ಕೆನ್ನೆಯಲ್ಲಿ ಪಿಂಪಲ್ ಕೈಯಲ್ಲಿ‌ ಗುಲಾಬಿ, ಪವಿತ್ರ ಕೊಟ್ಟ ಸಿಗ್ನಲ್ ಯಾರಿಗೆ

 | 
Ju
ನಟ ದರ್ಶನ್‌ ತೂಗುದೀಪ ಎಂದೊಡನೆ ಅರೆರೆ ಮತ್ತೆನಪ್ಪ ಎಂದು ಕಣ್ಣರಳುತ್ತದೆ ಹೌದು ಅವರು ಮತ್ತವರ ಆಪ್ತೆ ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ ಆರೋಪ ಹೊತ್ತು ಜೈಲು ಸೇರಿದ್ದರು. ಸದ್ಯ ಜಾಮೀನಿನ ಮೇಲೆ ಇಬ್ಬರೂ ಹೊರಬಂದಿದ್ದು, ದರ್ಶನ್‌ ಹಾಗೂ ಪವಿತ್ರಾ ಗೌಡ ಅವರಿಗೆ ಬೇರೆ ರಾಜ್ಯಗಳಿಗೆ ತೆರಳಲು ಕೋರ್ಟ್‌ ಅನುಮತಿ ನೀಡಿದೆ. ಜಾಮೀನು ಸಿಕ್ಕ ಬಳಿಕ ಇಬ್ಬರೂ ಭೇಟಿಯಾಗಿರಲಿಲ್ಲ. ಇದೀಗ ಪವಿತ್ರಾ ಗೌಡ ಅವರು ಡಿಯರ್‌ ಎಂದು ಸ್ಪೆಷಲ್‌ ವಿಡಿಯೋ ಶೇರ್‌ ಮಾಡಿದ್ದಾರೆ.
ಪವಿತ್ರಾ ಗೌಡ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ನಟ ದರ್ಶನ್ ಅವರಿಗೆ ತೀರಾ ಆಪ್ತರಾಗಿ ಗುರುತಿಸಿಕೊಂಡಿದ್ದರು. ಪವಿತ್ರಾ ಗೌಡ ಅವರ ಬಗ್ಗೆ ಕೆಟ್ಟದಾಗಿ, ಅಶ್ಲೀಲವಾಗಿ ಮೆಸೇಜ್‌ ಮಾಡಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್‌ ಅವರ ಗ್ಯಾಂಗ್‌ ಕಿಡ್ನ್ಯಾಪ್‌ ಮಾಡಿಕೊಂಡು ಬಂದು ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ಥಳಿಸಿದ್ದರು ಎಂಬ ಆರೋಪವಿದೆ. ರೇಣುಕಾಸ್ವಾಮಿಯನ್ನು ಥಳಿಸಿದ್ದರಿಂದಲೇ ಆತ ಸಾವನ್ನಪ್ಪಿದ ಎಂದೂ ಆರೋಪಿಸಲಾಗಿದೆ. ಹಾಗಾಗಿ ಪವಿತ್ರಾಗೌಡ ಅವರ ಕಾರಣದಿಂದಲೇ ದರ್ಶನ್‌ ಜೈಲು ಸೇರುವಂತಾಯಿತು ಎಂದು ಹೇಳಲಾಗಿದೆ.
https://www.instagram.com/reel/DG7RjGWJimF/?igsh=NjI0d2JmbHVhN3Iw
ತೀರಾ ಆಪ್ತರಾಗಿದ್ದ ದರ್ಶನ್‌ ಹಾಗೂ ಪವಿತ್ರಾ ಗೌಡ ಅವರು ಈ ಕೇಸ್‌ ಬಳಿಕ ಮಾತು ಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಕೋರ್ಟ್‌ನಲ್ಲಿ ಇದೇ ಕೇಸ್‌ ವಿಚಾರಣೆ ವೇಳೆ ಎದುರು ಬದುರಾದರೂ ಪರಿಚಯವೇ ಇಲ್ಲ ಎನ್ನುವಂತೆ ನಡೆ ತೋರಿದ್ದರು. ಸದ್ಯ ದರ್ಶನ್‌ ಅವರು ಸಿನಿಮಾಗಳಲ್ಲಿ ಬ್ಯುಸಿಯಾದರೆ, ಪವಿತ್ರಾ ಗೌಡ ತಮ್ಮ ಬಿಸಿನೆಸ್‌ ಕಡೆ ಗಮನಹರಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲೂ ಫುಲ್‌ ಆಕ್ಟೀವ್‌ ಆಗಿದ್ದು, ಇದೀಗ ಡಿಯರ್‌ ಎನ್ನುವ ವಿಡಿಯೋ ಶೇರ್‌ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಪವಿತ್ರಾ ಗೌಡ, ಇಂದು ಮಹಿಳಾ ದಿನಾಚರಣೆಗೆ ವಿಶ್‌ ಕೂಡ ಮಾಡಿದ್ದಾರೆ. ವಿಡಿಯೋದಲ್ಲಿ ಹ್ಯಾಪಿ ವುಮನ್ಸ್‌ ಡೇ ಎಂದು ವಿಶ್‌ ಮಾಡಿ ವಿಶೇಷ ಸಂದೇಶವನ್ನು ನೀಡಿದ್ದಾರೆ. ಕೈಯಲ್ಲಿ ಕೆಂಗುಲಾಬಿ ಹಿಡಿದಿರುವ ವಿಡಿಯೋ ಹಂಚಿಕೊಂಡಿರುವ ಅವರು, ಡಿಯರ್‌.ನೆನ್ನೆಗಿಂತ ನಿಮ್ಮನ್ನು ಹೆಚ್ಚಾಗಿ ಪ್ರೀತಿಸು, ನಿಮ್ಮನ್ನು ನೀವು ಆದ್ಯತೆಯಾಗಿ ಮಾಡಿಕೊಳ್ಳಿ. ನಿಮ್ಮ ಗುರಿಗಳ ಹಿಂದೆ ಬೀಳಿ. ನಿಮ್ಮಲ್ಲಿರುವ ವಸ್ತುಗಳಿಗೆ ಕೃತಜ್ಞರಾಗಿರಿ, ನಿಮ್ಮ ಬಗ್ಗೆ ನೀವು ಹೆಮ್ಮೆಯಿಂದ ಇರಿ. ನೀವು ಅದ್ಭುತವಾದ ಮಹಿಳೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ದಿನ ಆಚರಿಸಿ ಎಂದು ಸಂದೇಶ ನೀಡಿದ್ದಾರೆ:(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.