ಸರಿಗಮಪ ವೇದಿಕೆಯಲ್ಲಿ ಉತ್ತರ ಕರ್ನಾಟಕದ ಧ್ಯಾಮೇಶ್ ಚಮತ್ಕಾರ, ಫಿದಾ ಆದ ಕನ್ನಡಿಗರು

 | 
Je
ಕರ್ನಾಟಕದ ನೆಚ್ಚಿನ ಸರಿಗಮಪ ಇದೀಗ ಮತ್ತೆ ಆರಂಭವಾಗಿದೆ. ಈ ವೇದಿಕೆಯಲ್ಲಿ ಉತ್ತರ ಕರ್ನಾಟಕದ ಧಾಮೇಶ್ ಅವರ ಹಾಡು ಕೇಳಿ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಫಿದಾ ಆಗಿ ಬಿಟ್ಟಿದ್ದಾರೆ. ಹೌದು, ಉತ್ತರ ಕರ್ನಾಟಕದ ಹಳ್ಳಿ ಹುಡುಗ ಧ್ಯಾಮೇಶ್ ಹಾಡು ಕೇಳಿ ಎದ್ದು ನಿಂತು ಗೌರವ ಕೊಟ್ಟ ವಿಜಯ್ ಪ್ರಕಾಶ್. 
ಇನ್ನು ಸರಿಗಮಪ ವೇದಿಕೆಯಲ್ಲಿ ಈ ಕುರಿಗಾಯಿ ಹನುಮಂತು ಇದ್ದಾಗ ಇದೇ ರೀತಿ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಖುಷಿ ಪಟ್ಟಿದ್ದರು. ಈಗ ಅದೇ ರೀತಿ ದ್ಯಾಮೇಶ್ ಅವರ ಹಾಡುಗೂ ಈ ಇಬ್ಬರು ಫಿದಾ ಆಗಿಬಿಟ್ಟಿದ್ದಾರೆ. ಇನ್ನು ಹಳ್ಳಿಯ ಮುಗ್ಧ ಯುವಕ ಧ್ಯಾಮೇಶ್ ಅವರು ತನ್ನ ಕಂಚಿನ ಕಂಠತ ಮೂಲಕ ಸರಿಗಮಪ ಶೋಗೆ ಆಯ್ಕೆ ಆಗಿದ್ದಾರೆ.
ಧ್ಯಾಮೇಶ್ ಅವರ ಹಾಡು ಕೇಳಿದ ಅನುಶ್ರೀ ಕೂಡ ಚಪ್ಪಾಳೆ ತಟ್ಟಿದ್ದಾರೆ. ಇನ್ನು ಇದರ ಜೊತೆಗೆ ಧ್ಯಾಮೇಶ್ ಅವರು ಉತ್ತರ ಕರ್ನಾಟಕದ ಜನ ಮನ ಗೆದ್ದು ಬಿಟ್ಟಿದ್ದಾರೆ. ಉತ್ತರ ಕರ್ನಾಟಕ ಮಂದಿ ಎಷ್ ಟ್ಯಾಲೆಂಟ್ಡ್ ಅಂತ ಮತ್ತೆ ಮತ್ತೆ ಸಾಬೀತಾಯಿತು. ಇನ್ನು ಈ ಸರಿಗಮಪ ವೇದಿಕೆಯಲ್ಲಿ ಹಲವಾರು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇವರ ಜೊತೆ ಧ್ಯಾಮೇಶ್ ಕೂಡ ಅದ್ಬುತ ಹಾಡು ಹಾಡಲಿ ಎಂದು ಕಾಮೆಂಟ್ ಮೂಲಕ ಆಶೀರ್ವಾದ ಮಾಡಿ.