ಬಿಗ್ ಬಾಸ್ ಕ್ಯಾಪ್ಟನ್ಸ್ ಗಾಗಿ ಮೋಕ್ಷಿತಾ ಹಾಗೂ ಮಂಜು‌ ಜಿದ್ದಾಜಿದ್ದಿ

 | 
Ft
ಬಿಗ್ ಬಾಸ್ ಮನೆಯಲ್ಲಿ ಮಂಜು ಹಾಗೂ ಮೋಕ್ಷಿತಾ ಪೈ ಅವರ ಅಬ್ಬರ ಹೆಚ್ಚಾಗಿದೆ.‌ ಬಿಗ್ ಬಾಸ್ ಕೊಟ್ಟ ಟಾಸ್ಕ್ ಅನ್ನು ಗೆದ್ದು ಪದವಿ ಪಡೆಯಬೇಕೆಂಬುವುದು.‌ ಆದರೆ, ಇವರ ಮಧ್ಯೆ ಇದೀಗ ರಜತ್ ಎಂಟ್ರಿಯಿಂದ ಈ ಇಬ್ಬರಿಗೆ ದೊಡ್ಡ ತಲೆನೋವಾಗಿದೆ‌.
ಇನ್ನು ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ಎಲ್ಲರ ಜೊತೆನೂ ಮಾತನಾಡುತ್ತಾರೆ. ಆದರೆ, ಚೈತ್ರ ಕುಂದಾಪುರ ಜೊತೆ ಮಾತ್ರ ಜಗಳ ಮಾಡಿಕೊಂಡು ಇರುತ್ತಾರೆ‌. ಇನ್ನು ಬಿಗ್ ಬಾಸ್ ಟಾಸ್ಕ್ ಬಂದಾಗ ಚೈತ್ರ ಕುಂದಾಪುರ ರಂಪಾಟ ನೋಡಿ ಇಡೀ ಮನೆಯೇ ಅಲ್ಲೋಲ‌‌ಕಲ್ಲೋಲವಾಗಿತ್ತು. ಹಾಗಾಗಿ ಚೈತ್ರ ಕುಂದಾಪುರ ಹಾಗೂ ರಜತ್ ಅವರು ಕೂಡ ಕ್ಯಾಪ್ಟನ್ಸ್ ಗೆ ಮುಂಚೂಣಿಯಲ್ಲಿದ್ದಾರೆ.
ಇನ್ನು ಹನುಮಂತ ಹಾಗೂ ಧನರಾಜ್ ಅವರು ತಮ್ಮ ಪಾಡಿಗೆ ಆಟವಾಡಿಕೊಂಡು ಕಾಮಿಡಿ ಮಾಡುತ್ತಿರುವುದು ವೀಕ್ಷಕರಿಗೆ ಮಜಾ ಕೊಡುತ್ತಿದೆ. ಆದರೆ ವಾರದ ಕೊನೆಯಲ್ಲಿ ಈ ಇಬ್ಬರು ಕೂಡ ಎಲಿಮಿನೇಷನ್ ಆಗುತ್ತಾರೆ ಎಂಬುವುದೆ ಅಚ್ಚರಿ.