ಶ್ರಾವಣ ಮೊದಲ ಸೋಮವಾರ ಈ ರೀತಿ ಮಾಡಿದರೆ ಆ ಮಹಾ ಶಿವನ ಅನುಗ್ರಹವಾಗುತ್ತದೆ, ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ
ಇನ್ನೇನ ಶುಭ ಶ್ರವಣ ಮಾಸ ಆರಂಭವಾಗುತ್ತಿದ್ದು, ಈ ಸಮಯದಲ್ಲಿ ಶಿವನ ಆರಾಧನೆ ಮಾಡಬೇಕು. ಆದರೆ ಶಿವನ ಆರಾಧನೆ ಮಾಡಲು ಸಹ ಕೆಲವೊಂದು ನಿಯಮಗಳಿದೆ. ಹಾಗಾದ್ರೆ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ಪೂರ್ತಿಯಾಗಿ ಓದಿ. ಶ್ರಾವಣ ಮಾಸದಲ್ಲಿ ಮುಖ್ಯವಾಗಿ ಶಿವನ ಆರಾಧನೆ ಮಾಡಬೇಕು. ಶಿವನ ಪೂಜೆ ಮಾಡಲು ಕೆಲವೊಂದು ನಿಯಮಗಳಿದೆ.
ಶಿವನ ಇಷ್ಟದ ವಸ್ತುಗಳನ್ನ ನಾವು ಅರ್ಪಣೆ ಮಾಡಬೇಕು. ಹಾಲು, ಜೇನುತುಪ್ಪ, ತುಪ್ಪ, ಸಕ್ಕರೆ ಮತ್ತು ಮೊಸರುಗಳಿಂದ ಅಭಿಷೇಕ ಮಾಡಿದರೆ ಶಿವ ಬಹುಬೇಗ ಒಲಿಯುತ್ತಾನೆ. ಶಿವನಿಗೆ ಅಭಿಷೇಕ ಎಂದರೆ ಬಹಳ ಇಷ್ಟ. ಯಾರಾದರೂ ಅಭಿಷೇಕ ಮಾಡಿದರೆ ಬೇಗ ಪ್ರಸನ್ನನಾಗುತ್ತಾನೆ. ಹಾಗಾಗಿ ಈ ಸಮಯದಲ್ಲಿ ಶಿವಲಿಂಗಕ್ಕೆ ಹಾಲು ಮತ್ತು ಬಿಲ್ವದ ಎಲೆಗಳನ್ನು ಅರ್ಪಿಸಲಾಗುತ್ತದೆ. ಮುಖ್ಯವಾಗಿ ಶ್ರಾವಣದಲ್ಲಿ ಹಾಲಿನ ಅಭಿಷೇಕವನ್ನ ಮಾಡಬೇಕು.
ಆಯುರ್ವೇದದ ಪ್ರಕಾರ ಶ್ರಾವಣ ಮಾಸದಲ್ಲಿ ಹಾಲನ್ನ ಕುಡಿಯಬಾರದು. ಈ ಮಾಸಲ್ಲಿ ಹಾಲು ಹಾಗೂ ಅದರಿಂದ ಮಾಡಿದ ಆಹಾರ ಸೇವನೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನಮ್ಮ ಆರೋಗ್ಯ ಹಾಳಾಗಬಾರದು ಎಂದು ಶಿವನಿಗೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಹೆಚ್ಚು ಶಿವನ ಆರಾಧನೆ ನಡೆಯುವುದಕ್ಕೆ ಹಿನ್ನೆಲೆ ಇದ್ದು, ಸುರ-ಅಸುರರು ಸೇರಿ ನಡೆಸಿದ ಸಮುದ್ರ ಮಂಥನದ ಕಥೆಯೊಂದಿಗೆ ಬೆಸೆದುಕೊಂಡಿದೆ. ಸಮುದ್ರ ಮಂಥದ ವೇಳೆ ವಿಷ ಹೊರ ಬಂದಾಗ ಅದನ್ನು ಶಿವ ಸೇವಿಸಿ ಲೋಕಕ್ಕೆ ಎದುರಾಗಿದ್ದ ಕಂಟಕವನ್ನು ನಿವಾರಿಸುತ್ತಾನೆ.
ಸಮುದ್ರ ಮಂಥದಲ್ಲಿನ ಈ ಘಟನೆ ನಡೆದಿದ್ದು ಶ್ರಾವಣ ಮಾಸದಲ್ಲಿ ಆದ್ದರಿಂದ ಈ ಮಾಸವನ್ನು ಶಿವನಿಗೆ ಸಮರ್ಪಿಸಿ ಆರಾಧಿಸಲಾಗುತ್ತದೆ ಎಂಬ ನಂಬಿಕೆ ಇದೆ.
ಈ ಮಾಸದಲ್ಲಿ ಹೆಂಗಸರು ಹಸಿರು ಬಣ್ಣದ ಬಟ್ಟೆ ಹಾಗೂ ಬಳೆಯನ್ನು ತೊಟ್ಟರೆ ಒಳ್ಳೆಯದು ಎಂಬ ನಂಬಿಕೆ ಇದೆ. ಅಲ್ಲದೆ ಕೆಲ ಶಿವ ದೇವಸ್ಥಾನಗಳಿಗೆ ಭೇಟಿ ನೀಡಿ ಬಿಲ್ವಾರ್ಚನೆ ಮಾಡಿಸಿದರೆ ಕೂಡ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.