ವೇದಿಕೆಯಲ್ಲೇ ಕುಸಿದು ಬಿದ್ದ ಸೋನು ನಿಗಮ್, ಈತನಿಗೆ ಇರುವ ಖಾಯಿಲೆ ಎಂತಹದ್ದು ಗೊತ್ತಾ
Feb 4, 2025, 19:23 IST
|

ಖ್ಯಾತ ಗಾಯಕ ಸೋನು ನಿಗಂ ತಮ್ಮ ಮಧುರ ಕಂಠದ ಮೂಲಕವೇ ಇಡೀ ದೇಶದ ಮನಗೆದ್ದಿದ್ದಾರೆ. ಸಂಗೀತ ಲೋಕದಲ್ಲಿ ಯಾರೂ ಅಳಿಸದ ಹಲವು ದಾಖಲೆಗಳನ್ನೂ ಬರೆದಿದ್ದಾರೆ ಈ ಗಾಯಕ. ಇದೀಗ ಇದೇ ಸಿಂಗರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಲೈವ್ ಕಾನ್ಸರ್ಟ್ ಮುಗಿಯುತ್ತಿದ್ದಂತೆ, ಅತೀವ ಬೆನ್ನು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.
ಲೈವ್ ಕಾನ್ಸರ್ಟ್‌ಗೂ ಮೊದಲೇ ಅತಿಯಾದ ಬೆನ್ನು ನೋವಿನಿಂದ ಬಳಲುತ್ತಿದ್ದ ಸೋನು ನಿಗಂ, ಯಾವುದೇ ಕಾರಣಕ್ಕೂ ಸಂಗೀತ ಕಾರ್ಯಕ್ರಮ ನಿಲ್ಲಬಾರದು ಎಂಬ ಕಾರಣಕ್ಕೆ, ಅದೇ ನೋವಿನಲ್ಲಿಯೇ ವೇದಿಕೆ ಮೇಲೆ ಹಾಡಿನ ಮೂಲಕ ಎಲ್ಲರನ್ನು ರಂಜಿಸಿದ್ದಾರೆ. ಶೋ ಮುಗಿಯುತ್ತಿದ್ದಂತೆ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಲೈವ್ ಕಾನ್ಸರ್ಟ್‌ಗೂ ಮುನ್ನದ ಬೆನ್ನು ನೋವಿನ ವಿಡಿಯೋ ಮತ್ತು ಶೋ ಮುಗಿದ ಬಳಿಕದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ಸೋನು ನಿಗಮ್.
ವೇದಿಕೆ ಮೇಲೆ ಏನೆಲ್ಲ ಆಯ್ತು ಅನ್ನೋದನ್ನು ಹೇಳಿದ ಸೋನು ನಿಗಂ, ನನ್ನ ಜೀವನದ ಕಷ್ಟದ ದಿನವಿದು. ಯಾವುದೇ ಕಾರ್ಯಕ್ರಮಕ್ಕೂ ಮೊದಲು ಇಷ್ಟೊಂದು ನೋವನ್ನು ನಾನು ಅನುಭವಿಸಿಲ್ಲ. ವೇದಿಕೆ ಮೇಲೆ ಹಾಡುತ್ತ ಅತ್ತಿಂದಿತ್ತ ಓಡಾಡುತ್ತಿದ್ದೆ. ಹೀಗಿರುವಾಗಲೇ ಅತೀವ ನೋವು ಕಾಣಿಸಿಕೊಂಡಿತು. ಹೇಗೋ ಅದನ್ನು ಮ್ಯಾನೇಜ್ ಮಾಡಿದೆ. ಜನರ ಪ್ರೀತಿ ನೋಡಿ, ಆ ನೋವಿನಲ್ಲಿಯೂ ಹಾಡಿದೆ, ಕುಣಿದೆ. ಆ ನೋವು ಎಷ್ಟಿತ್ತು ಎಂದರೆ, ಯಾರೋ ನನ್ನ ಬೆನ್ನಿಗೆ ಸೂಜಿ ಚುಚ್ಚಿದಂತೆ ಅನಿಸುತ್ತಿತ್ತು. ಚೂರು ಆಚೀಚೆ ಆದರೂ, ತಾಳಲಾರದ ನೋವು ಎಂದು ಆಸ್ಪತ್ರೆ ಬೆಡ್ ಮೇಲೆ ಮಲಗಿಕೊಂಡೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ಇನ್ನು ಅದೇ ವಿಡಿಯೋದಲ್ಲಿ ಸೋನು ನಿಗಮ್ ಇದು ನನ್ನ ಬದುಕಿನ ಅತ್ಯಂತ ಕಠಿಣ ದಿನಗಳು, ಆದರೂ ಪರವಾಗಿಲ್ಲ. ಹಾಡುತ್ತಾ ಹಾಡುತ್ತಾ ನಾವು ಡಾನ್ಸ್ ಮಾಡುತ್ತೇವೆ. ಅದು ಇದಕ್ಕೆ ಕಾರಣವಾಯ್ತು. ಆದರೂ ನಾನು ಶೋವನ್ನು ಸರಿಯಾಗಿ ನಡೆಸಿಕೊಟ್ಟೆ. ನನ್ನಿಂದ ಜನರು ಅಪಾರವಾಗಿ ನಿರೀಕ್ಷೆ ಮಾಡುವಾಗ ನಾನು ಅವರಿಗೆ ನನ್ನಿಂದ ಅಲ್ಪಸ್ಪಲ್ಪ ಪೂರೈಸಲಾರೆ. ಅವರು ತೃಪ್ತಿಯಾಗುವವರೆಗೂ ಹಾಡಿದ್ದೇನೆ. ಶೋ ಚೆನ್ನಾಗಿಯೇ ಹೋಯಿತು ಎಂದಿದ್ದಾರೆ. ಒಟ್ಟಿನಲ್ಲಿ ಮಧುರ ಕಂಠದಿಂದ ಎಲ್ಲರ ಮನಗೆದ್ದ ಸೋನು ನಿಗಮ್ ಸೋನು ನಿಗಮ್ ಇಲ್ಲಿವರೆಗೂ ಒಟ್ಟು 10 ಸಾವಿರ ಹಿಂದಿ ಹಾಡುಗಳನ್ನು ಹಾಡಿದ್ದಾರೆ. ಹಿಂದಿ ಜೊತೆ ಜೊತೆಗೆ ಕನ್ನಡ, ಓಡಿಯಾ, ಬೆಂಗಾಲಿ, ಗುಜರಾತಿ, ತಮಿಳು, ತೆಲುಗು, ಮರಾಠಿ, ನೇಪಾಳಿ, ಮಲಯಾಳಂ ಮತ್ತು ಬೊಜಪುರಿ ಗೀತೆಗಳನ್ನು ಹಾಡಿದ್ದಾರೆ. ಇವರ ಅನಾರೋಗ್ಯಕ್ಕಾಗಿ ಈಗಾಗಲೇ ಹಲವಾರು ಅಭಿಮಾನಿಗಳು ಕಂಬನಿ ಮಿಡಿದು ಬೇಗನೆ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.