ಆನೆ ಬೇಕು ಅಂತ ಅಜಯ್ ರಾವ್ ಮನೆಯಲ್ಲಿ ಕೂಗಾಡಿದ ಮೇಘನಾ ರಾಜ್ ಮಗ ರಾಯನ್

 | 
ಪಗಗ

ನಟ ಅಜಯ್ ರಾವ್ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು 20 ವರ್ಷಕ್ಕೂ ಅಧಿಕ ಸಮಯವಾಗಿದೆ. ಈವರೆಗೂ ಅವರಿಗೆ ಒಂದು ಒಂದು ಸ್ವಂತ ಮನೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಏಪ್ರಿಲ್ 14ರಂದು ಆ ಮನೆಯ ಗೃಹಪ್ರವೇಶ ಸಮಾರಂಭವನ್ನು ಅದ್ಧೂರಿಯಾಗಿ ಮಾಡಿದ್ದಾರೆ.

ಅಜಯ್ ರಾವ್ ಮನೆಯ ಈ ಸುಂದರ ಸಮಾರಂಭಕ್ಕೆ ಸ್ಯಾಂಡಲ್‌ವುಡ್‌ನ ಕಲಾವಿದರು, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಆಗಮಿಸಿದ್ದರು. ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ನವರಸ ನಾಯಕ ಜಗ್ಗೇಶ್, ಮೇಘನಾ ರಾಜ್, ಸುಂದರ್ ರಾಜ್, ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ನಿರ್ದೇಶಕ ಶಶಾಂಕ್, ನಟಿ ಮಯೂರಿ ಮುಂತಾದವರು ಆಗಮಿಸಿದ್ದರು. 

ನಟ ಅಜಯ್ ರಾವ್ ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ನಟಿ ಮೇಘನಾ ರಾಜ್ ಅವರು ತಮ್ಮ ಮಗ ರಾಯನ್‌ನನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ನಟಿ ಮಿಲನಾ ನಾಗರಾಜ್ ಅವರು ಕೂಡ ಜೊತೆಗಿದ್ದರು. ಇನ್ನು ಮನೆಯ ಹೊರಗೆ ನಿಲ್ಲಿಸಿದ್ದ ಆನೆ ಸ್ಟಾಚ್ಯು ನೋಡಿ ನನಗೂ ಆನೆ ಬೇಕು ಎಂದಿದ್ದಾನೆ.

ಆನೆಯನ್ನು ಇಷ್ಟ ಪಡುವ ರಾಯನ್ ಆನೆಗಾಗಿ ಬಹಳಷ್ಟು ಕಣ್ಣೀರು ಹಾಕಿದ್ದಾನೆ. ನಂತರ ಕೊಡಿಸಿವೆ ಎಂದು ಮೇಘನಾ ರಾಜ್ ಸಮಾಧಾನ ಮಾಡಿದ್ದಾರೆ. ಇನ್ನು ಅಜಯ್ ರಾವ್ ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ನವರಸ ನಾಯಕ ಜಗ್ಗೇಶ್ ಅವರು ಆಗಮಿಸಿದ್ದರು. ಈ ವೇಳೆ ಅವರು ಅಜಯ್ ರಾವ್‌ಗೆ ಸಿಹಿ ತಿನ್ನಿಸಿ, ಶುಭ ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.