ಚಂದ್ರಯಾನ ಯಶಸ್ವಿ ಉಡಾವಣೆ, ಇದರಿಂದ ದೇಶಕ್ಕೆ ಯಾವ ಲಾಭ ಸಿಗುತ್ತದೆ ಗೊತ್ತಾ

 | 
ಕಿ

ಭಾರತ ಬಹುನಿರೀಕ್ಷಿತ 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ'ಯ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಶ್ರೀಹರಿಕೋಟಾದ ಸತೀಶ್ ದವನ್ ಸ್ಪೇಸ್ ಸೆಂಟರ್‌ ನಿಂದ ನಭಕ್ಕೆ ಜಿಮ್ಮಿದ ಚಂದ್ರಯಾನ ನೌಕೆಯು ಮೂರು ಹಂತ ದಾಟಿ ನಿಗದಿತ ಕಕ್ಷೆ ಸೇರುವಲ್ಲಿಯೂ ಯಶಸ್ವಿಯಾಗಿದೆ. 

ಇದರ ಬೆನ್ನಲ್ಲೆ ಶ್ರೀಹರಿಕೋಟಾದ ಕೇಂದ್ರದಲ್ಲಿ ವಿಜ್ಞಾನಿಗಳು, ತಂತ್ರಜ್ಞರ ಹರ್ಷ ಮುಗಿಲು ಮುಟ್ಟಿದೆ. ಆಗಸ್ಟ್ ಮೂರು ಇಲ್ಲವೇ ನಾಲ್ಕನೇ ವಾರ ಚಂದ್ರಯಾನ 3ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ.
ಚಂದ್ರಯಾನ-3 ನೌಕೆ ಲ್ಯಾಂಡರ್​, ರೋವರ್ ಒಳಗೊಂಡಿದೆ. ಚಂದ್ರನ ನೆಲದಲ್ಲಿ ಅಧ್ಯಯನ ನಡೆಸಲು ಇಸ್ರೋ ಕಳಿಸಿರುವ 3ನೇ ನೌಕೆ ಇದಾಗಿದೆ. ನೌಕೆ ಆಗಸ್ಟ್​ 23 ಅಥವಾ 24ರಂದು ಚಂದ್ರನ ಅಂಗಳಕ್ಕೆ ತಲುಪಲಿದೆ
ಒಂದು ವೇಳೆ ನಿಗದಿತ ಸಮಯದಲ್ಲಿ ಅದು ಚಂದ್ರನಅಂಗಳ ಪ್ರವೇಶಿಸಿದರೆ ಚಂದ್ರಯಾನ-3 ಯಶಸ್ವಿ ಆದಂತೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಚಂದ್ರಯಾಣ 3 ಯಶಸ್ವಿ ಉಡಾವಣೆ ಆಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 23 ರಂದು ಸಂಜೆ 5.47 ಕ್ಕೆ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್​ ಹೇಳಿದರು. ಇನ್ನೊಂದೆಡೆ, ಚಂದ್ರನಲ್ಲಿರುವ ಖನಿಜಗಳು, ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನ ನಡೆಸಲು ರೋವರ್‌ನಲ್ಲಿ ಲೇಸರ್‌ ಇಂಡ್ನೂಸ್ಡ್ ಬ್ರೇಕ್‌ಡೌನ್‌ ಸ್ಪೆಕ್ಟ್ರೋಸ್ಕೋಪ್‌ ಮತ್ತು ಆಲ್ಫಾ ಪಾರ್ಟಿಕಲ್‌ ಎಕ್ಸ್‌ರೇ ಸ್ಪೆಕ್ಟ್ರೋ ಮೀಟರ್‌ ಅಳವಡಿಕೆಯಾಗಿದೆ. 

ಅದೇ ರೀತಿ ಉಪಗ್ರಹವು ಚಂದ್ರನಲ್ಲಿರುವ ನೀರಿನ ಅಂಶದ ಕುರಿತು ಅಧ್ಯಯನ ನಡೆಸಲಿದೆ. ಪ್ರಮುಖವಾಗಿ ಚಂದ್ರನ ದಕ್ಷಿಣ ಧ್ರುವದ ಕತ್ತಲಿನ ಭಾಗದ ಅನ್ವೇಕ್ಷಣೆ ನಡೆಸಲಿದ್ದು, ಅದರ ಮೇಲ್ಮೈಯನ್ನು ಅಧ್ಯಯನ ನಡೆಸಲಿದೆ. ಈ ಯೋಜನೆಯ ಮೂಲಕ ಚಂದ್ರನಲ್ಲಿ ನೀರು ಇರುವ ಸ್ಥಳವನ್ನು ಪತ್ತೆ ಮಾಡಲು, ನೀರಿನ ಪ್ರಮಾಣ ತಿಳಿಯಲು, ಚಂದ್ರನ ಕತ್ತಲಿನ ಭಾಗದ ಅನ್ವೇಕ್ಷಣೆ, ಖನಿಜಗಳ ಅಧ್ಯಯನ ಸೇರಿದಂತೆ ಚಂದ್ರನ ವೈಜ್ಞಾನಿಕ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ. 

ಇದುವರೆಗೂ ಅಮೆರಿಕ, ರಷ್ಯಾ, ಚೀನಾ ಮಾತ್ರ ಚಂದ್ರನಲ್ಲಿ ಯಶಸ್ವಿಯಾಗಿ ತಮ್ಮ ನೌಕೆಗಳನ್ನು ಇಳಿಸಿವೆ. ಚಂದ್ರಯಾನ-3 ಯಶಸ್ವಿಯಾದರೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿ ಹೆಮ್ಮೆಯ ಭಾರತ ಎನ್ನಿಸಿಕೊಳ್ಳುತ್ತದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.