ಮದುವೆಯಾದ ಸ್ಪಲ್ಪ ಸಮಯದಲ್ಲೇ ಸಿಹಿಸುದ್ದಿ ಕೊಟ್ಟ ಜೋಡಿ, ಸೋನಲ್ ತರುಣ್ ಮನೆಯಲ್ಲಿ ಸಂಭ್ರಮ
Jan 20, 2025, 22:27 IST
|

ಹೌದು ಅದಕ್ಕೆ ಕಾರಣ ಕೂಡಾ ಇದೆಯಂತೆ. ತರುಣ್ ಅವರ ತಾಯಿಗೆ ಮೊಮ್ಮಕ್ಕಳ ನೋಡುವ ಆಸೆ ಹುಟ್ಟಿದೆಯಂತೆ. ಅಲ್ಲದೆ ಮದುವೆಯಾದ ಬಳಿಕ ಯಾಕೆ ಹೊಸ ಸಿನಿಮಾವನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವುದರ ಬಗ್ಗೆ ಸ್ವತಃ ನಟಿ ಸೋನಲ್ ಮೊಂಥೆರೋ ಮಾತನಾಡಿದ್ದಾರೆ. 'ಮದುವೆಯಾದ ಮೇಲೆ ಹೊಸ ಸಿನಿಮಾ ಅವಕಾಶಗಳು ತುಂಬಾ ಬಂದಿದೆ. ಆದರೆ ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಯಾಕೆಂದರೆ ಈ ಹಿಂದೆ ಒಪ್ಪಿಕೊಂಡ ಕೆಲಸಗಳೇ ತುಂಬಾ ಇದೆ. ಅದೆಲ್ಲಾ ಒಂದು ಸರಿ ಮುಗಿದ ಮೇಲೆ ಹೊಸ ಸಿನಿಮಾಗಳಿಗೆ ಕೈ ಹಾಕುತ್ತೇನೆ' ಎಂದು ಹೇಳಿದ್ದಾರೆ.
ಪತಿ ತರುಣ್ ಸುಧೀರ್ ಅವರ ಸಿನಿಮಾದಲ್ಲಿ ನಟಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸೋನಾಲ್, ತರುಣ್ ಅವರು ಮೊದಲೇ ಹೇಳಿದ್ದಾರೆ. ನಾನು ಮಾಡುವ ಸಿನಿಮಾದಲ್ಲಿ ಸೋನಾಲ್ ಈ ಪಾತ್ರಕ್ಕೆ ಸೂಕ್ತ ಎನಿಸಿದರೆ ಮಾತ್ರ ನಾನು ತೆಗೆದುಕೊಳ್ಳುತ್ತೇನೆ. ನನ್ನ ಹೆಂಡತಿ ಎನ್ನುವ ಕಾರಣಕ್ಕೆ ಪಾತ್ರ ಕೊಡುವುದಿಲ್ಲ. ಸಿನಿಮಾ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ. ಅವರ ಸಿನಿಮಾಗಳನ್ನು ಅವರು ಮಾಡುತ್ತಾರೆ. ನನ್ನ ಕೆಲಸಗಳು ಕೂಡ ನಡೆಯುತ್ತಿದೆ ಎಂದಿದ್ದಾರೆ.
ಅಲ್ಲದೆ ಈಗಾಗಲೇ ಹಲವರು ವಿಶೇಷದ ಬಗ್ಗೆ ಮಾತಾಡ್ತಾ ಇದ್ದಾರೆ. ನನಗೂ ಮಕ್ಕಳೆಂದರೆ ಇಷ್ಟ ಎಂದು ಸೋನಾಲ್ ಹಿಂಟ್ ನೀಡಿದ್ದಾರೆ. ಮಾತು ಮುಂದುವರಿಸಿದ ಸೋನಾಲ್, ಖಂಡಿತಾ ದರ್ಶನ್ ಅವರನ್ನು ಭೇಟಿ ಮಾಡಬೇಕು ಆದರೆ ಈಗಲ್ಲ. ಅವರಿಗೆ ಅವರ ಕುಟುಂಬದ ಜೊತೆ ಸಮಯ ಕಳೆಯಲು ನಾವು ಕೂಡ ಸಮಯ ಕೊಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಹುಷಾರಾಗಬೇಕು.
ಬೆನ್ನು ನೋವು, ಸರ್ಜರಿಯಿಂದ ಆಚೆ ಬರಲಿ ಅವರು. ಅದಾದ ಮೇಲೆ ಖಂಡಿತಾ ಹೋಗಿ ಭೇಟಿಯಾಗುತ್ತೇವೆ. ಯಾಕೆಂದರೆ ನಮ್ಮ ಮದುವೆಗೆ ಅವರಿರಲ್ಲ ಎನ್ನುವ ಬೇಜಾರಿದೆ. ಆದರೆ ಅವರು ಮೊದಲು ಹುಷಾರಾಗಲಿ, ಆಮೇಲೆ ಹೋಗಿ ಭೇಟಿಯಾಗುತ್ತೇವೆ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,13 Mar 2025