ಏನೇ ಆದರೂ ಆತ ಜೈ ಲಿನಿಂದ ಬರಲ್ಲ; ಶನಿ ಮೈಮೇಲೆ ಕೂತಾಗಿದೆ

 | 
Yy

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಜೈಲು ವಾಸ ಅನುಭವಿಸುತ್ತಿರುವುದು ಗೊತ್ತೇ ಇದೆ. ಸದ್ಯಕ್ಕೆ ದರ್ಶನ್‌ ಹಾಗೂ ಅವರ ಗ್ಯಾಂಗ್‌ಗೆ ಬಿಡುಗಡೆ ಭಾಗ್ಯ ಇಲ್ಲ. ಬಗೆದಷ್ಟು ಸಾಕ್ಷಿಗಳು ದರ್ಶನ್ ವಿರುದ್ಧ ಲಭ್ಯವಾಗಿವೆ ಎನ್ನುವ ಆರೋಪಗಳಿವೆ. ಈ ನಡುವೆ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ದರ್ಶನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಜೈಲುವಾಸ ಎಲ್ಲಿವರೆಗೆ? ಅವರು ಸದ್ಯಕ್ಕೆ ಬಿಡುಗಡೆಯಾಗುವುದಿಲ್ವಾ? ಎಂಬ ಪ್ರಶ್ನೆಗಳಿಗೆ ಹಲವರು ಹಲವು ಮಾತುಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ ದರ್ಶನ್ ಬಿಡುಗಡೆ ಯಾವಾಗ? ನಟ ದರ್ಶನ್ ಬಗ್ಗೆ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದೇನು? ಎಂದು ನೋಡೋಣ.

ಅಕ್ಟೋಬರ್ ನಂತರವೇ ದರ್ಶನ್ ಏಳಿಗೆ ಆರಂಭವಾಗಲಿದೆ. ಅಲ್ಲಿವರೆಗೆ ದರ್ಶನ್ ಅವರಿಗೆ ಜೈಲೇ ಗತಿ ಎಂದು ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ದರ್ಶನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆತುರಗಾರನಿಗೆ ಬುದ್ಧಿಮಟ್ಟ ಕಡಿಮೆ. ಅನ್ನೋಹಾಗೆ ದರ್ಶನ್ ಅವರು ತಮ್ಮ ಕೋಪದಿಂದ ಜೀವನ ಹಾಳು ಮಾಡಿಕೊಂಡಿದ್ದಾರೆ. ಯಾರದ್ದು ತಪ್ಪು ಯಾರದ್ದು ಸರಿ ಎಂಬುದನ್ನು ನಾವು ಹೇಳಬಾರದು. 

ದರ್ಶನ್ ಅವರಿಗೆ ಗುರುದಶ ಆರಂಭವಾಗಿದ್ದು ದೊಡ್ಡ ಸಮಸ್ಯೆಗಳನ್ನು ಅವರು ಅನುಭವಿಸುತ್ತಿದ್ದಾರೆ. ಈ ಹಿಂದೆ ಕೂಡ ಅವರು ಕೆಲ ದಿನ ಜೈಲಿನಲ್ಲಿದ್ದರು. ಹೊರಗೆ ಇರೋ ದರ್ಶನ್‌ಗೂ ಅಂತರ್ಯದಲ್ಲಿರೋ ದರ್ಶನ್‌ಗೂ ಸಾಕಷ್ಟು ವ್ಯತ್ಯಾಸ ಇದೆ. ಗುರುದಶ ಶುರುವಾದಾಗಿನಿಂದ ಅವರು ಮೇಲೆ ಹೋಗೋದು ಪಾತಾಳಕ್ಕೆ ಬೀಳೋದು ಆಗುತ್ತಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.