ಸೋಶಿಯಲ್ ಮೀಡಿಯಾ ಸ್ಟಾರ್ ತೇಜಸ್ ಇನ್ನಿ ಲ್ಲ; ಕಣ್ಣೀರಿಟ್ಟ ಕನ್ನಡಿಗರು

 | 
Yd

ಕಿರುತೆರೆ ನಟ ವರುಣ್ ಆರಾಧ್ಯ ಅವರ ಕುಚಿಕು ಗೆಳೆಯ ತೇಜಸ್ ಅವರು ನಿಧನರಾಗಿದ್ದಾರೆ. ತೇಜಸ್‌ ಹಠಾತ್ ಸಾವಿನ ಸುದ್ದಿ ಕನ್ನಡ ಕಿರುತೆರೆ ಪಾಳಯದಲ್ಲಿ ಆಘಾತವನ್ನೇ ತಂದಿದೆ. ತೇಜಸ್ ಸಾವಿಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಕಲಾವಿದರು ಕಂಬನಿ ಮಿಡಿಯುತ್ತಿದ್ದಾರೆ.

ಸಾವು ಅನ್ನೋದು ನಿಜಕ್ಕೂ ಘನಘೋರ. ಅದರಲ್ಲೂ ನಿನ್ನೆ ಇದ್ದವರು ಇಂದು ನಮ್ಮೊಂದಿಗೆ ಇಲ್ಲ ಅನ್ನೋದನ್ನ ಸಹಿಸಿಕೊಳ್ಳೋದು ಸಾಧ್ಯವೇ ಇಲ್ಲ. ನಟ ವರುಣ್ ಆರಾಧ್ಯ ಅವರು ಆತ್ಮೀಯ ಗೆಳೆಯರ ಪೈಕಿ ತೇಜಸ್ ಕೂಡ ಒಬ್ಬರಾಗಿದ್ದರು. ನಿನ್ನೆ ಇದ್ದ ತೇಜಸ್ ಅವರು ಇವತ್ತು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದರೆ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ.

ತೇಜಸ್ ಅವರ ನಿಧನಕ್ಕೆ ಕಿರುತೆರೆ ನಟ ವರುಣ್ ಆರಾಧ್ಯ ಭಾವುಕರಾಗಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವರುಣ್, ನನಗೆ ಈಗಲೂ ನಂಬಲು ಆಗುತ್ತಿಲ್ಲ. ಸಾಧ್ಯವಾದ್ರೆ ಮತ್ತೆ ಹುಟ್ಟಿ ಬಾ. ನೀನು ನನ್ನ ಪಾಲಿಗಿದ್ದ ಒಬ್ಬನೇ ಸಹೋದರ. ಯಾಕೆ ಇಷ್ಟು ಬೇಗ ನನ್ನ ಬಿಟ್ಟು ಹೋದೆ. ದಯವಿಟ್ಟು ವಾಪಸ್ ಎಂದು ಕಣ್ಣೀರು ಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದ ಇನ್‌ಫ್ಲೂಯೆನ್ಸರ್‌ ತೇಜಸ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತೇಜಸ್ ಹಾಗೂ ಇನ್ನೊಬ್ಬ ಸ್ನೇಹಿತ ಜೊತೆಯಲ್ಲಿ ದೊಡ್ಡಬಳ್ಳಾಪುರದ ಕಡೆ ಹೋಗಿದ್ದರು. ದೊಡ್ಡಬಳ್ಳಾಪುರ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ತೇಜಸ್ ಮೃತಪಟ್ಟಿದ್ದಾರೆ. ತೇಜಸ್ ಜೊತೆಗಿದ್ದ ಸ್ನೇಹಿತನಿಗೂ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.