ಹಣಕ್ಕಾಗಿ ಅಂಬಾನಿ ಪುತ್ರನನ್ನು ಮದುವೆಯಾದ್ರಾ ಚೆಲುವೆ ರಾಧಿಕಾ, ಅಂಬಾನಿ ಮಗನ ರೋಚಕ ಲವ್ ಸ್ಟೋರಿ
ಈಗ ಎಲ್ಲಾ ಮೀಡಿಯಾಗಳ ಕಣ್ಣು ಅಂಬಾನಿ ಕುಟುಂಬದಲ್ಲಿ ನಡೆಯುತ್ತಿರುವ ಮದುವೆ ಕಾರ್ಯಕ್ರಮದ ಮೇಲಿರುತ್ತದೆ. ದೇಶದಲ್ಲಿ ಇನ್ನೆಷ್ಟೋ ಸಮಸ್ಯೆಗಳಿವೆ ಅದರತ್ತ ಗಮನ ನೀಡದೆ ದುಡ್ಡಿದೆ ಎಂಬ ಕಾರಣಕ್ಕೆ ಅವರ ಮದುವೆಯನ್ನೇ ತೋರಿಸುತ್ತಾರೆ ಎಂದು ಕಮೆಂಟ್ ಮಾಡುವವರಿಗೂ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮದುವೆ ಹೇಗೆ ನಡೆಯುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ, ಟೀಕೆ ಮಾಡುತ್ತಲೇ ಅಂಬಾನಿ ಕುಟುಂಬದ ಮದುವೆ ಬಗ್ಗೆ ತಿಳಿಯಲು ಆಸಕ್ತಿ ತೋರಿಸುತ್ತಾರೆ.
ಭಾರತದಲ್ಲಿ ನಡೆದಿರುವ ರಾಯಲ್ ಮದುವೆಗಳಲ್ಲಿ ಅಂಬಾನಿ ಕುಟುಂಬದಲ್ಲಿ ನಡೆದಿರುವ ಮದುವೆಗಳೂ ಸೇರಿವೆ. ಮುಕೇಶ್ ಅಂಬಾನಿಯ ಮೊದಲ ಮಗ ಹಾಗೂ ಮಗಳ ಮದುವೆ ಕೂಡ ತುಂಬಾ ಅದ್ಧೂರಿಯಾಗಿ ನಡೆಸಲಾಗಿತ್ತು, ಇದೀಗ ಕಿರಿಯ ಮಗ ಅನಂತ್ ಅಂಬಾನಿ ಮದುವೆ ಕೂಡ ತುಂಬಾನೇ ಅದ್ದೂರಿಯಾಗಿ ನಡೆಯುತ್ತಿದೆ. ಈ ಮದುವೆಗೆ ತಯಾರಾಗುತ್ತಿದೆ 2500 ಬಗೆಯ ಖಾದ್ಯಗಳು, ಅಲ್ಲದೆ ಮದು ಮಗ-ಮದುಮಗಳು ಅತಿಥಿಗಳಿಗೆ ತಮ್ಮ ಕೈಯಾರೆ ಬಡಿಸುವ ಫೋಟೋಗಳು-ವೀಡಿಯೋಗಳು ಕೂಡ ವೈರಲ್ ಆಗುತ್ತಿವೆ.
ಪ್ರೀತಿ ಎಂಬುವುದು ಇಬ್ಬರು ವ್ಯಕ್ತಿಗಳಿಗೆ ಸಂಬಂಧಿಸಿದ್ದು, ಅವರಿಗೆ ಗೊತ್ತಿರುತ್ತದೆ ಅವರಿಬ್ಬರ ಪ್ರೀತಿಯ ಆಳ, ಒಬ್ಬರಿಗೊಬ್ಬರು ಎಷ್ಟು ಮುಖ್ಯ ಎಂಬುವುದು, ಆದರೆಅದು ಮೂರನೇಯ ವ್ಯಕ್ತಿಗೆ ತಿಳಿಯುವುದಿಲ್ಲ, ಆದರೂ ಮೂರನೇಯವರು ಸಂಬಂಧವೇ ಇಲ್ಲದೆ ಮಾತನಾಡುತ್ತಾರೆ, ಅದುವೇ ನಡೆದಿದ್ದು ಅನಂತ್ ಅಂಬಾನಿರವರ ವಿಷಯದಲ್ಲಿ. ಯಾವಾಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಎಂಜೇಜ್‌ಮೆಂಟ್ ಫೋಟೋಗಳು, ಈ ಜೋಡಿ ದೇವಾಲಯಕ್ಕೆ ಹೋಗಿ ಬಂದ ಫೋಟೋಗಳು ವೈರಲ್ ಆಯ್ತು, ಆ ಫೋಟೋಗಳು ಅಷ್ಟೊಂದು ವೈರಲ್ ಆಗಲು ಕಾರಣ ಇವರ ಜೋಡಿ ಮ್ಯಾಚ್.
