FactCheckಮನೆಯಲ್ಲಿ ಅತ್ತಿಗೆ ಆತ್ಮ ಸಂಚಾರ, ರಾಘು ಪತ್ನಿ ಬಗ್ಗೆ ಶ್ರೀಮುರಳಿ ಸ್ಪಷ್ಟತೆ
Apr 3, 2025, 09:58 IST
|

ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ನಟ ಶ್ರೀಮುರಳಿ ಅವರು, ನಮ್ಮ ತಂದೆ ನಮಗೆ ಹಲವಾರು ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ಮುಖ್ಯವಾಗಿ ತಾಳ್ಮೆ, ಪ್ರೀತಿ ಹಾಗೂ ಸಂಬಂಧದ ಬೆಲೆ ಏನು ಎಂಬುದನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದಾರೆ. ಇನ್ನು ಕೆಲವು ಘಟನೆಗಳು ನಮಗೆ ಎಂತಹ ಶಾಕ್ ಕೊಡುತ್ತವೆ ಅಂದ್ರೆ, ಇಷ್ಟೇನಾ ಜೀವನ ಅನಿಸುತ್ತದೆ. ಇದಕ್ಕೋಸ್ಕರ ನಾವು ಇಷ್ಟೆಲ್ಲ ಮಾಡಬೇಕಾ ಅನಿಸುತ್ತೆ. ಆದರೆ ಬದುಕು ಅನ್ನೋದು ನಿಜಾನೇ, ಸಾವು ಅನ್ನೋದು ಕೂಡ ಅಷ್ಟೇ ನಿಜ ಎಂದಿದ್ದಾರೆ.
ಬದುಕಿಗೆ ಎಷ್ಟು ಬೆಲೆ ಇದೆಯೋ ಅಷ್ಟೇ ಬೆಲೆ ಸಾವಿಗೂ ಇದೆ. ಹಾಗಾಗಿ ಅದನ್ನು ನಾವು ಬಿಟ್ಟುಬಿಡಬೇಕು. ಆ ಕ್ಷಣದಲ್ಲಿ ಆ ಒಂದು ಪರಿಸ್ಥಿತಿಯಲ್ಲಿ ನಾವು ಏನನ್ನ ಕಳೆದ್ವಿ, ಏನನ್ನ ನೋಡಿದ್ವಿ, ನಮಗೆ ಏನಾಯ್ತು ಅನ್ನೋದು ನಮ್ಮಲ್ಲೇ ಇರುವುದು ಒಳ್ಳೆಯದು. ಯಾಕಂದ್ರೆ ಈಗಾಗಲೇ ನಾವು ಎಷ್ಟರಮಟ್ಟಿಗೆ ಅದನ್ನ ಮರೆತಿದ್ದೀವಿ ಅನ್ನೋದಕ್ಕಿಂತ ಅದನ್ನ ಎಷ್ಟರಮಟ್ಟಿಗೆ ಇನ್ನೂ ನಾವು ನೆನಪಿನಲ್ಲಿ ಇಟ್ಟುಕೊಂಡಿದ್ದೀವಿ ಅನ್ನೋದು ಮುಖ್ಯ ಎಂದು ಶ್ರೀಮುರಳಿ ಅಭಿಪ್ರಾಯಪಟ್ಟಿದ್ದಾರೆ.
ಸಾವಿನ ಕೊನೇ ದಿನಕ್ಕಿಂತ ಅದರ ಹಿಂದಿನ ದಿನಗಳು ಹೇಗಿದ್ದೆವು ಅನ್ನೋದನ್ನ ಮಾತ್ರ ನೆನಪಿನಲ್ಲಿಟ್ಟುಕೊಳ್ಳಬೇಕು. ಕೆಲವರು ನೆನಪುಗಳೇ ಆಗಲ್ಲ ಅನ್ನಬಹುದು. ಆದರೆ ಅದು ನನ್ನಿಷ್ಟ, ಆ ನೆನಪುಗಳಲ್ಲಿ ಬದುಕೋಕೆ ನನಗೆ ಇಷ್ಟ, ನಾನು ಹಾಗೇ ಬದುಕುತ್ತಿದ್ದೀನಿ' ಎಂದಿದ್ದಾರೆ. ಬದುಕು ಎಷ್ಟು ಸತ್ಯವೋ ಸಾವು ಅಷ್ಟೇ ಸತ್ಯ ಅನ್ನೋದನ್ನ ಎಲ್ಲರೂ ಒಪ್ಪಿಕೊಳ್ಳಬೇಕು. ಸರಿ ಇದಾಯ್ತು ಎಂದು ಮುಂದಕ್ಕೆ ಹೋಗಲೇಬೇಕು ಎಂದು ಸಾವಿನ ಬಗ್ಗೆ ಮಾತನಾಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,6 Apr 2025