ಡಾಕ್ಟರ್ ವಿರುದ್ಧ ಸಿಡಿದೆದ್ದ ಬೆಂಗಳೂರು ಜನ; 'ಆತನಿಗೆ ಯಾಕೆ ಬೇಕಿತ್ತು ಇದೆಲ್ಲಾ

 | 
Uu

ಜನರ ಪ್ರೀತಿಯ ವೈದ್ಯರೆಂದೆ ಹೆಸರು ಪಡೆದ ಮಂಜುನಾಥ ಅವರು ಇದೀಗ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಕೆಲವರು ಇದನ್ನು ಇಷ್ಟಪಟ್ಟರೆ ಇನ್ನು ಕೆಲವರು ಇದನ್ನು ಖಂಡಿಸಿದ್ದಾರೆ. ಬಿಜೆಪಿ ಜೆಡಿಎಸ್ ತಿಕ್ಕಾಟದಲ್ಲಿ ನೀವು ಬಲಿ ಆಗಬೇಡಿ ಎಂದಿದ್ದಾರೆ. ಗ್ರಾಮಾಂತರ ಕ್ಷೇತ್ರದ ಬಿಜೆಪಿ–ಜೆಡಿಎಸ್‌ ಅಭ್ಯರ್ಥಿ ಡಾ. ಮಂಜುನಾಥ್‌ ಹಣ ಮಾಡುವ ಆಸೆ ಅಥವಾ ಅಕ್ರಮ ಆಸ್ತಿ ಉಳಿಸಿಕೊಳ್ಳುವ ಒತ್ತಡದಿಂದ ರಾಜಕಾರಣಕ್ಕೆ ಬಂದವರಲ್ಲ.

ಅವರನ್ನು ಈ ಚಕ್ರವ್ಯೂಹದೊಳಗೆ ತಳ್ಳಲಾಗಿದೆ.  ಜೆಡಿಎಸ್‌– ಬಿಜೆಪಿಯ ರಾಜಕೀಯ ತಂತ್ರಗಾರಿಕೆಯ ಬಲಿಪಶುವಾಗಿ ಮಂಜುನಾಥ್‌ ಗೋಚರಿಸುತ್ತಾರೆ. ಗೆದ್ದರೆ ಮೋದಿ ಸಂಪುಟದಲ್ಲಿ ಮಂತ್ರಿಗಿರಿ ಕೊಡುವ ಸಣ್ಣದೊಂದು ಭರವಸೆಯನ್ನು ತೇಲಿಬಿಡಲಾಗಿದೆ. ಮೋದಿ ಅವರಿಗೆ ಮಂಜುನಾಥ್‌ ಅವರಂಥ ಖ್ಯಾತ ಹೃದ್ರೋಗ ತಜ್ಞರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡು ದೇಶದ ಆರೋಗ್ಯ ಮಂತ್ರಿಯನ್ನಾಗಿ ಮಾಡುವ ಬಯಕೆ ಇದ್ದರೆ ಅವರನ್ನು ಚುನಾವಣಾ ರಣಾಂಗಣಕ್ಕೆ ನೂಕುವ ಅಗತ್ಯ ಇರಲಿಲ್ಲ. 
ನಿರ್ಮಲಾ ಸೀತಾರಾಮನ್‌ ಅವರನ್ನು ಎರಡು ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಎರಡು ಅವಧಿಯಲ್ಲೂ ಪ್ರಮುಖ ಖಾತೆ ನೀಡಿಲ್ಲವೇ?  ಮಂಜುನಾಥ್‌ ಅವರನ್ನೂ ಮುಂದಿನ ಅವಧಿಗೆ ರಾಜ್ಯಸಭೆಗೆ ಆಯ್ಕೆ ಮಾಡಿ ಸಜ್ಜನರೊಬ್ಬರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುವ ಎಲ್ಲ ಅವಕಾಶವೂ ಇತ್ತು. ಮುಂದೆಯೂ ಇರಲಿದೆ.

ಆದರೆ, ಮಂಜುನಾಥ್‌ ಅವರನ್ನು ಗೆಲ್ಲಿಸುವುದು ಬಿಜೆಪಿ –ಜೆಡಿಎಸ್‌ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್‌ನ ಬಲಿಷ್ಠ ಅಭ್ಯರ್ಥಿ ಡಿ ಕೆ ಸುರೇಶ್‌ ಅವರನ್ನು ಹೇಗಾದರೂ ಮಾಡಿ ಮಣಿಸಲು ಎರಡೂ ಪಕ್ಷಗಳು ಪಣತೊಟ್ಟಿವೆ. ಒಂದು ವೇಳೆ ಸುರೇಶ್‌ ಸೋತರೂ ಅವರಿಗೆ ರಾಜ್ಯ ರಾಜಕಾರಣದಲ್ಲಿ ಅವಕಾಶ ಸಿಗುವುದರಲ್ಲಿ ಅನುಮಾನವೇ ಇಲ್ಲ. 

ಸಹೋದರ ಡಿ ಕೆ ಶಿವಕುಮಾರ್‌ ಅಂತಹ ಅವಕಾಶವನ್ನು ಕೈ ಚೆಲ್ಲಲಾರರು. ರಾಜ್ಯದಲ್ಲಿ ಪಕ್ಷದ ಶಕ್ತಿ ಇನ್ನಷ್ಟು ಹೆಚ್ಚಬಹುದು. ಮಂಜುನಾಥ್‌ ಸೋತರೆ ಮತ್ತೆ ರಾಜ್ಯಸಭೆಯ ಸದಸ್ಯರೋ, ವಿಧಾನಪರಿಷತ್ತಿನ ಸದಸ್ಯರೋ ಆಗುತ್ತಾರಾ? ಹೇಳಲಾಗದು ಎನ್ನುವಂತಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.