ಬಳೆ ವಿಚಾರ ಎತ್ತಿ ತಗ್ಲಾಕ್ಕೊಂಡ ಕಿಚ್ಚ, ಸುದೀಪ್ ಹಳೆ ಪೋಸ್ಟ್ ನೋಡಿ ರೊ.ಚ್ಚಿಗೆದ್ದ ಪ್ರೇಕ್ಷಕರು
ಶನಿವಾರದ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಬಳೆ ಬಗ್ಗೆ ಮಾತನಾಡಿದ್ದನ್ನು ಕಂಡು ಇಡೀ ಕರುನಾಡೇ ಅವರಿಗೆ ಮೆಚ್ಚುಗೆ ಸೂಚಿಸಿದೆ. ಈ ವಾರದ ಕಿಚ್ಚನ ಚಪ್ಪಾಳೆಯೂ ಆ ಬಳೆಗೆ ಸಲ್ಲಬೇಕು ಎಂದು ಅದಕ್ಕೇ ಚಪ್ಪಾಳೆ ತಟ್ಟಿದ್ದಾರೆ. ಮನೆಯ ಗೋಡೆಯ ಮೇಲೆ ಕೈ ಬಳೆಯ ಫೋಟೋ ವಾಲ್ ಆಫ್ ಫೇಮ್‌ಗೆ ಸೇರಿದೆ. ಇದೀಗ ಇದೇ ಬಳೆ ವಿಚಾರಕ್ಕೆ ಸುದೀಪ್ ಪೇಚಿಗೆ ಸಿಲುಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಹಳ್ಳಿಜೀವನ ಟಾಸ್ಕ್ ನೀಡಲಾಗಿತ್ತು. ಎರಡು ಟೀಮ್‌ಗಳನ್ನಾಗಿ ಮಾಡಿ, ಒಂದಕ್ಕೆ ವಿನಯ್ ಮತ್ತೊಂದಕ್ಕೆ ಸಂಗೀತಾ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಬಳೆ ವಿಚಾರಕ್ಕೆ ಸಂಗೀತಾ ಮತ್ತು ವಿನಯ್ ಮಾತು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. "ನಾನೇನು ಬಳೆ ತೊಟ್ಟುಕೊಂಡಿಲ್ಲ ಎಂಬ ಮಾತು ವಿನಯ್ ಬಾಯಿಂದ ಬಂದಿತ್ತು.
ಇದೇ ವಿಚಾರ ಬಿಗ್ ಮನೆಯಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತ್ತು. ವಿನಯ್ ಆಡಿದ ಮಾತುಗಳಿಗೂ ವೀಕ್ಷಕ ವಲಯದಿಂದ ವಿರೋಧ ವ್ಯಕ್ತವಾಗಿತ್ತು. ಕಿಚ್ಚನ ಪಂಚಾಯ್ತಿಯಲ್ಲಿ ಇದೇ ಬಳೆ ವಿಚಾರವನ್ನೇ ಹಿಡಿದುಕೊಂಡು, ವಿನಯ್‌ಗೆ ಚಳಿ ಬಿಡಿಸಿದ್ದರು. ನನ್ನಿಂದ ತಪ್ಪಾಯಿತೆಂದು ಹೇಳಿದ್ದರು.
ಆದರೆ, ಇದೀಗ ಇದೇ ಬಳೆ ಬಗ್ಗೆ ಕಿಚ್ಚ ಸುದೀಪ್ ಈ ಹಿಂದೆ ಆಡಿದ ಮಾತು, ಮತ್ತೆ ಮುನ್ನೆಲೆಗೆ ಬಂದಿದೆ.
2019ರ ಸೆಪ್ಟೆಂಬರ್ 12ರಂದು ಪೈಲ್ವಾನ್ ಸಿನಿಮಾ ಬಿಡುಗಡೆ ಆಗಿತ್ತು. ಆ ಸಮಯದಲ್ಲಿ ಇದೇ ಚಿತ್ರಕ್ಕೆ ಪೈರಸಿ ಕಾಟವೂ ಎದುರಾಗಿತ್ತು. ದೊಡ್ಡ ಮಟ್ಟದಲ್ಲೂ ಅದು ಸುದ್ದಿಯಾಗಿತ್ತು. ಈ ಬಗ್ಗೆ ಸುದೀಪ್ ಟ್ವಿಟ್ ಸಹ ಮಾಡಿದ್ದರು. ಆ ಟ್ವಿಟ್ ಹೀಗಿದೆ.
ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ ಎಂದಿದ್ದರು.
ಕಿಚ್ಚನ ಆವತ್ತಿನ ಈ ಟ್ವಿಟ್ ಬಗ್ಗೆ ಪರ ವಿರೋಧ ವ್ಯಕ್ತವಾಗಿತ್ತು. ವಿನಯ್ ಬಗ್ಗೆ ಮಾತನಾಡುವುದಕ್ಕೂ ಮುನ್ನ ತಾವು ಈ ಹಿಂದೆ ಮಾತನಾಡಿದ್ದನ್ನೂ ಚೂರು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ನಾನೊಬ್ಬ ಅಪ್ಪಟ ಕಿಚ್ಚನ ಅಭಿಮಾನಿ ಆಗಿ ಹೇಳ್ತೀನಿ ನೀವು ಮಾತಾಡಿದ್ದು ನೂರಕ್ಕೆ ನೂರರಷ್ಟು ಸರಿ ಇದೆ.
ಆದರೆ ವಿನಯ್ ಅವರು ಮಾತಾಡಿದ್ದು ತಪ್ಪು ಅನ್ನೋದಾದ್ರೆ ನೀವು ಅಂದು ಮಾತಾಡಿದ್ದು ಕೂಡ ತಪ್ಪೇ ಅಲ್ವಾ??? ನೊಂದ ಕಿಚ್ಚನ ಅಭಿಮಾನಿ ಎಂಬ ಟ್ವಿಟ್‌ಗಳೀಗ ಮತ್ತೆ ಚರ್ಚೆಗೆ ಕಾರಣವಾಗಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.