ವಿರಾಟ್ ಕೊಹ್ಲಿ ಮೇಲೆ ರೊಚ್ಚಿಗೆದ್ದ ನೆಟ್ಟಿಗರು, ಆತ ಮಾಡಿದ ತಪ್ಪೇನು ಗೊ.ತ್ತಾ

 | 
ರರಬಹ

ಭಾನುವಾರ, ನವೆಂಬರ್ 5ರಂದು ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 49ನೇ ಏಕದಿನ ಶತಕ ಬಾರಿಸುವ ಮೂಲಕ ಐತಿಹಾಸಿಕ ದಾಖಲೆಗೆ ಕಾರಣರಾದರು. 

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ವಿರಾಟ್ ಕೊಹ್ಲಿ ಸರಿಗಟ್ಟಿ ಇತಿಹಾಸ ಬರೆದರು. ವಿಶ್ವದಲ್ಲೇ ಈ ಇಬ್ಬರು ಆಟಗಾರರು ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದವರಾಗಿದ್ದಾರೆ.

ಇದೇ ವೇಳೆ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಲೆಜೆಂಡ್ ಸಚಿನ್ ತೆಂಡೂಲ್ಕರ್ ನಂತರ ದಕ್ಷಿಣ ಆಫ್ರಿಕಾ ವಿರುದ್ಧ 3000 ಅಂತಾರಾಷ್ಟ್ರೀಯ ರನ್ ಗಳಿಸಿದ ಭಾರತದ ಎರಡನೇ ಆಟಗಾರರೆನಿಸಿದರು.
ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಭಾರತ ತಂಡದ 2023ರ ವಿಶ್ವಕಪ್ ಪಂದ್ಯದಲ್ಲಿ ತಮ್ಮ ಇನ್ನಿಂಗ್ಸ್‌ನ 43ನೇ ರನ್ ಗಳಿಸಿದಾಗ ಈ ಮೈಲಿಗಲ್ಲನ್ನು ಪೂರ್ಣಗೊಳಿಸಿದರು.

ಒಟ್ಟಾರೆ ವಿಶ್ವದಲ್ಲಿ ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಕುಮಾರ್ ಸಂಗಕ್ಕಾರ, ಶಿವನಾರಾಯಣ್ ಚಂದ್ರಪಾಲ್ ಮತ್ತು ಡೇವಿಡ್ ವಾರ್ನರ್ ನಂತರ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಎಲ್ಲಾ ಸ್ವರೂಪಗಳಲ್ಲಿ 3000 ರನ್ ಗಳಿಸಿದ ವಿಶ್ವದ ಆರನೇ ಬ್ಯಾಟರ್ ಎನಿಸಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರು ಉತ್ತಮ ಆರಂಭ ಒದಗಿಸಿಕೊಟ್ಟರೂ, 11 ಓವರ್‌ಗಳ ಒಳಗೆ ತ್ವರಿತವಾಗಿ ಇಬ್ಬರ ವಿಕೆಟ್ ಕಳೆದಕೊಂಡಿದ್ದರಿಂದ ಭಾರತ ಹಿನ್ನಡೆ ಅನುಭವಿಸಿತು. 

ಈಡನ್ ಗಾರ್ಡನ್‌ನಲ್ಲಿ ನಿಧಾನಗತಿಯ ಪಿಚ್‌ನಲ್ಲಿ ವಿರಾಟ್ ಕೊಹ್ಲಿ ಅವರು ಶ್ರೇಯಸ್ ಅಯ್ಯರ್ ಜೊತೆಗೂಡಿ 134 ರನ್‌ಗಳ ಜೊತೆಯಾಟದ ಮೂಲಕ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು.ಇನ್ನು ಶತಕಕ್ಕೆ ಹತ್ತಿರವಿದ್ದಾಗ ನಿಧಾನವಾಗಿ ಕೋಹ್ಲಿ ಅಡಿದ್ದರಿಂದ ಕೆಲವರು ಕೊಹ್ಲಿ ತಮ್ಮ ಸ್ವಾರ್ಥಕ್ಕಾಗಿ ನಿಧಾನವಾಗಿ ಆಡಿದ್ದಾರೆ ಎಂದು ಕಿಡಿಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.