ಹೊಸ ವರ್ಷದ ಆರಂಭದಲ್ಲೇ ಹಳೀಕಾರ್ ಒಡೆಯ ವರ್ತೂರ್ ಕೈಹಿಡಿಯಲಿರುವ ಜನಪ್ರಿಯ ನಟಿ
Jan 10, 2025, 21:47 IST
|

ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ತಮ್ಮ ಹುಡುಗಿ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್, 'ಹತ್ತನೇ ತರಗತಿಯಲ್ಲಿ ಕ್ರಶ್ ಅಥವಾ ಒನ್ ಸೈಡ್ ಪ್ರೀತಿ ಇತ್ತು. ಆಮೇಲೆ ಪಿಯುಸಿಯಲ್ಲಿಯೂ ಅದೇ ಇತ್ತು. ಆದರೆ ಈಗ ಜೀವನದಲ್ಲಿ ಪ್ರೀತಿ ಇದೆ. ಇಬ್ಬರೂ ಒಪ್ಪಿಕೊಂಡು ಪರಸ್ಪರ ಪ್ರೀತಿ ಇದೆ' ಎಂದರು.ಯಾಕೆಂದರೆ ಒಂದು ಮನುಷ್ಯ ಖಿನ್ನತೆಗೆ ಹೋದಾಗ ಅಥವಾ ಕೆಳಗೆ ಬಿದ್ದಾಗ ಒಬ್ಬರು ಜೊತೆಯಲ್ಲಿ ಬೇಕೇ ಬೇಕು. ವಯಸ್ಸಿಗೆ ಬಂದಿರುವ ಹುಡುಗ ಆಗಲಿ, ಹುಡುಗಿಯಾಗಲಿ ಖಿನ್ನತೆಗೆ ಹೋದಾಗ, ಹುಡುಗನಿಗೆ ಹುಡುಗಿ ಇದ್ದಾಗಲೇ, ಹುಡುಗಿಗೆ ಹುಡುಗ ಇದ್ದಾಗಲೇ ವಾಪಸ್ ಬರಲು ಸಾಧ್ಯ.
ನಾನು ವಾಪಸ್ ಆಗಲು ಅವರೇ ಕಾರಣ. ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನನ್ನ ತಾಯಿ ಬಿಟ್ಟರೆ ಅವರೇ ನನಗೆ ಎಲ್ಲಾ. ಆದರೆ ನಾನು ಇದನೆಲ್ಲಾ ಯಾವತ್ತೂ ಅವರಿಗೆ ಹೇಳಿಲ್ಲ. ಯಾವಾಗಲೂ ನನ್ನ ಬಗ್ಗೆನೇ ಯೋಚಿಸುತ್ತಿರುತ್ತಾರೆ. ನನ್ನ ಎರಡನೇ ಹೃದಯ ಅವರು. ಅವರ ಹತ್ತಿರ ನಾನು ಎಲ್ಲವನ್ನೂ ಹೇಳಿಕೊಳ್ಳುತ್ತೇನೆ' ಎಂದರು.ನೀನು ಇರಬೇಕಾಗಿರುವುದು ಇಲ್ಲಲ್ಲ ಎಂದು ನನ್ನ ಕಂಬ್ಯಾಕ್ ಮಾಡಿಸಿದವರು ಅವರು. ಆ ಕ್ಷಣದಲ್ಲಿ ಜೊತೆಗಿದ್ದವರನ್ನು ಯಾವತ್ತೂ ಮರೆಯಬಾರದು. ಆದರೆ ಈವರೆಗೂ ಇದನೆಲ್ಲಾ ನಾನು ಹೇಳಿಕೊಂಡಿಲ್ಲ. ಹೇಳಿಕೊಂಡರೆ ನಾವೇ ಎಲ್ಲೋ ಸಣ್ಣರಾಗುತ್ತೇವೆ ಎನ್ನುವ ಅಳುಕು. ಆದರೆ ನನ್ನ ಮನಸ್ಸಿನಲ್ಲಿ ಆಕೆ ಯಾವತ್ತೂ ಇರುತ್ತಾಳೆ. ನಾನು ವರ್ತೂರು ಸಂತೋಷ್ ಅಂತಾ ಆಗೋದಕ್ಕೂ ಮುನ್ನ ನನ್ನ ಬೆಂಬಲಕ್ಕೆ ಇದ್ದವರು ಅವರು ಎಂದು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ.
ನನ್ನ ಜೀವನದಲ್ಲಿ ಸುಮಾರು ಏರುಪೇರಾಗಿದೆ. ಅದು ಎಲ್ಲರಿಗೂ ಗೊತ್ತು. ಅದೇನು ದೊಡ್ಡ ವಿಚಾರ ಅಲ್ಲ. ಅದರ ಕಥೆ ಅಲ್ಲಿಗೆ ಮುಗಿಯಿತು. ಇವಾಗ ನನ್ನ ಜೀವನದಲ್ಲಿ ಒಬ್ಬಳು ಹುಡುಗಿ ಇರುವುದು ನೂರಕ್ಕೆ ನೂರು ಸತ್ಯ. ಇಬ್ಬರೂ ತುಂಬಾ ಚೆನ್ನಾಗಿದ್ದೇವೆ. ಪ್ರತಿ ದಿನಾ ಮಾತನಾಡುತ್ತೇನೆ. ದಿನಾ ಭೇಟಿಯಾಗುತ್ತೇನೆ. ಖುಷಿಯಾಗಿದ್ದೇವೆ 'ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಇದೇ ವೇಳೆ ನಟಿ ತನಿಷಾ ಕುಪ್ಪಂಡ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ಕೊಟ್ಟ ವರ್ತೂರು ಸಂತೋಷ್, 'ಪಾಪ ಹುಡುಗಿ ತನಿಷಾನೋ, ಇನ್ಯಾರೋ ಅಲ್ಲ. ಅಲ್ಲಿರುವುದು ಪರಿಶುದ್ಧವಾದ ಸ್ನೇಹ ಅಷ್ಟೇ. ತನಿಷಾ ಅಂತೂ ನನ್ನ ಹುಡುಗಿ ಅಲ್ಲ' ಎಂದು ಬಹಳ ನೇರವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023