ಮೈಮೇಲಿದ್ದ‌ ಚಿನ್ನ ಮಾರಿ ಸಾಲ ತೀರಿಸಿಕೊಂಡೆ, ಗಂಡನ ಜೊತೆ ಡಿವೋರ್ಸ್ ಸ್ಪಷ್ಟತೆ ಕೊಟ್ಟ ಸಪ್ನಾ ದೀಕ್ಷಿತ್

 | 
Huu
ಜೀ ಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಮತ್ತು ʻಕಮಲಿʼ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಸಪ್ನಾ ದೀಕ್ಷಿತ್‌ ನಟಿಸಿದ್ದಾರೆ. ಕಿರುತೆರೆಯಲ್ಲಷ್ಟೇ ಅಲ್ಲದೇ ಹಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಶಾರ್ವರಿ ಪಾತ್ರದಲ್ಲಿ ಸಪ್ನಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ವಿಲನ್‌ ರೋಲ್‌ ಆಗಿರುವುದರಿಂದ ಹಲವರಿಗೆ ಇವರ ಪಾತ್ರದ ಬಗ್ಗೆ ಬೇಸರ ಇರುವುದು ನಿಜಾ. ಆದರೆ ಬದುಕು ಸಾಗಬೇಕಿದೆ ಎಂದಿದ್ದಾರೆ.
ನನ್ನ ಗಂಡ ಒಂದು ವರ್ಷ ಹೋಗ್ತಿದ್ರು, ಮತ್ತೆ ಆಮೇಲೆ ತುಂಬಾ ಬ್ರೇಕ್ ತಗೊಂಡು ಬಿಡ್ತಿದ್ರು. ಮತ್ತೆ ನಾನು ಗಲಾಟೆ ಮಾಡಿದಾಗ ಮತ್ತೆ ಕೆಲಸಕ್ಕೆ ಹೋಗ್ತಿದ್ರು, ಮತ್ತೆ ಆಮೇಲೆ ಏನೋ ಕಾರಣಕ್ಕೆ ಹೋಗ್ತಾನೆ ಇರ್ಲಿಲ್ಲ. ಆಗೆಲ್ಲ ನನಗೆ ತುಂಬ ಜನ ನೆಗೆಟಿವ್ ಮಾತನಾಡಿದ್ರು. ನನ್ನ ಗಂಡನ ಬಗ್ಗೆ ಹೇಗೆ ಮಾತನಾಡಿದೆ ಅಂತ ಕೆಲವರು ಕೇಳಿದ್ದುಂಟು. ನಾನು ನಡೆದು ಹೋಗಿದ್ದನ್ನು ಮಾತನಾಡಿದ್ದೆ ಅಷ್ಟೇ. ಏನೇ ಆದರೂ, ಎಷ್ಟೇ ಕಷ್ಟ ಸುಖ ಬರಲೀ ಅವರಿಗೆ ಡಿವೋರ್ಸ್‌ ಕೊಡದೆ ಅವರ ಜೊತೆಗೆ ಇದ್ದೇನೆ. 
