ಸೌಜನ್ಯ ಮನೆಯಲ್ಲಿರುವ ಸಾಲು ಸಾಲು ಕರುಳು ಹಿಂಡುವ ದೃಶ್ಯ ನೋಡಿದ್ರೆ ನಿಮ್ಮ ಕಣ್ಣಲ್ಲಿ ರಕ್ತನೇ ಬರುತ್ತೆ

 | 
Hhh

 ಇದು ಹೆಣ್ಣೊಬ್ಬಳ ಕಣ್ಣೀರ ಕಥೆ ಹೌದು ಒಂದು ದಶಕಕ್ಕೂ ಹಿಂದೆ ಬೆಳ್ತಂಗಡಿ ತಾಲೋಕಿನಲ್ಲಿ ಸೌಜನ್ಯ ಎಂಬ ಯುವತಿಯ ಕಣ್ಮರೆಯಾಗಿತ್ತು. ಕಾಣೆಯಾಗಿ ಒಂದು ದಿನದ ನಂತರ ಅವಳ ಮೃತದೇಹ ಸಿಕ್ಕಿತು. ಆಕೆಯ ಒಳ ಉಡುಪುಗಳು ಇರಲಿಲ್ಲ. ಮರ್ಮಾಂಗಕ್ಕೆ ಮರಳನ್ನು ತುಂಬಲಾಗಿತ್ತು. 

ವಿಷಯ ತಿಳಿದಾಕ್ಷಣ ಸುತ್ತಮುತ್ತಲಿನ ನೂರಾರು ಜನ ನೆರದು ಪ್ರತಿಭಟನೆ ಮಾಡಿದರು. ಪ್ರತಿಭಟನೆ ಹೆಚ್ಚಾದಾಗ ಅಲ್ಲಿನ ಹಿಂದೂ ಮುಖಂಡರಾದ ಮಹೇಶ್ ತಿಮ್ಮರೋಡಿ ಅವರನ್ನು ಠಾಣೆಗೆ ಕರೆದು ಹಿಂದೂ ಸಂಘಟನೆಯ ಯುವಕರನ್ನು ಸಮಾಧಾನ ಮಾಡುವಂತೆ ಕೇಳಿಕೊಳ್ಳಲಾಯಿತು‌.ಅದರ ಜೊತೆಗೆ ಅಲ್ಲಿನ ಧರ್ಮಾಧಿಕಾರಿಗಳ ಕರೆಯ ಮೇರೆಗೆ ಪ್ರತಿಭಟನೆ ವಾಪಾಸು ತೆಗೆದುಕೊಳ್ಳಲಾಯಿತು.
ಆದರೆ ಸಮಾಧಾನ ಮಾಡಿ ಅಂತ ಠಾಣೆಗೆ ಕರೆಸಿದ್ದ ಮಹೇಶ್ ತಿಮ್ಮರೋಡಿ ಅವರ ಮೇಲೆ ಕೂಡ ಕೇಸು ದಾಖಲಾಯಿತು.

ಸೌಜನ್ಯ ಮೃತದೇಹ ಸಿಕ್ಕಾಗ ಆ ಹುಡುಗಿಯ ತಾಯಿ ಠಾಣೆಗೆ ಹೋಗಿ ಕೇಸ್ ಮಾಡುವ ಮೊದಲೇ ಪೋಲಿಸರೇ ಕೇಸು ದಾಖಲಿಸಿಕೊಂಡದ್ದರು. ಸುಮೋಟೋ ಕೇಸಿನಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಮುಂದೆ ನಡೆಸಿದ್ದೆಲ್ಲಾ ತಪ್ಪು ನಡೆಗಳೇ. 

