ಹಳೆ‌ ಪ್ರೀತಿ ಮತ್ತೆ ಚಿಗುರು; ಸಲ್ಮಾನ್ ಖಾನ್ ಜೊತೆ ಐಶ್ವರ್ಯ ಒಡನಾಟ

 | 
Hd
 ಕಳೆದ ಕೆಲ ದಿನಗಳಿಂದ ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಅಗುತ್ತಿದೆ. ಇದರ ಮಧ್ಯೆ ಐಶ್ವರ್ಯ ರೈ ಅವರು ಸಲ್ಮಾನ್‌ ಕುರಿತು ಮಾತನಾಡಿದ ವಿಡಿಯೋ ಒಂದು ಇದೀಗ ವೈರಲ್‌ ಆಗುತ್ತಿದೆ. 
ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಪರಸ್ಪರ ಪ್ರೀತಿಸುತ್ತಿದ್ದ ಸಮಯವಿತ್ತು. ಆ ಸಮಯದಲ್ಲಿ ಅವರಿಬ್ಬರ ಪ್ರೀತಿಯ ಬಗ್ಗೆ ಮಾತುಕತೆ ನಡೆದಿತ್ತಾದರೂ, ಇಬ್ಬರು ಕೂಡ ಮನಸ್ಥಾಪಗಳ ಕಾರಣದಿಂದಾಗಿ ಪರಸ್ಪರ ಬೇರ್ಪಟ್ಟಿದ್ದರು. ಸಲ್ಮಾನ್ ಖಾನ್ ಅನ್ನು ಐಶ್ವರ್ಯಾ ಎಷ್ಟು ಇಷ್ಟಪಟ್ಟಿದ್ದಾರೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. 
ಐಶ್ವರ್ಯ ರೈ ಅವರ ವಿಚ್ಛೇದನ ವದಂತಿಗಳ ನಡುವೆ ಇದೀಗ ಅಭಿಮಾನಿಗಳು ಈ ವಿಡಿಯೋವನ್ನು ವೈರಲ್‌ ಮಾಡುತ್ತಿದ್ದಾರೆ.  ಹಳೆಯ ಸಂದರ್ಶನವೊಂದರಲ್ಲಿ, ಐಶ್ವರ್ಯಾ ಅವರನ್ನು ವಿಶ್ವದ ಅತ್ಯಂತ ಸುಂದರ ವ್ಯಕ್ತಿ  ಯಾರೆಂದು ಬಣ್ಣಿಸಿದ್ದಾರೆ.ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಇಂದು ಅಭಿಷೇಕ್ ಬಚ್ಚನ್ ಅವರ ಪತ್ನಿ. ಅಭಿಷೇಕ್ ಜೊತೆಗಿನ ಮದುವೆಗೂ ಮುನ್ನ ಐಶ್ವರ್ಯಾ ಹೆಸರು ಅನೇಕ ನಟರೊಂದಿಗೆ ಕೇಳಿಬಂದಿತ್ತು. 
ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸಿನಿಮ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎದ್ದಿದ್ದ ಸಮಯವೊಂದಿತ್ತು. ಸಂಜಯ್ ಲೀಲಾ ಬನ್ಸಾಲಿಯವರ ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ಸೆಟ್‌ನಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ಆದಾಗ್ಯೂ, ಅವರಿಬ್ಬರು ಕೆಲವು ಮನಸ್ಥಾಪಗಳ ಕಾರಣದಿಂದಾಗಿ ಬೇರ್ಪಟ್ಟಿದ್ದರು.
ಕೆಲವು ವರ್ಷಗಳ ಹಿಂದೆ, ಐಶ್ವರ್ಯಾ ರೈ ಸಿಮಿ ಗರೆವಾಲ್ ಅವರ ಜನಪ್ರಿಯ ಚಾಟ್ ಶೋ ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್‌ನಲ್ಲಿ ಕಾಣಿಸಿಕೊಂಡಿದ್ದರು. ಸಂದರ್ಶನದಲ್ಲಿ ಪಾಲಗೊಂಡಿದ್ದ ನಟಿಯನ್ನು ನಿರೋಪಕಿ ಬಾಲಿವುಡ್‌ನಲ್ಲಿ ಅತ್ಯಂತ ಸೆಕ್ಸಿಸ್ಟ್ ಮತ್ತು ಅತ್ಯಂತ ಸುಂದರ ವ್ಯಕ್ತಿ ಯಾರು ಎಂದು ಕೇಳಿದರು, ಇದಕ್ಕೆ ಉತ್ತರಿಸಿದ ಐಶ್ವರ್ಯ ರೈ, ಸಲ್ಮಾನ್‌ ಖಾನ್‌ ಅವರ ಹೆಸರನ್ನು ಹೇಳಿದ್ದರು.
.( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.