ಅವಕಾಶಕ್ಕಾಗಿ ಮಂಚ ಏರಬೇಕಾಗುತ್ತದೆ, ಕನ್ನಡ ಚಿತ್ರರಂಗದಲ್ಲಿ ಇದಕ್ಕೆ ಬೆಲೆ ಜಾಸ್ತಿ: ನಟಿ ಆಶಿತಾ
Jan 8, 2025, 13:41 IST
|

ನಟಿ ಆಶಿತಾ ಮಾರಿಯಾ ಕ್ರಾಸ್ತಾ ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ಆಕಾಶ್', ಶಿವರಾಜ್‌ಕುಮಾರ್ ನಟನೆಯ 'ತವರಿನ ಸಿರಿ', 'ಬಾ ಬಾರೋ ರಸಿಕ', 'ಚಾಂದಿನಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ವೃತ್ತಿ ಬದುಕು ಯಶಸ್ವಿಯಾಗಿ ನಡೆಯುತ್ತಿರುವಾಗಲೇ ಚಿತ್ರರಂಗದಿಂದ ದೂರವಾಗಿದ್ದರು. 'ರೋಡ್ ರೋಮಿಯೋ' ಆಶಿತಾ ನಟಿಸಿದ ಕೊನೆಯ ಸಿನಿಮಾ ಆಗಿತ್ತು. ಈ ಚಿತ್ರದ ಬಳಿಕ ಮತ್ತೆ ಸಿನಿಮಾ ಮಾಡುವ ಗೋಜಿಗೆ ಹೋಗಲಿಲ್ಲ.
ಸಿನಿಮಾದಿಂದ ದೂರ ಉಳಿದ ಆಶಿತಾ ಶಿಕ್ಷಣ, ಬ್ಯುಸಿನೆಸ್ ಅಂತ ಬೇರೆ ದಾರಿಯಲ್ಲಿ ಹೊರಟಿದ್ದರು. ಗ್ಯಾಪ್‌ನಲ್ಲಿ ಮದುವೆ, ವಿಚ್ಛೇದನ ಅನ್ನೋ ಕಹಿ ಅನುಭವಗಳು ಆಗಿದ್ದವು. ಆದರೆ, ಆಶಿತಾ ಸಿನಿಮಾದಿಂದ ದಿಢೀರನೇ ದೂರ ಉಳಿದಿದ್ದು ಯಾಕೆ? ಇಷ್ಟೊಂದು ಎಲ್ಲಿದ್ದರು? ಏನು ಮಾಡುತ್ತಿದ್ದರು? ಅನ್ನೋ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಕೆಲವು ವರ್ಷಗಳ ಹಿಂದೆ ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್‌ನಲ್ಲಿ ಸಂದರ್ಶನ ನೀಡುವ ಮೂಲಕ ಮತ್ತೆ ಪ್ರತ್ಯಕ್ಷ ಆಗಿದ್ದರು. ಆ ವೇಳೆ ಚಿತ್ರರಂಗದಲ್ಲಿ ತನಗೂ ಮೀಟು ಅನುಭವ ಆಗಿತ್ತು ಎಂದು ಹೇಳಿಕೊಂಡಿದ್ದರು. ಈಗ ಮತ್ತೊಂದು ಸಂದರ್ಶನದಲ್ಲಿ ಅದೇ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಆಶಿಯಾ ಮರಿಯಾ ಕ್ರಾಸ್ತಾ ಸಂದರ್ಶನವನ್ನು ನೀಡಿದ್ದರು. ಅದರಲ್ಲಿ ತಮಗಾದ ಮೀಟೂ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕರು ಹಾಗೂ ನಿರ್ಮಾಪಕರು ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂದು ಕೇಳುತ್ತಿದ್ದರು ಎಂದಿದ್ದಾರೆ. ಡೈರೆಕ್ಟರ್‌ಗಳೇ ಇರಬಹುದು. ನಿರ್ಮಾಪಕರೇ ಇರಬಹುದು.
ಆತರ ಕಾಲ್‌ಗಳು ಬರುವುದಕ್ಕೆ ಶುರುವಾಯ್ತು. ಕೊಡೋಣ ಆದರೆ ಈತರ ಇದೆ. ಅಡ್ಜೆಸ್ಟ್ ಮಾಡಿಕೊಳ್ಳೋಕೆ ರೆಡಿಯಿದ್ದೀರ ಅಂತ ಕೇಳ್ತಿದ್ರು ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025