ಬಿಗ್ ಬಾಸ್ ಮನೆಯಲ್ಲಿ ನಮ್ರತಾ ತಾಯಿಗೆ ವಿಶೇಷ ಅಧಿಕಾರ, ಕೆಂ.ಡಮಂಡಲವಾದ ವಿನಯ್ ಗೌಡ

 | 
Vkk

ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಅಚ್ಚರಿ ನೀಡಿದ್ದಾರೆ. ಈ ವಾರ ಸ್ಪರ್ಧಿಗಳ ಮನೆಯವರು ಬಿಗ್‌ಬಾಸ್‌ ಮನೆಗೆಯೊಳಗೆ ಭೇಟಿ ನೀಡಿದ್ದಾರೆ. ಕಿಚ್ಚ ಸುದೀಪ್ ಅನುಪಸ್ಥಿಯಲ್ಲಿ ಈ ವಾರಾಂತ್ಯದ ಪಂಚಾಯಿತಿ ನಡೆದಿದೆ. ಈ ವಾರ ಸ್ಪರ್ಧಿಗಳು ಹೊಸ ಉತ್ಸಾಹದೊಂದಿಗೆ, ಅಕ್ರಮಣಕಾರಿ ಮನೋಭಾವನೆ ಬಿಟ್ಟು ಸೌಹಾರ್ದಯುತವಾಗಿ ಎಲ್ಲರೊಂದಿಗೆ ಇರುವ ಸಂಕಲ್ಪ ಮಾಡಿದಂತಿದೆ. 

ಬಿಗ್‌ಬಾಸ್‌ ಮನೆಯ ವಾತವಾರಣವೂ ಸಹ ಸ್ಪರ್ಧಿಗಳ ಮನೆಯವರ ಆಗಮನದಿಂದ ಕೊಂಚ ಬದಲಾವಣೆ ಆಗಬಹುದು. ಎಂಬ ಆಸೆ ಅಭಿಮಾನಿಗಳದ್ದು. ಬಿಗ್‌ಬಾಸ್‌ ಮನೆಯ ಸದಸ್ಯರು ಮನೆಯ ಚಟುವಟಿಕೆಗಳಲ್ಲಿ ನಿರತರಾಗಿರುವಾಗ, ಸದಸ್ಯರ ಕುಟುಂಬದವರು ಮನೆಯೊಳಗೆ ಬರುವ ಸೂಚನೆ ಸಿಕ್ಕಿದೆ. ಇದನ್ನು ಮೊದಲು ಊಹಿಸಿದ್ದು ಮನೆಯ ಕ್ಯಾಪ್ಟನ್ ನಮ್ರತಾ ಅವರು. ಮನೆಯವರು ಬರ್ತಿದಾರೆ ಎಂದು ಕುಣಿದಾಡಿದ್ದಾರೆ. 

ನಮ್ರತಾ ಅವರ ತಾಯಿ, ವರ್ತೂರ್ ಸಂತೋಷ್‌ ಅವರ ಅಮ್ಮ ದೊಡ್ಮನೆಯ ಮುಖ್ಯದ್ವಾರದಿಂದ ಒಳಗೆ ಪ್ರವೇಶಿಸುತ್ತಿರುವುದು ಪ್ರೋಮೋದಲ್ಲಿ ಬಿಡುಗಡೆ ಆಗಿತ್ತು. ಇನ್ನು ಮೊದಲು ಆಗಮಿಸಿದ ನಮೃತಾ ತಾಯಿಗೆ ಬಿಗ್ಬಾಸ್ ಮನೆಯಲ್ಲಿ ಒಂದು ವಿಶೇಷ ಅಧಿಕಾರ ನೀಡಿದ್ದಾರೆ ಅದೇನೆಂದರೆ ಮುಂದಿನ ಕ್ಯಾಪ್ಟನ್ ಆಗಿ ಆರಿಸಲು ಅವರು ತನಿಷಾ ಕುಪ್ಪುಂಡ ಅವರನ್ನು ಕ್ಯಾಪ್ಟನ್ ಆಗಿ ಆರಿಸಿ ಮನೆಯಿಂದ ಆಚೆಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ನಮೃತಾ ನಂತರ ಕ್ಯಾಪ್ಟನ್ ಪಟ್ಟ ಏರಲಿದ್ದಾರೆ ತನಿಷಾ ಅವರು. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಇಂದಿನ ಸಂಚಿಕೆ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇಂದು ಬಿಡುಗಡೆಯಾದ ಪ್ರಮೋದಲ್ಲಿ ಬಿಗ್‌ಬಾಸ್‌ ಮನೆಯೊಳಗೆ ಸ್ಪರ್ಧಿಗಳ ಮನೆಯವರು ಬಂದಿರುವ ಸೂಚನೆ ದೊರಕಿದೆ. ಕ್ರಿಸ್‌ಮಸ್‌ ಕಳೆದು ಹೊಸವರ್ಷ ಸನಿಹದಲ್ಲಿರುವಾಗ ಸ್ಪರ್ಧಿಗಳಿಗೆ ನಿಜಕ್ಕೂ ಇದರಿಂದ ಖುಷಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.