ಕಳ್ಳನ ಹಾಗೆ ಎಸ್ಕೇಪ್ ಆಗುತ್ತಿದ್ದ ಸ್ವಾಮಿಜಿಯನ್ನು ಸಿನಿಮಿಯ ರೀತಿ ಅ.ರೆಸ್ಟ್ ಮಾಡಿದ ಪೋ.ಲೀಸರು

 | 
Hy

ಎಂಎಲ್ಎ ಟಿಕೆಟ್ ಕೊಡಿಸೋದಾಗಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿ ಕೊನೆಗೆ ಸೆರೆ ಸಿಕ್ಕಿದ್ದಾರೆ. ಬಂಧನದ ಭೀತಿಯಿಂದ ಕಾವಿ ತೆಗೆದು ಟೀ ಶರ್ಟ್ ಧರಿಸಿದ್ದ ಅಭಿನವ ಹಾಲಶ್ರೀ ತಮ್ಮ ಒಡಿಸ್ಸಾದ ಕಟಕ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಆಗಾದ್ರೆ ಹಾಲಶ್ರೀ ಟ್ರಾವೆಲ್ ಹಿಸ್ಟರಿ ಹೇಗಿತ್ತು ಗೊತ್ತಾದ್ರೆ ನಿಜಕ್ಕೂ ಕಂಗಾಲಾಗ್ತೀರಿ. ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚನೆ ಪ್ರಕರಣದಲ್ಲಿ ಚೈತ್ರ ಕುಂದಾಪುರ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಮೂರನೆ ಆರೋಪಿ ಕೊನೆಗೂ ಅಂದರ್ ಆಗಿದ್ದಾರೆ. ಪ್ರಕರಣ ದಾಖಲಾಗ್ತಿದ್ದಂತೆ ತಲೆಮರೆಸಿಕೊಂಡಿದ್ದ ಅಭಿನವ ಹಾಲಶ್ರೀ ನಿನ್ನೆ ರಾತ್ರಿ ಒಡಿಸ್ಸಾದ ಕಟಕ್ ರೈಲ್ವೇ ನಿಲ್ದಾಣದಲ್ಲಿ ಸಿಸಿಬಿ ಪೊಲೀಸ್ರಿಗೆ ಸೆರೆ ಸಿಕ್ಕಿದ್ದಾರೆ.

ವಂಚನೆ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಅಭಿನವ ಹಾಲಶ್ರೀ ತುಂಬಾ ಚಾಲಕಿ. ಸಿಸಿಬಿ ಪೊಲೀಸ್ರ ಬಂಧನ ಭೀತಿಯಿಂದ ತಾನು ಧರಿಸಿದ್ದ ಕಾವಿಯನ್ನ ತೆಗೆದು ಟೀ ಶರ್ಟ್ ಧರಿಸಿ ಕಾಶಿಯತ್ತ ಪ್ರಯಾಣ ಬೆಳೆಸಿದ್ರು. ಈ ವೇಳೆ ಸಿಸಿಬಿ ಪೊಲೀಸ್ರ ರವಾನಿಸಿದ್ದ ಪೋಟೋ ಪರಿಶೀಲಿಸಿದ್ದ ಒಡಿಸ್ಸಾ ಪೊಲೀಸ್ರು ಪರಿಶೀಲನೆ ನಡೆಸ್ತಿರಬೇಕಾದ್ರೆ ಹಾಲಶ್ರೀ ಸ್ವಾಮಿ ಪತ್ತೆಯಾಗಿದ್ದು, ಕೂಡ್ಲೇ ವಶಕ್ಕೆ ತೆಗೆದುಕೊಂಡು ಸಿಸಿಬಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. 

ಇತ್ತ ಹಾಲಶ್ರೀ ಬೆನ್ನು ಬಿದ್ದು ಹಿಂದೆಯೇ ಹೊರಟಿದ್ದ ಸಿಸಿಬಿ ವಿಶೇಷ ತಂಡಗಳು ಹಾಲಶ್ರೀಯನ್ನ ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಒಡಿಸ್ಸಾದಲ್ಲಿ ಸೆರೆ ಸಿಕ್ಕೋ ಮುನ್ನ ಅಭಿನವ ಹಾಲಶ್ರೀ ಮೈಸೂರಿನಿಂದ ಹೈದಾರಬಾದ್ ಗೆ ಪ್ರಯಾಣ ಬೆಳೆಸಿ ಶ್ರೀಲೈಲ ಮಠದಲ್ಲಿ ಆಶ್ರಯ ಪಡೆದಿದ್ರು. ಬಳಿಕ ಗಂಜಾಂ ಮಾರ್ಗವಾಗಿ ಪೂರಿಗೆ ತಲುಪಿದ್ದ ಅಭಿನವ ಹಾಲಶ್ರೀ, ಪೂರಿಜಗನ್ನಾಥನ ದರ್ಶನ ಪಡೆದು, ಕೊನಾರ್ಕ್ ಟೆಂಪಲ್ ಗೆ ತಲುಪಿದ್ದ. 

ಅಲ್ಲಿ ದೇವರ ದರ್ಶನ ಪಡೆದ ಅಭಿನವ ಹಾಲಶ್ರೀ ಶ್ರೀಶೈಲ ಸ್ವಾಮೀಜಿಗೆ ಕರೆ ಮಾಡಿ ಕಾಶಿಯತ್ತ ತೆರಳಿ ತಲೆಮರೆಸಿಕೊಳ್ಳುವ ಪ್ಲಾನ್ ನಲ್ಲಿದ್ರು. ಆದ್ರೆ, ಅವ್ರ ಬೆನ್ನು ಬಿದ್ದಿದ್ದ ಸಿಸಿಬಿಗೆ ಸ್ವಾಮೀಜಿ ಖರೀದಿ‌ ಮಾಡಿದ್ದ ರೈಲ್ವೇ ಟಿಕೆಟ್ ನ ಪಿಎನ್ ಆರ್ ನಂಬರ್ ಕ್ಲೂ ನೀಡಿತ್ತು.ಆ ಮಾಹಿತಿ ಆಧಾರದ ಮೇಲೆ ಕಾರ್ಯ ಪ್ರವೃತ್ತರಾದ ಸಿಸಿಬಿ ಟೀಂ ರೈಲ್ವೆ ಸ್ಟೇಷನ್ ಬಳಿ ಹೋಗ್ತಿದ್ದಾಗೆ, ಚಳ್ಳೆ ಹಣ್ಣು ತಿನ್ನಿಸಿದ್ದ ಹಾಲಶ್ರೀ ಟಿಕೆಟ್ ಪಡೆದ ಸ್ಟೇಷನ್ ಬಿಟ್ಟು ಮುಂದಿನ ರೈಲ್ವೇ ಸ್ಟೇಷನ್ ನಲ್ಲಿ ರೈಲು ಹತ್ತಿದ್ರು. ಆದ್ರೆ, ಕೊನೆಗೆ ಕಟಕ್ ರೈಲ್ವೇ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.