂಡಿತ್ತು. ಅನೇಕ ಗಾಸಿಪ್‌ಗಳು ಹರಿದಾಡಿದ್ದವು. ಚಂದನ್ ಶೆಟ್ಟಿಯಿಂದ ನಿವೇದಿತಾ ದೂರಾದ ಬಳಿಕ ನಟಿಯೊಬ್ಬರ ಜೊತೆ ಡೇಟಿಂಗ್‌ ಮಾಡ್ತಿದಾರೆ ಎನ್ನಲಾಗಿತ್ತು. 
ಈ ನಟಿಯ ಜೊತೆಗೆ ಚಂದನ್ ಶೆಟ್ಟಿ ಎರಡನೇ ಮದುವೆ ಕೂಡ ಆಗಲಿದ್ದಾರೆ ಎನ್ನುವ ಕೆಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಇದೀಗ ಈ ಎಲ್ಲ ಗಾಳಿ ಸುದ್ದಿಗಳಿಗೆ ಖುದ್ದು ಆ ನಟಿಯೇ ಸ್ಪಷ್ಟನೆ ನೀಡಿದ್ದಾರೆ. ಸಲಗ ಸಿನಿಮಾ ಖ್ಯಾತಿಯ ನಟಿ ಸಂಜನಾ ಆನಂದ್‌ ಅವರ ಹೆಸರು ಚಂದನ್‌ ಶೆಟ್ಟಿ ಜೊತೆ ತಳಕು ಹಾಕಿಕೊಂಡಿತ್ತು. ಈ ಗಾಸಿಪ್‌ಗೆ ಖುದ್ದು ನಟಿ ಸಂಜನಾ ಆನಂದ್‌ ಸ್ಪಷ್ಟನೆ ನೀಡಿದ್ದಾರೆ.
ನಟಿ ಸಂಜನಾ ಆನಂದ್‌ ತಮ್ಮ ಬಗ್ಗೆ ಕೇಳಿ ಬಂದ ಗಾಸಿಪ್‌ಗಳ ಬಗ್ಗೆ ಖಾಸಗಿ ವಾಹಿನಿಯ ಇಂಟರ್‌ವೀವ್‌ನಲ್ಲಿ ಮಾತನಾಡಿದ್ದಾರೆ . ನನಗೆ ಮತ್ತು ಚಂದನ್‌ ಶೆಟ್ಟಿಗೆ ಮದುವೆಯಾಗಿತ್ತು ಎನ್ನುವ ವದಂತಿ ಒಂದು ಹಬ್ಬಿತ್ತು ಎಂದು ಹೇಳಿದ್ದಾರೆ. ಆದರೆ ನನಗೆ ಆ ಸುದ್ದಿ ಗೊತ್ತೇ ಇರಲಿಲ್ಲ. ಪ್ರೋಡ್ಯೂಸರ್‌ಗಳು ಕೂಡ ಕಾಲ್‌ ಮಾಡಿ ಕೇಳಿದರು. 
ಆಮೇಲೆ ನನಗೆ ಈ ವಿಚಾರ ಇಷ್ಟು ದೊಡ್ಡದಾಗಿದೆ ಅಂತ ಗೊತ್ತಾಯ್ತು. ಸ್ವಲ್ಪ ದಿನ ಹೋದರೆ ನಿಲ್ಲುತ್ತದೆ ಅಂತಾ ಸುಮ್ಮನಾಗಿ ಬಿಟ್ಟೆ. ಆದರೆ ಅದು ನಿಲ್ಲುವ ಹಾಗೇ ಕಾಣಲೇ ಇಲ್ಲ ಎಂದು ಸಂಜನಾ ಆನಂದ್‌ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.