ಜನರು ಯಾಕೆ ಈ ವಿಷಯವನ್ನು ಒಪ್ಪಿಕೊಳ್ಳಲ್ಲ, ಏನಾದ್ರೂ ಸರಿ, ಇವಳು ಗಂಡನನ್ನು ಬಿಟ್ಟು ಹೋಗಿಲ್ಲ, ಜೊತೆಗೆ ಇದ್ದಾಳೆ ಅಂತ ಯಾಕೆ ಮಾತಾಡಲ್ಲ? ನೀನು ನಿನ್ನ ಗಂಡನನ್ನು ಬಿಟ್ಟು ಈಗ ಏನೋ ರೀಲ್ಸ್ ಮಾಡ್ಕೊಂಡಿದ್ದೀಯ ಅಂತ ಹೇಳ್ತಾರೆ.ನಾನು ರೀಲ್ಸ್ ಮಾಡೋಕು ನನ್ನ ಗಂಡನ ಬಗ್ಗೆ ನಾನು ಮಾತಾಡಿದ್ದಕ್ಕೂ ಏನು ಸಂಬಂಧ? ನಿಮ್ಮ ತಲೆಯಲ್ಲಿ ನೆಗೆಟಿವಿಟಿ ಇದ್ರೆ ನಾನು ಏನು ಮಾಡೋಕೆ ಆಗಲ್ಲ. ನನ್ನ ಗಂಡನ ಜೊತೆ ನಾನು 25ನೇ ವರ್ಷದ ಆನಿವರ್ಸರಿ ಸೆಲೆಬ್ರೇಟ್ ಮಾಡ್ಕೋಬೇಕು? ನಾನು ಷಷ್ಠಿಪೂರ್ತಿ ಮಾಡಿಕೊಳ್ಳಬೇಕು, ಇದನ್ನೆಲ್ಲ ಬೇರೆಯವರ ಜೊತೆ ಊಹಿಸಿಕೊಳ್ಳೋಕೆ ಆಗೋದಿಲ್ಲ. 
ಅಶ್ವಿನ್‌ ದುಡಿಯದೇ ಇದ್ದಾಗ, ನಾನು ದುಡಿಯುತ್ತಿದ್ದೆ. ನನ್ನ ಪಾಲಕರು ಕೂಡ ಈಗೇನು ಅಶ್ವಿನ್ ದುಡಿತಿಲ್ಲ ಅಂದ್ರೆ ನೀನು ದುಡಿತಿದೆಯಲ್ಲ ಬಿಡು ಅಂತ ಪದೇ ಪದೇ ಜ್ಞಾಪಿಸಿದರು. ನೀನು ಏನಾದರೂ ಮಾಡು, ಸಾವಿರ ಕಳ್ಕೊಂಡಿದ್ದೀಯಾ, ಚಿನ್ನ ಮಾರಿದೀಯ, ನೀನು ತುಂಬಾ ಬಿಸಿನೆಸ್ ಮಾಡಿದೀಯಾ, ಲಾಸ್ ಆಗಿದೆ. ನಿನಗೆ ಒಂದು ಹೆಜ್ಜೆ ಇಡಕ್ಕೂ ಭಯ ಆಗ್ತಿದೆ ಎನ್ನೋದನ್ನು ನಾನು ಒಪ್ಪಿಕೊಳ್ಳುವೆ, ಈಗ ಉದ್ಯಮ ಬೇಡ, ಕೆಲಸಕ್ಕೆ ಹೋಗು ಅಂತ ತುಂಬಾ ಮೋಟಿವೇಟ್ ಮಾಡ್ತಿದ್ದೆ. 
ನೀನೇ ಗಂಡನನ್ನು ಹಾಳು ಮಾಡ್ತಿದ್ದೀಯಾ, ನೀನೇ ಕೆಲಸಕ್ಕೆ ಹೋಗೋಕೆ ಬಿಡ್ತಿಲ್ಲ, ನೀನೇ ಸಾಕ್ತಾ ಇದೀಯಾ, ಅದಕ್ಕೆ ಅವನು ಆರಾಮಾಗಿದ್ದಾನೆ ಅಂತ ಜನರು ನನಗೆ ಬೈಯ್ಯೋರು. ನಾಲ್ಕು ಗೋಡೆ ಮಧ್ಯ ನಡೆಯೋದನ್ನ ನಾನು ಎಲ್ಲರ ಹತ್ರನು ಹೇಳ್ಕೊಂಡು ತಿರೋಗಾಕಲ್ಲ. ನಾನು ಹಾಗೂ ನನ್ನ ಗಂಡನ ಮಧ್ಯೆ ಏನು ಮಾತು ನಡೆಯುತ್ತಿತ್ತು ಎನ್ನೋದು ನನಗೆ ಗೊತ್ತಿದೆ. ಅವರು ಒಳ್ಳೆಯವರು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub