ಶಿವಮೊಗ್ಗ ಈ.ದ್ ಹಬ್ಬಕ್ಕೆ 5 ಕೋಟಿ ಸಂಗ್ರಹ, ಇಷ್ಟು ದೊಡ್ಡ ಹಣ ಫಂಡಿಂಗ್ ಮಾಡಿದ್ದು ಯಾ.ರು

ಪ್ರತಿಸಲಕ್ಕಿಂತ ಈ ಬಾರಿ ಈದ್ ಮಿಲಾದ್ ಹಬ್ಬವನ್ನು ಶಿವಮೊಗ್ಗದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಹಬ್ಬದ ಮೆರವಣಿಗೆ ವೇಳೆ ಕಪ್ಪು ಚುಕ್ಕೆ ಎಂಬಂತೆ ಕಲ್ಲು ತೂರಾಟ ನಡೆದು, ಕೋಮು ಗಲಭೆ ಸಹ ಉಂಟಾಗಿದೆ. ಅಷ್ಟಕ್ಕೂ ಅದ್ದೂರಿ ಹಬ್ಬ ಆಚರಣೆಗೆ 5 ಕೋಟ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಮಲೆನಾಡಿನ ಹಿಂದೂಗಳ ಹಬ್ಬ ಆಗಿರಬಹುದು, ಮುಸ್ಲಿಮರ ಹಬ್ಬ ಆಗಿರಬಹುದು ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನುಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಶಿವಮೊಗ್ಗ ನಗರದ ಪ್ರಮುಖ ಬಡಾವಣೆ, ವೃತ್ತಗಳಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಭರ್ಜರಿ ಅಲಂಕಾರ ಮಾಡಲಾಗಿತ್ತು.
ಅಲಂಕಾರಕ್ಕಾಗಿಯೇ ಸಾಕಷ್ಟು ಹಣ ಖರ್ಚು ಮಾಡಲಾಗಿತ್ತು. ಸ್ಥಳೀಯ ಮುಸ್ಲಿಂ ಮುಖಂಡರು, ಯುವಕರು ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡಿದ್ದಾರೆ. ಕೆಲವೆಡೆಗಳಲ್ಲಿ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬಂದಿದೆ. ಅದರಂತೆ ಹೊರಗಡೆಯಿಂದಲೂ ಈದ್ ಮಿಲಾದ್ ಹಬ್ಬ ಆಚರಣೆಗೆ ಈ ಬಾರಿ ಧನ ಸಂಗ್ರಹವಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಅಧಿಕ ಹಣ ಸಂಗ್ರಹವಾಗಿದ್ದರಿಂದಲೇ ಎಲ್ಲೆಂದರಲ್ಲಿ ಕಟೌಟ್, ಬ್ಯಾನರ್ , ಖಡ್ಗ ಹಾಕಿದ್ದರು ಎನ್ನಲಾಗಿದೆ. ಈಗ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹ ಹೇಗಾಯ್ತು? ಹೊರಗಿನಿಂದ ಸಹಾಯ ಧನ ಮಾಡಿದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಈದ್ ಮಿಲಾದ್ ಹಬ್ಬ ಇಷ್ಟೊಂದು ಅದ್ದೂರಿಯಾಗಿ ಮಾಡಲು ಮತ್ತೊಂದು ಕಾರಣ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ.
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ನಗರದಲ್ಲೆಡೆ ಅದ್ದೂರಿಯಾಗಿ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಹಿಂದೂಗಳು ನೆರೆದಿದ್ದರು. ಇದಕ್ಕೆ ಪ್ರತಿಯಾಗಿಯೇ ಈದ್ ಮಿಲಾದ್ ಹಬ್ಬಕ್ಕೆ ಅಲಂಕಾರ, ಮೆರವಣಿಗೆ ನಡೆಸಲಾಗಿತ್ತು ಎಂಬ ವಿಚಾರ ಹೊರ ಬಿದ್ದಿದೆ.ಒಟ್ಟಿನಲ್ಲಿ ಹೇಳುವುದಾದರೆ ಇದೀಗ ಹಣದ ಕುರಿತಾಗಿ ಪೊಲೀಸ್ ಅಧಿಕಾರಿಗಳು ತಲೆ ಕೆಡಿಸಿಕೊಂಡು ಕೂತಿದ್ದಾರೆ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.