ರಕ್ಷಿತಾ ಎಣ್ಣೆ ಪಾರ್ಟಿಯಲ್ಲಿ ಎದ್ದು ಬಿದ್ದು ಡ್ಯಾನ್ಸ್ ಮಾಡಿದ ಮೇಘನಾ ರಾಜ್
Feb 16, 2025, 17:17 IST
|

ಕನ್ನಡ ಚಿತ್ರರಂಗದಲ್ಲಿ ಮದುವೆಯ ಅಬ್ಬರ ಜೋರಾಗಿದೆ. ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಸಹೋದರ ನಟ ರಾಣಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ದೂರಿ ಮದುವೆಯಲ್ಲಿ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಈ ಮದುವೆ ಬಳಿಕ ಗ್ರ್ಯಾಂಡ್ ಆಗಿ ಆರತಕ್ಷತೆ ಮಾಡಲಾಗಿತ್ತು. ಈಗ ಪಾರ್ಟಿ ಕೂಡ ಮಾಡಲಾಗಿದೆ. ಈ ಪಾರ್ಟಿಯಲ್ಲಿ ಮೇಘನಾ ರಾಜ್, ರಕ್ಷಿತಾ ಪ್ರೇಮ್ ಅವರು ಡ್ಯಾನ್ಸ್ ಮಾಡಿದ್ದಾರೆ.
ಕನ್ನಡ ಸಿನಿಮಾಗಳ ಕೆಲ ಹಾಡುಗಳಿಗೆ ರಕ್ಷಿತಾ ಪ್ರೇಮ್, ಮೇಘನಾ ರಾಜ್, ಪ್ರಮೀಳಾ ಜೋಶಾಯ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೊರಿಯೋಗ್ರಾಫರ್ಸ್ ಎಲ್ಲರೂ ಸೇರಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ರಾಣಾ ಅವರು ಪತ್ನಿ ರಕ್ಷಿತಾ ಜೊತೆಗೆ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ರಕ್ಷಿತಾ ಪ್ರೇಮ್ ಅವರ ತಾಯಿ ಕೂಡ ಡ್ಯಾನ್ಸ್ ಮಾಡಿದ್ದಾರೆ.
ಫೆಬ್ರವರಿ 7ರಂದು ರಾಣಾ ಹಾಗೂ ರಕ್ಷಿತಾ ಮದುವೆ ನಡೆದಿದೆ. ರಾಣಾ ಮದುವೆಯಾಗಿರುವ ಹುಡುಗಿ ಹೆಸರು ಕೂಡ ರಕ್ಷಿತಾ ಎನ್ನೋದು ವಿಶೇಷ. ರಕ್ಷಿತಾ, ರಾಣಾ ಅವರು ಏಳು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ರಾಣಾ ಅವರ ವೃತ್ತಿ ಜೀವನ ಸೆಟಲ್ ಆಗಿ ಅಂತ ರಕ್ಷಿತಾ ಕಾಯುತ್ತಿದ್ದರು. ಈಗ ಇವರಿಬ್ಬರು ಕುಟುಂಬಸ್ಥರು, ಚಿತ್ರರಂಗದ ಗಣ್ಯರು, ಸ್ನೇಹಿತರ ಸಾಕ್ಷಿಯಾಗಿ ಮದುವೆಯಾಗಿದ್ದಾರೆ. ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ ಕೂಡ ಇವರ ಮದುವೆಗೆ ಬಂದು ಹಾರೈಸಿದ್ದರು.
ಇನ್ನು ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರು ಆಗಮಿಸಿದ್ದರು. ಒಂದು ಕಾಲದಲ್ಲಿ ರಮ್ಯಾ ಹಾಗೂ ರಕ್ಷಿತಾ ಅವರು ಬೇಡಿಕೆಯ ಹೀರೋಯಿನ್‌ಗಳಾಗಿದ್ದರು. ಇವರಿಬ್ಬರನ್ನು ಒಂದೇ ವೇದಿಕೆಯಲ್ಲಿ ನೋಡಿ ಅನೇಕರು ಖುಷಿ ಪಟ್ಟಿದ್ದಾರೆ. ಇನ್ನು ರಕ್ಷಿತಾ, ರಾಣಾ ಮದುವೆಗೆ ನಟ ಕಿಚ್ಚ ಸುದೀಪ್-ಪ್ರಿಯಾ ದಂಪತಿ, ಅಭಿಷೇಕ್ ಅಂಬರೀಶ್- ಅವಿವಾ ಬಿದ್ದಪ್ಪ, ಚಿನ್ನೇಗೌಡ್ರು, ಶ್ರೀಮುರಳಿ, ನಿಖಿಲ್ ಚೆಲುವರಾಯಸ್ವಾಮಿ ದಂಪತಿ, ಬಿವೈ ಯಜುವೇಂದ್ರ, ಶರ್ಮಿಳಾ ಮಾಂಡ್ರೆ, ಅನುಪಮಾ ಗೌಡ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಕೃಷಿ ತಾಪಂಡ, ಪ್ರಿಯಾಂಕಾ ಉಪೇಂದ್ರ, ಮಾಳವಿಕಾ ಅವಿನಾಶ್, ರಮೇಶ್ ಅರವಿಂದ್ ಹಾಜರಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.