ಮೌಢ್ಯಗಳಿಗೆ ಸವಾಲು ಹಾಕಿ ಬದುಕುತ್ತಿರುವ ಸಿದ್ದರಾಮಯ್ಯ, ಇದ್ದರೆ ಈ ರೀತಿಯ ಇರಬೇಕು

 | 
Bgf

ತಮ್ಮ ಸಾರ್ವಜನಿಕ ಜೀವನದಲ್ಲಾಗಲೀ ಅಥವಾ ರಾಜಕೀಯ ಜೀವನದಲ್ಲಾಗಲೀ ತಮ್ಮ ಸುತ್ತಲೂ ಸುತ್ತಿಕೊಂಡಿರುವ ಮೌಢ್ಯಗಳನ್ನು ತೊಡೆಯುತ್ತಾ ಆಗಾಗ ಸುದ್ದಿಯಾಗುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಮತ್ತೊಂದು ಮೌಢ್ಯವನ್ನು ತೊಡೆಯಲು ಮುಂದಾಗಿದ್ದಾರೆ. 

ಇತಿಹಾಸ ಪ್ರಸಿದ್ಧವಾದ ಹಂಪಿಯಲ್ಲಿರುವ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆದರೆ ಅಧಿಕಾರದಲ್ಲಿರುವ ರಾಜಕಾರಣಿಗಳ ಅಧಿಕಾರ ಹೋಗುತ್ತದೆ ಎಂಬ ರಾಜಕೀಯ ನಂಬಿಕೆಯೊಂದನ್ನು ತೊಡೆದು ಹಾಕಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ. 

ಅಸಲಿಗೆ, ರಾಜಕೀಯ ವಲಯದಲ್ಲಿ ಹಬ್ಬಿಕೊಂಡಿರುವ ಈ ಮೂಢನಂಬಿಕೆಗೆ ಒಂದು ಕಾರಣವೂ ಇದೆ. 1973ರ ನವಂಬರ್ 1ರಂದು ಇದೇ ಹಂಪಿಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು, ಅಲ್ಲಿಯೇ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನು ನಾಮಕರಣ ಮಾಡುವುದಾಗಿ ಪ್ರಕಟಿಸಿದ್ದರು. ಆನಂತರ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದರ್ಶನವನ್ನು ಪಡೆದು ಅವರು ಬೆಂಗಳೂರಿಗೆ ಮರಳಿದ್ದರು. 

ಅದಾಗಿ, ಕೆಲವೇ ದಿನಗಳಲ್ಲಿ ಅವರ ಅಧಿಕಾರ ಹೋಗಿತ್ತು! ಆದರೆ ಇದೇ  ತಿಂಗಳ 2ರಂದು ಹಂಪಿಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದ ಉದ್ಘಾಟನೆಗೆ ಆಗಮಿಸಿದ್ದಾರೆ.
ಅಲ್ಲದೆ ವಾಸ್ತು ಸರಿಯಿಲ್ಲ ಅನ್ನೋ ಕಾರಣಕ್ಕೆ ಮುಚ್ಚಲ್ಪಟ್ಟಿದ್ದ ತಮ್ಮ ಕಚೇರಿಯ ಬಾಗಿಲನ್ನು ಸಿಎಂ ಸಿದ್ಧರಾಮಯ್ಯ ಓಪನ್ ಮಾಡಿಸಿದ್ದಾರೆ. 

ದಕ್ಷಿಣಕ್ಕೆ ಬಾಗಿಲು ಇದೆ ಅನ್ನೋ ಕಾರಣಕ್ಕೆ ಯಾವ ಮುಖ್ಯಮಂತ್ರಿಗಳು ಸಹ ಬಳಸದ ಸಿಎಂ ಕಚೇರಿಯ ದಕ್ಷಿಣಾಭಿಮುಖವಾಗಿರುವ ಬಾಗಿಲು ಸಿದ್ಧರಾಮಯ್ಯ ಅವರ ಸಮ್ಮುಖದಲ್ಲಿಯೇ ತೆರೆಯಲಾಗಿದೆ. ಈ ಹಿಂದೆಯೂ ಸಹಾ ರಾಜ್ಯಸಭೆ ಚುನಾವಣೆ ತಯಾರಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಕಚೇರಿ ಕೃಷ್ಣದಲ್ಲಿ  ವಿವಿಧ ಹಂತದ ಸಭೆ ನಡೆಸುತ್ತಿದ್ದಾಗ ಹೊರಗಡೆ ನಿಂತಿದ್ದ ಕಾರಿನ ಮೇಲೆ ಗಾಯಗೊಂಡಿದ್ದ ಕಾಗೆಯೊಂದು ಹತ್ತಿ ಕುಳಿತಿತ್ತು. 

ಅದನ್ನು ಓಡಿಸಲು ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ಸುಮಾರು ಹೊತ್ತಿನವರೆಗೆ ಕದರಿರಲಿಲ್ಲ. ನಂತರ ಸಿಬ್ಬಂದಿಯೇ ಕೈಯಿಂದ ಕೆಳಗಿಳಿಸಿದ್ದರು. ಈ ಬಗ್ಗೆ ಸುದ್ದಿವಾಹಿನಿಗಳು ವಿಡಿಯೋ ಸಹಿತ ಪ್ರಸಾರ ಮಾಡಿದ್ದರಿಂದ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.
ಕಾರಿನ ಮೇಲೆ ಕಾಗೆ ಕುಳಿತಿದ್ದರಿಂದ ಅಪಶಕುನವೆಂದು ಕೆಲವರು ಹೇಳಿದ್ದರು. ಆದರೆ ಮೂಢನಂಬಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ಯಾವುದನ್ನೂ ಕೇರ್ ಮಾಡಿರಲಿಲ್ಲ.

ಅಲ್ಲದೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆ ಮಡೆ ಸ್ನಾನವನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸರ್ಕಾರ ಪಾಲನೆ ಮಾಡಲಿದೆ. ಹಾಗೆಯೇ ಎಡೆಸ್ನಾನ ಮಾಡುವುದು ಕೂಡ ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.