ಅನಂತ್ ಅಂಬಾನಿಯವರದ್ದು ಒಬೆಸಿಟಿ ಮೈ-ರಾಧಿಕಾ ಮರ್ಚೆಂಟ್ ನೋಡಿದರೆ ಬಳಕುವ ಮೈ ಮಾಟದ ಸುಂದರಿ. ಹೀಗಾಗಿ ಜನರು ಅನಂತ್ ಅಂಬಾನಿ ಮುಖೇಶ್ ಅಂಬಾನಿಯ ಮಗ ಈ ಕಾರಣಕ್ಕೆ ರಾಧಿಕಾರವರು ಮದುವೆಯಾಗುತ್ತಿದ್ದಾರೆ ಎಂದು ಟ್ರೋಲ್ ಮಾಡಲಾರಂಭಿಸಿದರು. ನಾವು ಈ ರೀತಿ ಟ್ರೋಲ್ ಮಾಡುವ ಅಗ್ಯತವಿಲ್ಲ, ಅವರಿಬ್ಬರು ಇಷ್ಟ ಪಡುತ್ತಿದ್ದಾರೆ , ಅವರು ವಿವಾಹವಾಗುತ್ತಿದ್ದಾರೆ ಎಂದು ಯೋಚಿಸದೆ ಟ್ರೋಲ್ ಮಾಡಿದರು, ಈ ಟ್ರೋಲ್ ಆ ಕುಟುಂಬದವರನ್ನು ನೋಯಿಸಿತು, ಹೀಗಾಗಿ ನೀತಾ ಅಂಬಾನಿ ತಮ್ಮ ಮಗನ ಮೈ ತೂಕದ ಬಗ್ಗೆ ಮಾತನಾಡಬೇಡಿ ಎಂದು ಕೈ ಮುಗಿದು ಕೇಳಿಕೊಂಡಿದ್ದರು.
ಇದು ಬಹುತೇಕ ಜನರಿಗೆ ಗೊತ್ತಿರಲಿಲ್ಲ ಹಾಗಾಗಿ ಜನರು ಸುಮ್ಮನೆ ಸೋಷಿಯಲ್ ಮೀಡಿಯಾ ಖಾತೆ ಎಂದು ಟ್ರೋಲ್ ಮಾಡಿದ್ದೇ ಮಾಡಿದ್ದು, ಆದರೆ ಇವರ ನಡುವೆ ಪ್ರೀತಿ ತುಂಬಾ ವರ್ಷಗಳಿಂದ ಇತ್ತು, ಅದಕ್ಕೆ ಸಾಕ್ಷಿ ಅವರು ಶೇರ್ ಮಾಡುತ್ತಿದ್ದ ಫೋಟೋಗಳು. ನಿಮಗೆಲ್ಲಾ ಗೊತ್ತಿರಬಹುದು ಅನಂತ್ ಅಂಬಾನಿ ಮೊದಲು ದಪ್ಪಗಿದ್ದರು, ನಂತರ ಅವರು ಎಷ್ಟು ಹ್ಯಾಂಡ್ಸಮ್ ಆಗಿ ಬದಲಾದರು ಅಂದರೆ ಅವರ ವೇಯ್ಟ್‌ಲಾಸ್ ಜರ್ನಿ ನೋಡಿದವರು ಶಾಕ್ ಆಗಿದ್ದರು.
45ಕೆಜಿ ಮೈ ತೂಕ ಕಳೆದುಕೊಂಡು ತುಂಬಾ ಫಿಟ್ ಆಗಿದ್ದರು, ಅದಾದ ಮೇಲೆ ಅವರಿಗೆ ಯಾವ ಸಮಸ್ಯೆ ಆಯ್ತೋ ಗೊತ್ತಿಲ್ಲ ಕಳೆದುಕೊಂಡ ಮೈ ತೂಕ ಮರಳಲಾರಂಭಿಸಿತು, ಮೊದಲು ಇದ್ದಕ್ಕಿಂತಲೂ ಹೆಚ್ಚು ಮೈ ತೂಕ ಪಡೆದರು, ಇದೇ ಸಮಯದಲ್ಲಿ ಎಂಗೇಜ್‌ಮೆಂಟ್ ಆಯ್ತು, ಆವಾಗ ಜನರು ಇಷ್ಟೊಂದು ದಪ್ಪವಿರುವ ವ್ಯಕ್ತಿಯನ್ನು ಅಷ್ಟು ಸುಂದರವಿರುವ ಹುಡುಗಿ ಒಪ್ಪಿಕೊಂಡಿದ್ದು ಆತನ ಹಣ ನೋಡಿ ಎಂದು ಟ್ರೋಲ್ ಮಾಡಲಾರಂಭಿಸಿದರು.
ಆದರೆ ಅನಂತ್ ಅಂಬಾನಿ ಮೊದಲು ದಪ್ಪವಿದ್ದಾಗಲೂ, ಮೈ ತೂಕ ಕಳೆದುಕೊಂಡು ಫಿಟ್ ಆಗಿದ್ದಾಗಲೂ ನಂತರ ಒಬೆಸಿಟಿ ಮೈ ಬಂದಾಗಲೂ ಅವರ ಜೊತೆ ರಾಧಿಕಾ ಮರ್ಚೆಂಟ್ ಇದ್ದಾರೆ, ಇವರದ್ದು ಬಾಹ್ಯ ಸೌಂದರ್ಯ ನೋಡಿ ಹುಟ್ಟಿಕೊಂಡಿರುವ ಪ್ರೀತಿಯಲ್ಲ, ಪರಿಶುದ್ಧವಾದ ಪ್ರಿತಿ.. ಈ ಜೋಡಿ ಇದೇ ಪ್ರೀತಿಯಲ್ಲಿ ಸದಾ ಸಂತೋಷದಿಂದ ಬಾಳಲಿ ಎಂದು ಹಾರೈಸೋಣ...
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.