ಐಶ್ವರ್ಯ ಹಾಗೂ ಶಿಶಿರ್ ಮಿತಿಮೀರಿದ ಸಂಬಂಧ, ಮದುವೆ ಮುನ್ನ ಎಲ್ಲಾ ಕೆಲಸ ಮುಗಿಸ್ತಾರೆ ಅಂತ ನೆಟ್ಟಿಗರ ಕಾಮೆಂಟ್

 | 
Jj
ಬಿಗ್ ಬಾಸ್ ಸೀಸನ್ 11 ರ ಸ್ಫರ್ಧಿ ಐಶ್ವರ್ಯ ಸಿಂಧೋಗಿ ಅವರ ಬಗ್ಗೆ ಯಾರಿಗೂ ಹೇಳಬೇಕಾಗಿಲ್ಲ. ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಬಳಿ ಐಶ್ವರ್ ಕರ್ನಾಟಕದ ಮನೆ ಮಗಳಾಗಿದ್ದಾಳೆ.ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲಿ ಐಶ್ವರ್ ಅವರು ನಟಿಸುತ್ತಿದ್ದು. ನಡು ನಡುವೆ ಜಾಹೀರಾತು, ಆಲ್ಬಂ ಹಾಡುಗಳಿಗೂ ಬಣ್ಣ ಹಚ್ಚುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿಕೊಡುವ ಮುನ್ನ ಐಶ್ವರ್ಯ ಅವರು ನಾಗಿಣಿ ಧಾರಾವಾಹಿ ಮೂಲಕ ವೀಕ್ಷಕರಿಗೆ ಚಿರಪರಿಚಿತರಾಗಿದ್ದರು. ನಾಗಿಣಿ ವೇಳೆದಲ್ಲಿ ಅಪ್ಸರೆಯಂತೆ ಮಿನುಗುತ್ತಿದ್ದರು.
ಆದರೆ, ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಐಶ್ವರ್ಯ ಈಗ ಐಶಿರ್ ಆಗಿದ್ದಾರೆ. ಇದೇನಿದು ಹೊಸ ಹೆಸರು? ಐಶಿರ್ ಎಂದರೆ ಏನರ್ಥ ಅಂತ ಯಾರೂ ಕೇಳಬೇಡಿ. ಒಂದೊಮ್ಮೆ ನಿಮ್ಮ ನಿಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಕ್ರಾಲ್ ಮಾಡಿ ನೋಡಿದರೆ ಸಾಕು ಎಲ್ಲವೂ ಅರ್ಥವಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ನಟ ಶಿಶಿರ್ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದ ಐಶ್ವರ್ಯ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಬಿಗ್ ಬಾಸ್ ಮನೆಯವರೇ ಹೇಳುತ್ತಿದ್ದರು. ಇದಕ್ಕೆ ಪುಷ್ಟಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರವೂ ನಟಿ ಐಶ್ವರ್ಯ ಅವರು ಹೆಚ್ಚಾಗಿ ಶಿಶಿರ್ ಜೊತೆಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಅಲ್ಲದೇ, ರೊಮ್ಯಾಂಟಿಕ್ ಹಾಡುಗಳಿಗೆ ಶಿಶಿರ್ ಜೊತೆಗೆ ಹೆಜ್ಜೆ ಕೂಡ ಹಾಕುತ್ತಿರುತ್ತಾರೆ.
ಇದೆಲ್ಲವನ್ನೂ ನೋಡಿದ ಅಭಿಮಾನಿಗಳು ಕರುನಾಡ ಮನೆ ಮಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಐಶಿರ್ ಎಂಬ ಫ್ಯಾನ್ ಪೇಜ್ ಅನ್ನು ಕೂಡ ತೆರೆದಿದ್ದು, ಐಶ್ವರ್ಯ ಮತ್ತು ಶಿಶಿರ್ ಸೂಪರ್ ಜೋಡಿಗಳು. ಇವರಿಬ್ಬರೂ ಆದಷ್ಟು ಬೇಗ ಮದುವೆಯಾಗಲಿ ಎಂದು ಬಯಸುತ್ತಿದ್ದಾರೆ. ಟ್ರೆಇಡಿಷನಲ್ ಕಪಲ್ಸ್, ಮುದ್ದು ಜೋಡಿಗಳು, ಜೋಡಿ ಹಕ್ಕಿ ಹೀಗೆ ಕಮೆಂಟ್ ಗಳ ಮೇಲೆ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಐಶ್ವರ್ಯ ಮತ್ತು ಶಿಶಿರ್ ಈ ಮಾತಿಗೆ ಎಲ್ಲೂ ರಿಯಾಕ್ಟ್ ಮಾಡದೆಯೇ ತಮ್ಮ ಪಾಡಿಗೆ ತಾವಿದ್ದಾರೆ. ಇವರಿಬ್ಬರ ಪ್ರತಿಯೊಂ ದು ಫೋಟೋ ಮತ್ತು ವೀಡಿಯೋಗಳಿಗೂ ಅಭಿಮಾನಿಗಳು ಸೂಪರ್ ಜೋಡಿ ಎಂದು ಕಮೆಂಟ್ ಮಾಡದೇ ಬಿಡುವುದೇ ಇಲ್ಲ.
ಇತ್ತೀಚಿಗಷ್ಟೇ ನಟಿ ಐಶ್ವರ್ಯ ಮತ್ತು ನಟ ಶಿಶಿರ್ ಇಬ್ಬರೂ ಕೂಡ ಸುಂದರವಾದ ಸೆಟ್ ಒಂದರಲ್ಲಿ ಮುದ್ದಾಗಿ ಸಿಂಗಾರಗೊಂಡು ಜಾಹೀರಾತಿಗೋ ಅಥವಾ ಆಲ್ಬಂ ಹಾಡಿಗೋ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿನ ಸೀಕ್ವೆನ್ಸ್ ನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿಜವಾದ ಪ್ರೇಮಿಗಳಂತೆಯೇ ಇದರಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ನಟಿ ಮೋಕ್ಷಿತಾ ಪೈ ಜೊತೆಗೆ ಶಿಶಿರ್ ಮತ್ತು ಐಶ್ವರ್ಯ ಕೂಡ ಧರ್ಮಸ್ಥಳ ಸೇರಿದಂತೆ ಬೇರೆ ಬೇರೆ ಕಡೆಗೆ ಪ್ರವಾಸ ಮಾಡಿದ್ದು, ಇದರ ವೀಡಿಯೋ ಮತ್ತು ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.