ಅದೇ ಹೊರ ಬೀಳುವಂತೆ ಬಟ್ಟೆ ಹಾಕಿಕೊಂಡು ಬಂದ ನ ಟಿ; ಇದು ಬೇಕಿತ್ತಾ ಎಂದ ನೆಟ್ಟಿಗರು
Aug 7, 2024, 22:41 IST
|
ನಟಿ ಶೆರ್ಲಿನ್ ಚೋಪ್ರಾ ಅವರು ಹಲವು ಕಾರಣಗಳಿಂದ ಸುದ್ದಿ ಆಗುತ್ತಾರೆ. ಅಶ್ಲೀಲ ಸಿನಿಮಾಗಳ ಪ್ರಕರಣದಲ್ಲಿ ಅವರ ಹೆಸರು ಕೂಡ ಕೇಳಿಬಂದಿತ್ತು. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಗ್ಗೆ ಅವರು ಅನೇಕ ಆರೋಪಗಳನ್ನು ಹೊರಿಸಿದ್ದರು. ವೃತ್ತಿ ಜೀವನದಲ್ಲಿ ಶೆರ್ಲಿನ್ ಚೋಪ್ರಾ ಮಾಡಿಕೊಂಡ ವಿವಾದಗಳು ಒಂದೆರಡಲ್ಲ.
ಅದೆಲ್ಲವನ್ನೂ ಇಟ್ಟುಕೊಂಡು ಅವರೀಗ ಒಂದು ವಿಡಿಯೋ ಸಾಂಗ್ ಮಾಡಿದ್ದಾರೆ. ಶೀಘ್ರದಲ್ಲೇ ಅದು ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಕ್ಯಾಮರಾ ಮುಂದೆ ಹಾಟ್ ಆಗಿ ಫೋಸ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಶೆರ್ಲಿನ್ ಚೋಪ್ರಾ ಅವರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಲ್ಲಿದ್ದ ಪಾಪರಾಜಿಗಳನ್ನು ನೋಡಿ ಅವರು ತುಂಬಾ ಉತ್ಸಾಹದಿಂದ ಪೋಸ್ ನೀಡಿದರು ತಮ್ಮ ಹಾಟ್ ಡ್ರೆಸ್ಸ್ ಮೂಲಕ ಕ್ಲಿವೇಜ್ ತೋರಿಸಿ ನೋಡುಗರ ಗಮನ ಸೆಳೆದರು.
ನಂತರ ತುಸು ದೂರು ರ‍್ಯಾಂಪ್ ವಾಕ್ ಕೂಡ ಮಾಡಿದರು. ಅಷ್ಟಕ್ಕೇ ನಿಲ್ಲಲಿಲ್ಲ ಅವರ ಭಿನ್ನಾಣ. ಅಲ್ಲೇ ಇದ್ದ ಯುವಕನೋರ್ವ ಶೆರ್ಲಿನ್ ಶೇಪ್ರಾ ಅವರನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸಾಗಿದ್ದಾನೆ. ಆಗ ಶೆರ್ಲಿನ್ ಚೋಪ್ರಾ ಅವರು ನಗುನಗುತ್ತಾ ಪೋಸ್ ನೀಡಿದ್ದಾರೆ. ನೋಡಲು 18ರ ಹುಡುಗಿಯಂತಿರುವ ಶೆರ್ಲಿನ್ ಚೋಪ್ರಾ ಅವರಿಗೆ ಈಗ 39 ವರ್ಷ ವಯಸ್ಸು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಿನಿಮಾಗಳಿಗಿಂತಲೂ ಅವರು ವಿವಾದದ ಮೂಲಕವೇ ಹೆಚ್ಚು ಸುದ್ದಿ ಆಗುತ್ತಾರೆ.
ತಮ್ಮ ಜೀವನದಲ್ಲಿ ಆದ ಕಿರಿಕ್ಗಳನ್ನೇ ಇಟ್ಟುಕೊಂಡು ಅವರು ಈಗ ವಿಡಿಯೋ ಸಾಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ನನ್ನ ಬೇರೆ ಎಲ್ಲ ಪ್ರಾಜೆಕ್ಟ್ಗಳಿಗಿಂತಲೂ ಈ ಸಾಂಗ್ ನನಗೆ ಹೆಚ್ಚು ಆಪ್ತವಾಗಿರಲಿದೆ. ಮುಂಬೈನ ಹೊರವಲಯದಲ್ಲಿ ಇದರ ಶೂಟಿಂಗ್ ಮಾಡಲಾಗಿದೆ. ಈ ಹಾಡಿನಲ್ಲಿ ತುಂಬ ಜೋಶ್ ಇರಲಿದೆ.
ಯುವಕರಿಗೆ ಈ ಹಾಡು ತುಂಬ ಇಷ್ಟ ಆಗಲಿದೆ ಎಂಬ ನಂಬಿಕೆ ನನಗೆ ಇದೆ. ಈ ಗೀತೆಯಲ್ಲಿ ತುಂಬ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನಾನು ಕಠಿಣವಾದ ಡಯೆಟ್ ಪಾಲಿಸಿದ್ದೇನೆ ದೇಹದ ಅಂಗಾಂಗಗಳ ಬಹಳ ಸುಂದರವಾಗಿ ಪ್ರದರ್ಶಿಸಿದ್ದೇನೆ ಎಂದಿದ್ದಾರೆ.ಒಟ್ಟಿನಲ್ಲಿ ಶೆರ್ಲಿನ್ ಚೋಪ್ರಾಳ ಮುಂದಿನ ಗೀತೆಗಾಗಿ ಜನರು ಕುತೂಹಲದಿಂದ ಕಾಯುವಂತಾಗಿದೆ.