ಸೌಜನ್ಯ ಕೊಲೆ ನಂತರ ಅವರ ಮನೆಗೆ ಹೋಗಿ ಸೌಜನ್ಯಳ 
ಒಳಬಟ್ಟೆಗಳನ್ನು ಕೇಳಿ ಪಡೆದಿದ್ದಾರೆ. ಹರಿದ ಬಟ್ಟೆಗಳಿಗೆ ಸೌಜನ್ಯಳ ತಾಯಿ ಹೊಲಿಗೆ ಹಾಕಿ ಕೊಟ್ಟಿದ್ದಾರೆ. ಹುಡುಗಿಯ ಮೃತದೇಹ ಸಿಕ್ಕಾಗ ಮಹಜರ್ ಮಾಡಬೇಕಾದ ತೆಗೆದುಕೊಳ್ಳಬೇಕಾದ ಒಂದೇ ಒಂದು ಮುಂಜಾಗರೂಕತೆ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.ಸಂತೋಷ್ ಎಂಬ ವ್ಯಕ್ತಿಯನ್ನು ಕೇಸಿನಲ್ಲಿ ಫಿಟ್ ಮಾಡಿದರು ದಶಕಗಳ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಷ್ಟೇ ಅಲ್ಲ. ಇಡೀ ಆತನ ಕುಟುಂಬವನ್ನೇ ಪಾತಾಳಕ್ಕೆ ತಳ್ಳಿದರು.

ಗೋಲ್ಡನ್ ಅವರ್ಸ್ ಆ ಕೃತ್ಯ ನಡೆಸಿದ ಅಪರಾಧಿಗಳ ಬಹುಮುಖ್ಯ ಸಾಕ್ಷ್ಯ ಸಂಗ್ರಹ ಆಗುವುದು ಬಹುತೇಕ ಈ ಗೋಲ್ಡನ್ ಗಂಟೆಗಳಲ್ಲೇ. ಆದರೆ ಪೋಲಿಸರು ಆ ನಲವತ್ತೆಂಟು ಗಂಟೆಗಳನ್ನು ನುಂಗಿ ನೀರು ಕುಡಿದಿದ್ದರು.
ಇದಿಷ್ಟನ್ನೂ ನ್ಯಾಯಾಲಯ ಕೇಳಿದಾಗ ಕೈ ಚೆಲ್ಲಿ ಕುಳಿತ ಪೋಲಿಸರ ನಂತರ ಪ್ರಕರಣವನ್ನು ಸಿ ಬಿ ಐಗೆ ವಹಸಿಲಾಯಿತು. ಸಿ ಬಿ ಐ ಕೂಡ ಅದೇ ತಪ್ಪುಗಳನ್ನು ತನಿಖೆಯ ವರದಿ ಅಂತ ನೀಡಿ ಕೈ ತೊಳೆದುಕೊಂಡಿತು.
ಹೀಗೆ ಎರಡೆರಡು ತನಿಖೆ ಮುಗಿಯುವಷ್ಟರಲ್ಲಿ ಹತ್ತು ವರ್ಷಗಳ ಮೇಲಾಗಿದ್ದವು.

ನ್ಯಾಯಾಲಯ ಆರೋಪಿ ಸಂತೋಷ್ ರಾವ್ ನಿರಪರಾದಿ ಅಂತ ಬಿಡುಗಡೆ ಮಾಡಿ ಪರಿಹಾರ ಸೂಚಿಸುವಂತೆ ಹೇಳಿದೆ. ಆದರೆ ಸೌಜನ್ಯಳ ತಾಯಿ ಈಗಲೂ ಅವಳ ನೆನಪಿನಲ್ಲಿ ಅವಳ ವಸ್ತುಗಳನ್ನು ಹಾಗೆಯೇ ಜೋಪಾನ ಮಾಡಿದ್ದಾರೆ. ಅವರ ಮನೆಗೊಮ್ಮೆ ಭೇಟಿ ನೀಡಿದರೆ ಎಂತಹವರ ಮನ ಕೂಡ ಕರಗಿ ಹೋಗುತ್ತದೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.