ಗೆಳತಿಯ ಅಣ್ಣನನ್ನೇ ಪಟಾಯಿಸಿ ಎಂಗೇಜ್ ಆದ ಸೋಷಿಯಲ್ ಮೀಡಿಯಾ ಸ್ಟಾರ್, ಸೂಪರ್ ಜೋಡಿ ಎಂದ ಕನ್ನಡಿಗರು

 | 
೬

ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ರೀಲ್ಸ್‌ ಮೂಲಕವೇ ಸಾಕಷ್ಟು ಮಂದಿ ಫೇಮಸ್‌ ಆದವರಿದ್ದಾರೆ. ಅಷ್ಟೇ ಅಲ್ಲ ಹಾಗೇ ಜನರಿಂದ ನೇಮು ಫೇಮು ಗಿಟ್ಟಿಸಿಕೊಂಡು ಪ್ರೀತಿ, ಪ್ರೇಮದ ವಿಚಾರವನ್ನೂ ಬಹಿರಂಗವಾಗಿ ಹೇಳಿಕೊಂಡು ಮದುವೆ ಆಗುವ ಹಂತಕ್ಕೆ ಹೋದ ಉದಾಹರಣೆಗಳಿವೆ. ಇದೀಗ ರೀಲ್ಸ್‌ನಿಂದಲೇ ಪರಿಚತರಾದ ನಿಖಿಲ್‌ ಮತ್ತು ಮಧು ಜೋಡಿಯೂ ಮದುವೆ ಆಗುವ ತಯಾರಿಯಲ್ಲಿದೆ.

ಈ ಜೋಡಿ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಈ ಖುಷಿಯ ವಿಚಾರವನ್ನು ಪೋಸ್ಟ್‌ ಮಾಡಿದೆ. ನಿಖಿಲ್‌ ರವೀಂದ್ರ ಮತ್ತು ಮಧು ಗೌಡ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇದೀಗ ಆ ಪ್ರೀತಿಗೆ ಮದುವೆ ಮುದ್ರೆ ಬಿದ್ದಿದೆ.ಎರಡೂ ಮನೆಯವರ ಸಮ್ಮುಖದಲ್ಲಿ ಹೂವು ಮುಡಿವ ಶಾಸ್ತ್ರ ಮಾಡಿಕೊಂಡಿರುವ ಈ ಜೋಡಿ, ಫಲಸಿತು ನಾಲ್ಕು ವರ್ಷದ ಪ್ರೀತಿ ಎಂದಿದೆ.

ಮಧು ಗೌಡ ಅವರ ಮನೆಯಲ್ಲಿ ಅದ್ಧೂರಿಯಾಗಿಯೇ ಹೂವು ಮುಡಿವ ಶಾಸ್ತ್ರದ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ. ಎಲ್ಲರಿಗೂ ನಮಸ್ಕಾರ ನಮ್ಮ4 ವರ್ಷದ ಪ್ರೀತಿ ಕನಸು ನನಸಾಯಿತು. ಇವತ್ತು ಹೂವು ಇಡುವ ಶಾಸ್ತ್ರ ಆಯಿತು. ನಿಮ್ಮ ಪ್ರೀತಿ ನಮ್ಮ ಪ್ರೀತಿಯ ಮೇಲೆ ಸದಾ ಹೀಗೆ ಇರಲಿ ಎಂದಿದ್ದಾರೆ ಮಧು ಗೌಡ. ಈ ವರೆಗೂ ಇಬ್ಬರೂ ಒಟ್ಟಿಗೆ ಒಂದೇ ರೀಲ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಧು ಮತ್ತು ನಿಖಿಲ್‌ ಬಗ್ಗೆ, ನೀವು ಪ್ರೇಮಿಗಳಾ ಎಂದು ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿದ್ದವು. ಆದರೆ, ಅದ್ಯಾವುದಕ್ಕೂ ಉತ್ತರ ಕೊಟ್ಟಿರಲಿಲ್ಲ ಈ ಜೋಡಿ. 

ಬರೀ ನಿಖಿಲ್‌ ಜತೆ ಅಷ್ಟೇ ಅಲ್ಲ ಮಧು ತಮ್ಮ ಬಹುತೇಕ ರೀಲ್‌ಗಳನ್ನು ನಿಖಿಲ್‌ ಅವರ ತಂಗಿ ನಿಶಾ ಅವರೊಂದಿಗೆ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇವರ ರೀಲ್ಸ್‌ಗಳು ಸಖತ್‌ ವೈರಲ್‌ ಆಗಿವೆ. ಅಂದಹಾಗೆ, ಮಧು ಗೌಡ ಇನ್‌ಸ್ಟಾಗ್ರಾಂನಲ್ಲಿ 6ಲಕ್ಷ 452 ಸಾವಿರ ಫಾಲೋವರ್ಸ್‌ ಇದ್ದರೆ, ನಿಖಿಲ್‌ ರವೀಂದ್ರ ಅವರಿಗೆ 1ಲಕ್ಷ 23 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. ಯೂಟ್ಯೂಬ್‌ ಚಾನೆಲ್‌ ಸಹ ಹೊಂದಿದ್ದಾರೆ. ಸದ್ಯ ಈ ಜೋಡಿ ತಾವಿಬ್ಬರೂ ಎಂಗೇಜ್‌ ಆದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರು ಶುಭ ಹಾರೈಸುತ್ತಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.